ಬೆಂಗಳೂರು:
ಹಲವು ದುಷ್ಕೃತ್ಯ ಪ್ರಕರಣಗಳಲ್ಲಿ ಬೇಕಾಗಿದ್ದ ಉಗ್ರ ಪಿ.ಜೈನುಲುಬ್ದೀನ್‌ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಮುಂದುವರೆಸಿದ್ದಾರೆ.
ಬಾಂಬೆ ಸೆಂಟ್ರಲ್ ಜೈಲಿನಿಂದ ಸಿಸಿಬಿ ಪೊಲೀಸರು ಉಗ್ರನನ್ನು ಬೆಂಗಳೂರಿಗೆ ಕರೆತಂದಿದ್ದು. ಬೆಂಗಳೂರು ಸರಣಿ ಸ್ಪೋಟಕ್ಕೆ ಸಂಬಂಧಿಸಿದಂತೆ ಜೈನುಲುಬ್ದೀನ್ ಮೇಲೆ ಬಾಡಿ ವಾರೆಂಟ್ ನೀಡಲಾಗಿತ್ತು. ಬೆಂಗಳೂರಿನಲ್ಲಿ ನಡೆದ ಬಹುತೇಕ ಎಲ್ಲಾ ಸ್ಪೋಟಗಳಿಗೆ ಸ್ಪೋಟಕ ರವಾನಿಸಿದ ಅನುಮಾನದ ಮೇಲೆ, ಬೆಂಗಳೂರು ಸರಣಿ ಸ್ಪೋಟಕ್ಕೆ ಸಂಬಂಧಿಸದಂತೆ ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆಯಲಾಗಿದೆ.ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನ ನೇತೃತ್ವದಲ್ಲಿ ಮೂವರು ಇನ್ಸಪೆಕ್ಟರ್ ಗಳು 15 ಸಬ್ ಇನ್ಸಪೆಕ್ಟರ್ ಗಳು ತೆರಳಿ ಜೈನುಲುಬ್ದೀನ್‌ನನ್ನು ವಶಕ್ಕೆ ಪಡೆದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








