ಸುಳ್ಳು ಹೇಳೊರನ್ನ ತಿರಸ್ಕರ್ಸಿ, ಕೆಲಸ ಮಾಡೊರನ್ನ ಗೆಲ್ಸಿ

ದಾವಣಗೆರೆ :

        ಸುಳ್ಳು ಹೇಳಿ ಅಧಿಕಾರ ನಡೆಸುವವರನ್ನು ಮನೆಗೆ ಕಳುಹಿಸಿ ಸದಾ ತಮ್ಮ ಕಷ್ಟಕ್ಕೆ ಸ್ಪಂದಿಸುವ ಕೆಲಸಗಾರರನ್ನು ಬೆಂಬಲಿಸಬೇಕೆಂದು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಕರೆ ನೀಡಿದರು.

        ಜಿಲ್ಲೆಯ ಜಗಳೂರು ತಾಲೂಕಿನ ಸೊಕ್ಕೆ, ಗುರುಸಿದ್ದಾಪುರ, ಹೊಸಕೆರೆ, ಕೆಚ್ಚೇನಹಳ್ಳಿ, ಹನುಮಂತಾಪುರ ಹಾಗೂ ಜಗಳೂರು ಪಟ್ಟಣಗಳಲ್ಲಿ ಲೋಕಸಭಾ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರ ಪರವಾಗಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

         22 ಕೆರೆಗಳಿಗೆ ನೀರುತುಂಬಿಸುವ ಯೋಜನೆಯನ್ನು ಅವೈಜ್ಞಾನಿಕವಾಗಿಸಿದ್ದರಿಂದ ಕೆರೆಗಳಿಗೆ ನೀರುತುಂಬಿಸಲು ಅನಾನುಕೂಲವಾಗಿತ್ತು. ರೈತರ ಹಿತದೃಷ್ಟಿಯಿಂದ ಪ್ರತ್ಯೇಕ ಮೋಟಾರ್‍ಗಳನ್ನು ಅಳವಡಿಸಿ ನದಿಯಲ್ಲಿ ನೀರಿನ ಹರಿವು ಕಡಿಮೆ ಇದ್ದಗಲೂ ಸಹ ಕೆರೆಗಳಿಗೆ ನೀರು ಸರಬರಾಜು ಮಾಡಲಾಯಿತು. ಆದರೆ, ಕೆರೆಗಳಿಗೆ ನೀರು ಹರಿಸದೇ ರೈತರಿಗೆ ದ್ರೋಹ ಎಸಗಿದ ಬಿಜೆಪಿಯವರು ಇಂದು ಚುನಾವಣೆ ಬಂದಾಗ ತಮಗೆ ಮತ ಕೇಳಲು ಮುಖ ಇಲ್ಲವೆಂದು ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ ಅಂತಹವರನ್ನು ಮತದಾರರು ಮನೆ ಕಳುಹಿಸಬೇಕೆಂದು ಮನವಿ ಮಾಡಿದರು.

         ಜಗಳೂರು ತಾಲ್ಲೂಕಿನ 56 ಕೆರೆಗಳಿಗೆ ನೀರೋದಗಿಸುವ ಕಾರ್ಯಕ್ಕೆ ಮೊದಲು ನಾಂದಿ ಹಾಡಿದ್ದು ಕಾಂಗ್ರೆಸ್ ಸರ್ಕಾರ. ಕಳೆದ ಬಜೆಟ್‍ನಲ್ಲಿ ಈ ಯೋಜನೆ ಘೋಷಣೆ ಆಗಿದ್ದು, ಶೀಘ್ರ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಆದರೆ ಈ ಯೋಜನೆಯನ್ನು ನಾವೇ ಮಾಡಿದ್ದು ಎಂದು ಬಿಜೆಪಿಗರು ಹೇಳುತ್ತಾ ಸುಳ್ಳಿನ ವ್ಯೂಹ ಸೃಷ್ಟಿ ಮಾಡಲು ಹೊರಟಿದ್ದಾರೆ ಎಂದು ದೂರಿದರು.

         ಇದೇ ವೇಳೆ ಕಾಂಗ್ರೆಸ್ ಮೈತ್ರಿಕೂಟದಅಭ್ಯರ್ಥಿ ಹೆಚ್.ಬಿ.ಮಂಜಪ್ಪ, ಮಾಜಿ ಶಾಸಕರಾದ ಹೆಚ್.ಪಿ.ರಾಜೇಶ್, ಕೆಪಿಸಿಸಿ ಎಸ್ ಟಿ ಘಟಕದ ಕೆ.ಪಿ.ಪಾಲಯ್ಯ ಮತ್ತಿತರರು ಮಾತನಾಡಿದರು.

         ಈ ಸಂದರ್ಭದಲ್ಲಿ ಪ್ರಚಾರ ಸಮಿತಿಅಧ್ಯಕ್ಷ ಶಾಮನೂರುಟಿ.ಬಸವರಾಜ್, ಬ್ಲಾಕ್‍ಕಾಂಗ್ರೆಸ್‍ಅಧ್ಯಕ್ಷತಿಪ್ಪೇಸ್ವಾಮಿಗೌಡ, ಕಲ್ಲೇಶ್‍ರಾಜ್ ಪಟೇಲ್, ಜೆಡಿಎಸ್ ಮುಖಂಡಕಲ್ಲೇರುದ್ರೇಶ್, ಪಲ್ಲಾಗಟ್ಟೆ ಶೇಖರಪ್ಪ, ಭೈರೇಶ್, ವೇಣುಗೋಪಾಲ ರೆಡ್ಡಿ, ಹೆಚ್.ಬಿ.ಪರಶುರಾಮಪ್ಪ, ತುರ್ಚಗಘಟ್ಟದ ಬಸವರಾಜಪ್ಪ, ಮುದೇಗೌಡ್ರ ಗಿರೀಶ್, ಕರಿಬಸಪ್ಪ, ಪರಶುರಾಮಪ್ಪ ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link