ಬೆಂಗಳೂರು ಪೊಲೀಸರಿಗೆ ಧನ್ಯವಾದ ಹೇಳಿದ ಸನ್ನಿ ಲಿಯೋನ್!

ಬೆಂಗಳೂರು

        ನಗರದ ಮಾನ್ಯತಾ ಟೆಕ್‍ಪಾರ್ಕ್‍ನಲ್ಲಿ ಶನಿವಾರ ರಾತ್ರಿ ನಡೆದ ಸನ್ನಿ ನೈಟ್ ಕಾರ್ಯಕ್ರಮವು ಸುಗಮವಾಗಿ ನಡೆಯಲು ಕಾರಣರಾದ ನಗರ ಪೊಲೀಸರಿಗೆ ಬಾಲಿವುಡ್‍ನ ಹಾಟ್ ಬೆಡಗಿ ನಟಿ ಸನ್ನಿ ಲಿಯೋನ್ ಧನ್ಯವಾದಗಳನ್ನು ತಿಳಿಸಿದ್ದಾರೆ.

        ನಟಿ ಸನ್ನಿ ಲಿಯೋನ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ವಿಡಿಯೋವನ್ನು ಹರಿಬಿಟ್ಟು ಬೆಂಗಳೂರು ನಗರ ಪೆÇಲೀಸರು ಅದ್ಭುತವಾಗಿ ಕೆಲಸ ಮಾಡಿ ಸನ್ನಿ ನೈಟ್ ಕಾರ್ಯಕ್ರಮ ಯಶಸ್ವಿಯಾಗಲು ಕಾರಣರಾಗಿದ್ದು ಅವರಿಗೆ ಧನ್ಯವಾದಗಳು ಎಂದು ಟ್ವಿಟ್ ಮಾಡಿದ್ದಾರೆ.

        ಜೊತೆಗೆ ಬಾಲಿವುಡ್ ನಲ್ಲಿ ಭದ್ರತೆಯನ್ನು ನೀಡುವ ಯೂಸುಫ್ ಇಬ್ರಾಹಿಂ ಮತ್ತು ನನ್ನ ತಂಡದವರು ಕೂಡ ಹಾರ್ಡ್ ವರ್ಕ್ ಮಾಡಿದ್ದಾರೆ ಅವರಿಗೆಲ್ಲಾ ಧನ್ಯವಾದಗಳು. ಬೆಂಗಳೂರು ಜನರು ರಾತ್ರಿ ಕಾರ್ಯಕ್ರಮದಲ್ಲಿ ಒಳ್ಳೆಯ ರೀತಿ ನಡೆದುಕೊಂಡಿದ್ದಾರೆ, ಲವ್ ಯು” ಎಂದು ಸನ್ನಿ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

        ನಗರದ ಟೆಕ್ ಪಾರ್ಕ್‍ನಲ್ಲಿ ನಡೆದ ಸನ್ನಿ ನೈಟ್ ಕಾರ್ಯಕ್ರಮಕ್ಕೆ ಮುಂಜಾಗೃತ ಕ್ರಮವಾಗಿ ಸುಮಾರು 300ಕ್ಕೂ ಅಧಿಕ ಪೊಲೀಸರ ಭದ್ರತೆಯನ್ನು ನಿಯೋಜನೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ತಮಗೆ ಭದ್ರತೆ ನೀಡಿದ್ದ ಪೊಲೀಸರಿಗೆ ಸನ್ನಿ ಲಿಯೋನ್ ಧನ್ಯವಾದವನ್ನು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link