ಚಿತ್ರದುರ್ಗ
17 ನೇಲೋಕಸಭಾ ಚುನಾವಣೆಗೆ ಇಂದು ಬಿ.ಎನ್.ಚಂದ್ರಪ್ಪ ಕಾಂಗ್ರೇಸ್ ಪಕ್ಷದ ವತಿಯಿಂದ ನಾಮಪತ್ರ ಸಲ್ಲಿಸಿದರು.
ನಗರದ ಕನಕ ವೃತ್ತದಿಂದ ಸಾವಿರಾರು ಅಭಿಮಾನಿಗಳ ಜೊತೆಗೂಡಿ ಮೆರವಣಿಗೆ ಮೂಲಕ ಬಂದ ಮೈತ್ರಿ ಸರ್ಕಾರದ ಅಧಿಕೃತ ಅಭ್ಯರ್ಥಿಯಾದ ಚಂದ್ರಪ್ಪ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎನ್.ಚಂದ್ರಪ್ಪ, 17 ನೇ ಲೋಕಸಭಾ ಚುನಾವಣೆಗೆ ಮೈತ್ರಿ ಸರ್ಕಾರದವತಿಯಿಂದ ನಾನು ಇಂದು ನಾಮಪತ್ರ ಸಲ್ಲಿಸಿದ್ದೆನೆ.ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ, ಗೋವಿಂದಪ್ಪ, ಯಶೋಧರ್, ಆಂಜನೇಯ ಸೇರಿದಂತೆ ಶೀರಾ, ಪಾವಗಡ ತಾಲ್ಲೂಕಿನ ಸಾಕಷ್ಟು ಜನ ಮುಖಂಡರು ಮೆರವಣಿಗೆಯಲ್ಲಿ ಭಾಗಿಯಾಗಿದ್ದು, ಅಭೂತ ಪೂರ್ವವಾದ ಬೆಂಬಲವನ್ನು ನೀಡಿದ್ದಾರೆ ಎಂದರು.
ಕಳೆದ 5 ವರ್ಷದ ಅಧಿಕಾರಾವಧಿಯಲ್ಲಿ ನಾನು ಉತ್ತಮ ಆಡಳಿತ ನಡೆಸಿದ್ದು, ಇದೆ ನನ್ನ ಗೆಲುವಿಗೆ ವರದಾನವಾಗಲಿದೆ ಕಳೆದ ಭಾರಿ ಹೊಸದಾಗಿ ಬಂದಂತಹ ನನಗೆ ಜಿಲ್ಲೆಯ ಮಾಹಿತಿ ಇರಲಿಲ್ಲ.ಈಗ ಜಿಲ್ಲೆಯ ಪ್ರತಿ ಹಳ್ಳಿ ಹಳ್ಳಿಯಲ್ಲೂ ಪ್ರವಾಸ ಮಾಡಿದ್ದು, ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದರು.
ನಾನು ಸುಳ್ಳು ಹೇಳುವ ವ್ಯಕ್ತಿ ಅಲ್ಲ ಎಂದು ಜನರೇ ಹೇಳುತ್ತಾರೆ ಅವರ ಕಷ್ಟಗಳಿಗೆ ನಾನು ಸ್ಪಂದಿಸಿ ಕೆಲಸ ಮಾಡಿದ್ದೆನೆ ಎಂದ ಅವರು ಕಳೆದ ಭಾರಿ ಜಿಲ್ಲೆಯಲ್ಲಿ ಮೋದಿ ಹಾವಾ ಇತ್ತು ಆಗಲೇ ನನಗೆ ಜಿಲ್ಲೆಯ ಜನತೆ ಅತಿ ಹೆಚ್ಚು ಬಹುಮತಗಳಿಂದ ಗೆಲ್ಲಿಸಿದ್ದಾರೆ ಈ ಭಾರಿ ಇಲ್ಲಿ ಯಾವುದೇ ಮೋದಿ ಹಾವಾ ಇಲ್ಲ.
ಇಲ್ಲಿ ಮೈತ್ರಿ ಹಾವಾ ಇದೆ. ಸಿದ್ದರಾಮಯ್ಯ, ದೇವೆಗೌಡ, ಕುಮಾರಸ್ವಾಮಿ ಹಾವಾ ಇದ್ದು ನನ್ನ ಗೆಲುವು ಖಚಿತ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ವೆಂಕಟರಮಣಪ್ಪ ಮಾತನಾಡಿ, ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ತುಮಕೂರಿನಲ್ಲಿ ಮುದ್ದ ಹನುಮೇಗೌಡ ನಾಮ ಪತ್ರಸಲ್ಲಿಸುತ್ತಾರೆ. ಆದರೆ ವಾಪಸ್ಸು ತೆಗೀತಾರೆ ಮತ್ತು ನಮ್ಮ ದೇವೆಗೌಡರಪರ ಪ್ರಚಾರ ಮಾಡುತ್ತಾರೆ ಎಂದು ಹೇಳಿದರು.
ಮುದ್ದ ಹನುಮೇಗೌಡ ಉತ್ತಮ ಕೆಲಸ ಮಾಡಿದ್ದಾರೆ ಆದರೆ ಮೈತ್ರಿ ಧರ್ಮದಿಂದ ಇಲ್ಲಿ ದೇವೆಗೌಡ ಟೀಕೆಟ್ ಸಿಕ್ಕಿದೆ. ಮನವೊಲಿಕೆ ಮಾಡುತ್ತೇವೆ ಚಿತ್ರದುರ್ಗದಲ್ಲಿಯೂ ನಮ್ಮ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಕಳೆದ ಸಾತಿಯೇ ಕ್ಥ ಹಿಡಿದ ಮತದಾರರು ಈ ಬಾರಿ ಕ್ಯ ಬಿಡುವುದಿಲ್ಲ ಎಂಬ ನಂಬಿಕೆ ಇದೆ ಎಂದು ಸಚಿವರು ತಿಳಿಸಿದರು.ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಯಶೋದರ,ಮಾಜಿ ಶಾಸಕ ಗೋವಿಂದಪ್ಪ, ಶಾಸಕ ರಘುಮೂರ್ತಿ ಸೇರಿದಂತೆ ಇತರೆ ಮುಖಂಡರು ಭಾಗವಹಿಸಿದ್ದರು