ಹಿರಿಯೂರು.
ಖ್ಯಾತ ಲೇಖಕ ಹಾಗೂ ಬರಹಗಾರರಾದ ಡಿ.ಸಿ.ಪಾಣಿಯವರು ತಮ್ಮದೇ ಕಾದಂಬರಿ ಆಧರಿಸಿ ನಿರ್ಮಿಸಿ, ನಿರ್ದೇಶಿಸುತ್ತಿರುವ ‘ಸುಳಿವು’ ಹೆಸರಿನ ಚಲನಚಿತ್ರದ ಮೊದಲ ಹಂತದ ಚಿತ್ರಣ ನಗರದಲ್ಲಿ ಪೂರ್ಣಗೊಂಡಿದೆ.
ಯುಗಾದಿ ಹಬ್ಬ ಮುಗಿದ ನಂತರ ಎರಡನೇ ಹಂತದ ಚಿತ್ರೀಕರಣವನ್ನು ಆರಂಭಿಸುವುದಾಗಿ ಸುದ್ದಿಗಾರರಿಗೆ ತಿಳಿಸಿದ ಪಾಣಿ, ತನ್ನದು ಕಡಿಮೆ ಬಜೆಟ್ ಚಿತ್ರ. ಸಂಪೂರ್ಣವಾಗಿ ಹೊಸ ಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿದೆ. ಬೆಂಗಳೂರಿನ ಬಾಲಕೃಷ್ಣ ಮತ್ತು ದಾವಣಗೆರೆಯ ಭಾಷಾ ನಾಯಕ ಪಾತ್ರಗಳಲ್ಲಿ, ಬೆಂಗಳೂರಿನ ಶಿರೀಷ, ಹೊಸದುರ್ಗದ ಇಂದು ನಾಯಕಿಯರು. ಹಿರಿಯೂರಿನ ರಮೇಶ್ ವಕೀಲರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಪರಶುರಾಮ್ ಮುಖ್ಯ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ ಎಂದು ವಿವರಿಸಿದರು.ನಗರದ ಮನೆಯೊಂದರಲ್ಲಿ ನಡೆದ ‘ಸುಳಿವು’ ಚಲನಚಿತ್ರದ ಚಿತ್ರೀಕರಣದಲ್ಲಿ ನಾಯಕ ನಟ ಬಾಲಕೃಷ್ಣ, ನಾಯಕಿ ಇಂದು, ವಕೀಲ ಪಾತ್ರಧಾರಿ ರಮೇಶ್, ಮತ್ತೊಂದು ಪಾತ್ರದಲ್ಲಿ ಪರಶುರಾಂ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
