ಕ್ಯಾಮರಾ ಬಳಕೆಗೆ ಸೂಕ್ತ ತರಬೇತಿ ನೀಡಲಾಗುವುದು: ಭಾಸ್ಕರ್ ರಾವ್

ಬೆಂಗಳೂರು

    ಕಾನೂನು ಸಂರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುವ ಕ್ಯಾಮೆರಾ ಬಳಕೆ ಸಂಬಂಧ ಪೊಲೀಸರಿಗೆ ಸೂಕ್ತ ತರಬೇತಿ ನೀಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.ಪೊಲೀಸ್ ಇಲಾಖೆಗೆ ಸರ್ಕಾರ ಕ್ಯಾಮೆರಾ ಕೊಡಲು ತಯಾರಿದೆ .ಆದರೆ,ತಂತ್ರಜ್ಞಾನ ಇದ್ದರೆ ಸಾಲದು, ಅದನ್ನು ಸರಿಯಾಗಿ ಬಳಕೆ ಮಾಡುವವರಿಲ್ಲ. ಸಿಸಿ ಕ್ಯಾಮೆರಾಗಳ ಬಳಕೆ ಸಂಬಂಧ ಏನಾದರೂ ಮಾಹಿತಿ ಬೇಕಾದರೂ ಛಾಯಾಗ್ರಾಹಕರಿಂದಲೇ ಪಡೆಯುತ್ತೇವೆ ಎಂದರು.

      ಗಾಂಧಿ ಭವನ ಸಭಾಂಗಣದಲ್ಲಿ ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘ ಆಯೋಜಿಸಿದ್ದ, ವಿಡಿಯೋ ಮಿಕ್ಸಿಂಗ್ ಯೂನಿಟ್ ಸಂಕಲನಕಾರರು ಅನುಭವಿಸುತ್ತೀರುವ ಸಮಸ್ಯೆಗಳ ಬಗ್ಗೆ ಇದೇ ಮೊದಲ ಬಾರಿಗೆ ನೇರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ನಮ್ಮ ಇಲಾಖೆಯಲ್ಲಿ ನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಒಬ್ಬೊಬ್ಬರು ಛಾಯಾಗ್ರಾಹಕನ ಅಗತ್ಯವಿದೆ ಎಂದರು,
ಈ ನಿಟ್ಟಿನಲ್ಲಿ ಸಂಘದಿಂದ ಎರಡು ದಿನಗಳ ತರಬೇತಿ ಕಾರ್ಯಾಗಾರ ನಡೆಸಬೇಕು.ಜತೆಗೆ, ಪೊಲೀಸರಿಗೆ ತರಬೇತಿ ಮೂಲಕ ಉತ್ತಮ ಛಾಯಾಚಿತ್ರ ತೆಗೆಯಲು ಕಲಿಸಬೇಕಿದೆ.

       ಬೆಂಗಳೂರು ನಗರ ಅತಿ ವೇಗವಾಗಿ ಮುಂದುವರಿಯುತ್ತಿದೆ. ಇಂತಹ ಸಂದರ್ಭದಲ್ಲಿ ನಗರದಲ್ಲಿ ಹೊಸ ತಂತ್ರಜ್ಞಾನ ಬಳಕೆ ಸಂಬಂಧ ತರಬೇತಿಗಳನ್ನು ಸಂಘದಿಂದ ನಡೆಯಲಿ ಎಂದು ನುಡಿದರು.ಕೆಲವೊಂದು ಹುದ್ದೆಗಳು ಮುಗಿಯುತ್ತವೆ. ಆದರೆ, ಕೆಲವೊಂದು ಸೂರ್ಯನಂತೆ ಬೆಳಗುತ್ತಿರುತ್ತವೆ. ಛಾಯಾಚಿತ್ರಗಾರ ಹುದ್ದೆ ಸಹ ಯಾವಾಗಲೂ ಪ್ರಜ್ವಲಿಸುತ್ತಿರುತ್ತದೆ. ಛಾಯಾಗ್ರಾಹಕರಿಂದ ಹಲವು ಸಾಫ್ಟ್‌ವೇರ್ ಗಳು, ತಂತ್ರಜ್ಞಾನ ಅಭಿವೃದ್ಧಿ ಆಗಿದೆ.

       ಎಷ್ಟೇ ತಂತ್ರಜ್ಞಾನ ಇದ್ದರೂ ಕೌಶಲ್ಯರಹಿತ ಛಾಯಾಚಿತ್ರ ಗುಣಮಟ್ಟವಿರಲ್ಲ. ಕೌಶಲ್ಯ ಛಾಯಾಗ್ರಾಹಕನೊಳಗೆ ಇರುತ್ತದೆ ಎಂದು ಭಾಸ್ಕರ್ ರಾವ್ ಅಭಿಪ್ರಾಯಪಟ್ಟರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link