ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರತರಲು ರಂಗ ತರಭೇತಿ ಸಹಕಾರಿ :ಶಂಕರಹಲಗತ್ತಿ

ಗುಬ್ಬಿ

      ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊತರಲು ಬೇಸಿಗೆ ರಂಗ ತರಭೇತಿ ಶಿಭಿರಗಳು ಹೆಚ್ಚು ಸಹಕಾರಿಯಾಗಲಿದ್ದು ಮಕ್ಕಳು ಬೇಸಿಗೆ ರಜೆ ಅವಧಿಯಲ್ಲಿ ಇಂತಹ ಶಿಭಿರಗಳಲ್ಲಿ ಸಕ್ರೀಯವಾಗಿ ಭಾಗವಹಿಸುವ ಮೂಲಕ ಆಧರ್ಶ ವಿದ್ಯಾರ್ಥಿಗಳಾಗಿ ರೂಪುಗೊಳ್ಳುವಂತೆ ಕರ್ನಾಟಕ ಬಾಲ ವಿಕಾಸ ಅಕಾಡಮಿ ಮಾಜಿ ಅಧ್ಯಕ್ಷ ಶಂಕರಹಲಗತ್ತಿ ಕರೆನೀಡಿದರು.

      ಪಟ್ಟಣದ ಡಾ:ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ಏರ್ಪಡಿಸಿದ್ದ ಬಾಲವಿವರ್ಧಿನಿ ಮಕ್ಕಳ ಬೇಸಿಗೆ ರಂಗ ತರಭೇತಿ ಶಿಭಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಮಕ್ಕಳ ಅಭಿರುಚಿಗನುಗುಣವಾಗಿ ಶಿಕ್ಷಣ, ಕಲೆ ಮತ್ತು ಸಂಸ್ಕೃತಿಯನ್ನು ಕಲಿಸುವ ಮೂಲಕ ಅವರನ್ನು ಸುಸಂಸ್ಕೃತ ವ್ಯಕ್ತಿಗಳನ್ನಾಗಿ ಮಾಡುವತ್ತ ಪೋಷಕರು ಚಿಂತನೆ ನಡೆಸಬೇಕಿದೆ ಎಂದರು.

      ಆಧುನೀಕತೆ ಬೆಳೆದಂತೆ ಮರೆಯಾಗುತ್ತಿರುವ ನಮ್ಮ ರಂಗ ಕಲೆಗಳನ್ನು ಉಳಿಸಿ ಬೆಳೆಸಲು ಮತ್ತು ಇಂದಿನ ಮಕ್ಕಳಿಗೆ ಕಲೆಗಳ ಬಗ್ಗೆ ಆಸಕ್ತಿ ಮೂಢಿಸಲು ಬೇಸಿಗೆ ರಂಗ ತರಬೇತಿ ಶಿಭಿರಗಳು ಹೊಸ ಆಯಾಮ ನೀಡಲಿದ್ದು ಡಾ:ಗುಬ್ಬಿ ವೀರಣ್ಣ ಟ್ರಸ್ಟ್ ಇಂತಹ ಶಿಭಿರಗಳನ್ನು ನಡೆಸುವ ಮೂಲಕ ಮಕ್ಕಳಿಗೆ ರಂಗ ತರಭೇತಿ ಸೇರಿದಂತೆ ಮುಖವಾಡ ತಯಾರಿಕೆ, ಮಣ್ಣಿನ ಕಲಾಕೃತಿಗಳ ರಚನೆ, ಗ್ರಾಮೀಣ ಕಲೆಗಳಾದ ನೃತ್ಯ, ಕೋಲಾಟ, ಡೊಳ್ಳು ಕುಣಿತ ಸೇರಿದಂತೆ ಹಲವು ಪ್ರಾಕಾರಗಳ ಬಗ್ಗೆ ಸಮಗ್ರವಾದ ತರಭೇತಿಯನ್ನು ರಂಗ ತಜ್ಞರಿಂದ ಕೊಡಿಸಿದ್ದು  ಮೆಚ್ಚುವಂತಹದ್ದಾಗಿದೆ ಇಂತಹ ಶಿಭಿರಗಳು ನಿರಂತರವಾಗಿ ನಡೆಯುವಂತಹ ಉತ್ತಮ ಕಾರ್ಯವನ್ನು ಟ್ರಸ್ಟ್ ಮಾಡಲಿ ಎಂದು ತಿಳಿಸಿದರು.

