ನವದೆಹಲಿ:

ದೇಶದ ಜನರ ಗಮನ ಸೆಳೆದಿರುವ ಮುಜಾಫರಪುರ್ ಶೆಲ್ಟರ್ ಹೋಮ್ ಸೆಕ್ಸ್ ಹಗರಣ ಸಂಬಂಧ ತಲೆ ಮರೆಸಿಕೊಂಡು ಓಡಾಡುತ್ತಿರುವ ಬಿಹಾರ ಮಾಜಿ ಸಚಿವೆ ಮಂಜು ವರ್ಮಾ ಅವರನ್ನು ಬಂಧಿಸದ ಪೊಲೀಸ್ ಇಲಾಖೆಗೆ ಸುಪ್ರೀಂ ಕೋರ್ಟ್ ಚಳಿ ಬಿಡುವಂತೆ ತರಾಟೆಗೆ ತೆಗೆದುಕೊಂಡಿದೆ.
‘ಆಶ್ಚರ್ಯ ಒಬ್ಬ ಕ್ಯಾಬಿನೆಟ್ ಸಚಿವರು ಇನ್ನೂ ರಾಜಾರೋಶವಾಗಿ ಓಡುತ್ತಲೇ ಇದ್ದಾರೆ ,ಸಚಿವರೊಬ್ಬರು ತಲೆ ಮರೆಸಿಕೊಂಡಿದ್ದಾರೆ ಅವರು ಎಲ್ಲಿದ್ದಾರೆ ಎಂಬುದು ಯಾರೊಬ್ಬರಿಗೂ ತಿಳಿದಿಲ್ಲವೇ. ಇದು ಹೇಗೆ ಸಾಧ್ಯ? ಸಚಿವರೊಬ್ಬರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ ಎಂಬುದರ ಗಂಭೀರತೆ ಎಂಥದ್ದು ಎಂದು ನಿಮಗೆ ಗೊತ್ತಿದೆಯೇ. ಇದು ಅತಿ ನಿರ್ಲಕ್ಷದ ಧೋರಣೆ ಎಂದು ನ್ಯಾಯಮೂರ್ತಿ ಮದನ್ ಬಿ.ಲೋಕುರ್ ಅವರು ಬಿಹಾರ ಪೊಲೀಸ್ ಇಲಾಖೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ ಮತ್ತು ಆದಷ್ಟು ಬೇಗನೆ ಸಚಿವರನ್ನು ಪತ್ತೆಮಾಡಿ ಎಂದು ತಾಕೀತು ಮಾಡಿದೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
