ಉಪನೋಂದಣಾಧಿಕಾರಿ ಕಚೇರಿಗೆ ದೀಡಿರ್ ಬೇಟಿ ನೀಡಿದ ಲೋಕಾಯುಕ್ತ

ಹರಪನಹಳ್ಳಿ:

         ಆಸ್ತಿನೊಂದಣಿ, ಋಣಭಾರ ಪತ್ರಗಳು ಸೇರಿದಂತೆ ಇತರೆ ದಾಖಲಾತಿಗಳನ್ನು ತ್ವರಿತ ಗತಿಯಲ್ಲಿ ವಿಲೆವಾರಿ ಮಾಡಬೇಕು, ಸಾರ್ವಜನಿಕರನ್ನು ಅಲೆದಾಡಿಸಬಾರದು ಎಂದು ಲೋಕಾಯುಕ್ತ ಇನ್ಸಪೆಕ್ಟರ್ ಮುಸ್ತಕ ಆಹ್ಮದ್ ಅವರು ಇಲ್ಲಿಯ ಉಪನೋಂದಣಾಧಿಕಾರಿರವರಿಗೆ ಸೂಚಿಸಿದರು.

       ಅವರು ಶುಕ್ರವಾರ ಪಟ್ಟಣದ ಉಪನೋಂದಣಾಧಿಕಾರಿ ಕಚೇರಿಗೆ ದೀಡಿರ್ ಬೇಟಿ ನೀಡಿ ವಿವಿಧ ದಾಖಲಾತಿಗಳನ್ನು ಪರಿಶೀಲಿಸಿದರು. ವಿವಾಹ ನೊಂದಣಿ, ಆಸ್ತಿ ನೊಂದಣಿ, ನಗದು ಪುಸ್ತಕ, ಮುಂತಾದ ದಾಖಲಾತಿಗಳನ್ನು ಪರಿಶೀಲಿಸಿದರು.ಋಣಭಾರ ಪತ್ರ ವಿಲೆವಾರಿ ವಿಳಂಭವಾಗುತ್ತಿದೆ ಎಂಬ ದೂರುಗಳಿವೆ ಎಂದ ಅವರು ಪ್ರತಿಯೊಂದು ಬಂದ ಅರ್ಜಿಗಳನ್ನು ಸಕಾಲ ಯೋಜನೆಯಲ್ಲಿ ನಮೂಧಿಸಿ ನಿಯಮದ ಪ್ರಕಾರ ವಿಲೆವಾರಿ ಮಾಡಲು ಸೂಚಿಸಿದರು.

        ಕಛೇರಿ ಕಟ್ಟಡ ಅತ್ಯಂತ ಶಿಥಿಲಗೊಂಡಿದ್ದು, ಹೊಸ ಕಟ್ಟಡವಾಗಲಿ ಅಥವಾ ಸ್ಥಳಾಂತರ ಮಾಡಲು ಸಾಧ್ಯತೆ ಬಗ್ಗೆ ಚರ್ಚಿಸಿದರು. ಇದಕ್ಕೂ ಪೂರ್ವದಲ್ಲಿ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಆಹ್ವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ
ಅನೇಕ ವರ್ಷಗಳಿಂದ ಖಾತೆ ಬದಲಾವಣೆ ಆಗದೆ ಇರುವುದರ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಸಾರ್ವಜನಿಕರಿಗೆ ಇಂತಹ ಕಡೆಗೆ ಹೋದರೆ ಕೆಲಸವಾಗುತ್ತದೆ ಎಂಬ ಅರಿವು ಇಲ್ಲ ಹಾಗೂ ಅಧಿಕಾರಿಗಳ ಸ್ಪಂದನೆಯು ಅಷ್ಟಕಷ್ಟೆಯಾಗಿದೆ ಆದ್ದರಿಂದ ಕೆಲಸಗಳು ವಿಳಂಭವಾಗುತ್ತಿವೆ ಎಂದು ಹೇಳಿದರು.

         ಪಟ್ಟಣದ ಇಸ್ಲಾಂಪುರದಲ್ಲಿ ಡೋರ್‍ನಂಬರ್(ಖಾತೆ) ಕೊಟ್ಟಿಲ್ಲ ಎಂಬ ದೂರುಗಳ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಹೇಳಿದರು.ಟ್ರಾಪ್, ರೈಡ್ ಈ ಎರಡನ್ನು ಹೊರತುಪಡಿಸಿ ಉಳಿದ ಎಲ್ಲಾ ಅಧಿಕಾರ ನಮ್ಮ ಲೋಕಾಯುಕ್ತ ಸಂಸ್ಥೆಗಿದ್ದು ಎಸಿಬಿಗಿಂತ ನಾವು ಬಿಗಿ ಕ್ರಮ ತೆಗೆದುಕೊಳ್ಳಬಹುದು ಎಂದು ಅವರು ತಿಳಿಸಿದರು.ಲೋಕಾಯುಕ್ತ ಕಚೇರಿ ಸಿಬ್ಬಂದಿ ಮುಖ್ಯಪೇದೆ ಬಸವರಾಜ, ಪ್ರಭಾರಿ ನೋಂದಣಿ ಅಧಿಕಾರಿ ಆನಂದ ಹಾಗೂ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link