       ಡಾ:ಗುಬ್ಬಿ ವೀರಣ್ಣ ಟ್ರಸ್ಟ್ ಅಧ್ಯಕ್ಷೆ ಡಾ:ಬಿ.ಜಯಶ್ರೀ ಮಾತನಾಡಿ ಕಳೆದ ಒಂದು ತಿಂಗಳುಗಳ ಕಾಲ ರಂಗ ಮಂದಿರದಲ್ಲಿ ತರಭೇತಿ ಶಿಭಿರವನ್ನು ನಡೆಸಲಾಗಿದ್ದು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಶಿಭಿರದ ಪ್ರಯೋಜನ ಪಡೆದುಕೊಂಡಿದ್ದಾರೆ. ಟ್ರಸ್ಟ್ ವತಿಯಿಂದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಾಟಕೋತ್ಸವಗಳನ್ನು ನಡೆಸುವುದರ ಜೊತೆಗೆ ಮಕ್ಕಳಿಗೆ ವಿಶೇಷ ರಂಗ ತರಭೇತಿ ಮತ್ತು ಮಾರ್ಗಧರ್ಶನಗಳನ್ನು ನೀಡಲಾಗುತ್ತಿದೆ

        ಪ್ರತಿ ವರ್ಷ ನಿರಂತರವಾಗಿ ಬೇಸಿಗೆ ರಂಗ ತರಭೇತಿ ಶಿಭಿರವನ್ನು ಆಯೋಜಿಸಲಾಗುತ್ತಿದ್ದು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಶಿಭಿರದ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದ ಅವರು ಡಾ.ಗುಬ್ಬಿ ವೀರಣ್ಣ ಟ್ರಸ್ಟ್ ರಂಗ ದಿಗ್ಗಜ ಡಾ.ಗುಬ್ಬಿ ವೀರಣ್ಣನವರ ರಂಗಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ದೃಷ್ಠಿಯಿಂದ ಟ್ರಸ್ಟ್ ವತಿಯಿಂದ ಇದುವರೆಗೆ ಗುಬ್ಬಿಯಲ್ಲಿ ರಂಗಮಂದಿರದಲ್ಲಿ ಹವ್ಯಾಸಿ ನಾಟಕೋತ್ಯವ, ಪೌರಾಣಿಕ ನಾಟಕೋತ್ಯವ, ಮಕ್ಕಳ ನಾಟಕೋತ್ಸವ ಹಾಗೂ ಜಾನಪದ ನಾಟಕೋತ್ಸವಗಳ ಜೊತೆಗೆ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ನಾಟಕೋತ್ಸವಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ರಂಗ ನಾಟಕಗಳನ್ನು ನಡೆಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

       ತಹಸಿಲ್ದಾರ್ ಎಂ.ಮಮತಾ ಮಾತನಾಡಿ ಇಂದಿನ ಮಕ್ಕಳಿಗೆ ಶಿಕ್ಷಣದ ಜೊತೆಗೆ ರಂಗ ಕಲೆಗಳು ಸೇರಿದಂತೆ ವಿವಿಧ ಜಾನಪದ ಕಲೆಗಳ ಬಗ್ಗೆ ಸಮಗ್ರವಾದ ಮಾಹಿತಿ ಮಾಗ್ರ್ಧನದ ಅವಶ್ಯಕತೆ ಇದ್ದು ಟ್ರಸ್ಟ್ ವತಿಯಿಂದ ಒಂದು ತಿಂಗಳ ಕಾಲ ನಡೆಸಿದ ಬೇಸಿಗೆ ರಜೆಯ ರಂಗ ತರಭೇತಿ ತರಭೇತಿ ಶಿಭಿರದಲ್ಲಿ ನಾಟಕ, ಮಲ್ಲಕಂಬ, ಜಾನಪದ ನೃತ್ಯ ಮತ್ತು ಡೊಳ್ಳುಕುಣಿತಗಳ ಕಲಾ ಪ್ರಾಕಾರಗಳ ತರಬೇತಿಯನ್ನು ನುರಿತ ತಜ್ಞ ಕಲಾವಿದರಿಂದ ಕಲಿತುಕೊಂಡಿದ್ದು ಇಂತಹ ಕಲೆಗಳನ್ನು ಶಾಶ್ವತವಾಗಿ ಉಳಿಸಿ ಬೆಳೆಸುವತ್ತ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ತಿಳಿಸಿದರು.

      ಸಂಪನ್ಮೂಲ ವ್ಯಕ್ತಿಯಾಗಿ ಪದ್ಮ ಶ್ರೀಜೋಸಲ್ಮಾರ್ ಮಾತನಾಡಿ ಕಳೆದ ಒಂದು ತಿಂಗಳಿಂದ ಮಕ್ಕಳಿಗೆ ವಿವಿಧ ಪ್ರಾಕಾರಗಳ ಬಗ್ಗೆ ಸಮಗ್ರವಾದ ತರಬೇತಿ ನೀಡಿದ್ದು ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದ ಅವರು ಗ್ರಾಮೀಣ ಮಕ್ಕಳಲ್ಲಿನ ಸಂಕುಚಿತ ಮನೋಭಾವ ಹೋಗಲಾಡಿಸಲು ಮತ್ತು ಮಕ್ಕಳಲ್ಲಿ ಕ್ರೀಯಾತ್ಮಕತೆ ಬೆಳೆಸಲು ಉತ್ತಮ ತರಭೇತಿ ನೀಡಲಾಗಿದೆ ಎಂದು ತಿಳಿಸಿದರು.
ಸಂಪನ್ಮೂಲವ್ಯಕ್ತಿಗಳಾದ ದೊರೆರಾಜು ಗ್ರಾಮೀಣ ಪ್ರಕಾರಗಳ ಬಗ್ಗೆ, ದಾದಾಪೀರ್ ಮಲ್ಲಗಂಭದ ಬಗ್ಗೆ, ಸ್ನೇಹ ಕಪ್ಪಣ್ಣ ಜಾನಪದ ಕಲೆಗಳ ಬಗ್ಗೆ ತರಭೇತಿ ನೀಡಿದ್ದಾರೆ.

       ಕಳೆದ ಒಂದು ತಿಂಗಳಿಂದ ತರಭೇತಿ ಪಡೆದ ಮಕ್ಕಳು ನಾಟಕ, ರಂಗ ಕಲೆ, ಡೊಳ್ಳು ಕುಣಿತ ಮುಂತಾದ ಕಲೆಗಳನ್ನು ಅತ್ಯುತ್ತಮವಾಗಿ ಸಾದರ ಪಡಿಸಿದರು.ಕಾರ್ಯಕ್ರಮದಲ್ಲಿ ಟ್ರಸ್ಟ್ ಸದಸ್ಯರಾದ ಡಾ:ರಾಜೇಶ್ ಗುಬ್ಬಿ, ಕಾಡಶೆಟ್ಟಿಹಳ್ಳಿ ಸತೀಶ್, ಕುಮಾರ್ ಗುಬ್ಬಿವೀರಣ್ಣ, ಆನಂದರಾಜು ಮುಂತಾದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap