ಸುಗ್ಗಿ ರಂಗಸಂಭ್ರಮ-2019

ಗುಬ್ಬಿ

        ರಂಗಭೂಮಿಯ ನಿರ್ವಹಣೆಯ ಪಾಲನೆ ಪೋಷಣೆಗಳು ಇತ್ತೀಚಿನ ದಿನಗಳಲ್ಲಿ ದುಬಾರಿಯಾಗಿದ್ದು ರಂಗಾಸಕ್ತರನ್ನ ಐರಾಣಾಗಿಸುತ್ತಿರುವುದು ನೋವಿನ ವಿಚಾರ, ಆಧುನಿಕ ಮಾರ್ಗಗಳನ್ನ ಅನುಸರಿಸಿದರೆ ಹಳೆ ಬೇರಿಗೆ ಹೊಸ ಚಿಗರು ದೊರೆತರೆ ಮರ ಸೊಗಸು ಎಂಬ ಕವಿವಾಣಿಯಂತೆ ರಂಗಭೂಮಿ ಶ್ರೇಯೋಭಿವೃದ್ಧಿಗೆ ಶ್ರಮಿಸುವುದರ ಜೊತೆಯಲ್ಲೇ ಕಲಾವಿದ ಆರ್ಥಿಕ ಸಂಕಷ್ಟದಿಂದ ಸುಧಾರಿಸಬಹುದೆಂದು ಚಲನಚಿತ್ರ ಹಾಗೂ ರಂಗಭೂಮಿಯ ಹಿರಿಯ ಕಲಾವಿದರಾದ ವದಲೂರು ಗಂಗಾಧರ್ ತಿಳಿಸಿದರು.

       ತಾಲ್ಲೂಕಿನ ದಾಸರಕಲ್ಲಹಳ್ಳಿ ಗ್ರಾಮದಲ್ಲಿ ಕುಸುಮ ಕಲಾಸಂಘ ಮೆಳೇಕಲ್ಲಹಳ್ಳಿ ಆಯೋಜಿಸಿದ್ದ ಸುಗ್ಗಿ ರಂಗಸಂಭ್ರಮ-2019ರ ಮೂರನೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜನಸಾಮಾನ್ಯರಲ್ಲಿ ರಂಗ ಭೂಮಿಯ ಬಗ್ಗೆ ತಾತ್ಸಾರ ಮನೆ ಮಾಡಿದೆ. ಆದರೆ ಕೆಲವು ಆಸಕ್ತರಲ್ಲಿ ಮಾತ್ರ ರಂಗಭೂಮಿಯ ತುಡಿತ ತವಕ ಇದೆಯಾದರು ಅವರೂ ಸಹ ಇಂದಿನ ಪ್ರದರ್ಶನಗಳಿಗೆ ವೆಚ್ಚವನ್ನು ಬರಿಸಲಾಗದೆ ರಂಗಭೂಮಿ ವಿಚಾರ ಬಂದಾಗ  ದೂರ ಸರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಇದರಿಂದ ಹೊರ ಬರಬೇಕಾದರೆ ಪಾತ್ರಗಳ ಔಚಿತ್ಯವನ್ನು ಅರಿತು ಸಾಂಕೇತವಾಗಿ  ಮತ್ತು ಸರಳ ಉಡುಪು, ಸಂಗೀತ, ದೃಶ್ಯಗಳ ಹಾಗೂ ಪರಿಕರಗಳ ಬಳಕೆಯಿಂದ ಪಾತ್ರಗಳಿಗೆ ನ್ಯಾಯ ದೊರಕಿಸ ಬಹುದೆಂದು ತಿಳಿಸಿದರು.

        ರಂಗಕಲಾವಿದ ಕೃಷ್ಣಪ್ಪ  ಮಾತನಾಡಿ  ಪ್ರತಿವರ್ಷ ನಡೆಯುವ ಈ ಕಾರ್ಯಕ್ರಮಗಳ ಸದುಪಯೋಗ ಪಡಿಸುಕೊಂಡು ನಾಡಿನ ಸಂಸ್ಕೃತಿಯನ್ನು ಪುರ್ನಸ್ಥಾಪಿಸುವಲ್ಲಿ ಯುವಜನತೆಯ ಪಾತ್ರ ಪ್ರಮುಖವಾಗಿದ್ದು ಆ ನಿಟ್ಟಿನಿಲ್ಲ ನಾವಿಲ್ಲೆರೂ ಮುನ್ನಡೆಯಬೇಕಾಗಿದೆ ಎಂದರು, ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕ ರತ್ನಕುಮಾರ್, ರಂಗ ಕಲಾವಿದ ರಮೇಶ್ ಮೇಳೆಕಲ್ಲಹಳ್ಳಿ ಇತರರು ಭಾಗವಹಿಸಿದ್ದರು.

       ಬೆಂಗಳೂರಿನ ನಾಟ್ಯಸರಸ್ವತಿ ಶಾಂತಲ ಕನ್ನಡ ಕಲಾ ಸಂಘ ಇವರಿಂದ ಎನ್.ಎಸ್.ರಾವ್ ರವರ ರಣದುಂದುಬಿ ಹಾಗೂ ಕುಸುಮ ಕಲಾಸಂಘ ಮೆಳೇಕಲ್ಲಹಳ್ಳಿಯವರಿಂದ ಇವ್ರೇನ್ರಪ್ಪ ನಮ್ಮವರು ನಾಟಕಗಳು ನೆರೆದ ಪ್ರೇಕ್ಷರನ್ನು ರಂಜನೆಯ ಜೊತೆಗೆ ಚಿಂತನೆಗೆ ಅವಕಾಶ ಮಾಡಿ ಆಮೂಲಕ ಸಮಾಜದ ಬಾಹ್ಯಸಂಬಂಧಗಳ  ಜೊತೆ ಸಮಾತನೆ ಹಾಗೂ ಬಾವೈಕ್ಯತೆಯನ್ನು ಸಾರುತ್ತ ಹಾಸ್ಯದಮೂಲಕ ಹೃದಯಗಳನ್ನ ಹಗುರ ಮಾಡುವಲ್ಲಿ ಯಶಸ್ವಿಯಾದವ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap