ಗಾಂದೀಜಿ ಜನ್ಮದಿನದ ನಿಮಿತ್ತ ನಡೆದ ಸ್ವಚ್ಚತಾ ಅಭಿಯಾನ

ತುಮಕೂರು

     ಮಹಾತ್ಮ ಗಾಂದೀಜಿ ಅವರು ದೇಶದ ಸಮಗ್ರತೆಗಾಗಿ ಸದೃಡತೆಗಾಗಿ ಸ್ವಾಂತಂತ್ರ್ಯಕ್ಕಾಗಿ ಅನೇಕ ಅನೇಕ ಹೋರಾಟಗಳನ್ನು ಮಾಡಿ ಪ್ರಪಂಚದಲ್ಲಿ ರಾಷ್ಟ್ರಪಿತ ಅಂತ ಇದ್ದಾರೆ ಅಂದರೆ ಅದು ಮಹಾತ್ಮ ಗಾಂದೀಜಿ ಸತ್ಯವನ್ನು ಅಲ್ಲದೆ ಬೇರೇನು ಆಡಲಿಲ್ಲ ಅಸತ್ಯದ ವಿರುದ್ದ ಹೋರಾಟ ಮಾಡಿದ ಜೀವನವನ್ನೇ ತ್ಯಾಗ ಮಾಡಿದ್ದ ಗಾಂದೀಜಿ ಪ್ರದಾನಿ ಆಗಲಿ ರಾಷ್ಟ್ರಪತಿ ಆಗಲಿ ಆಗಲಿಲ್ಲ ಆದರೆ ಜೀವನ ಪೂರ್ತಿ ದೇಶದ ಜನತೆಗಾಗಿ ಹೋರಾಟ ಮಾಡಿದವರು ಗಾಂದೀಜಿ ಎಮದು ಮಾಜೀ ಶಾಸಕ ಬಿ.ಸುರೇಶಗೌಡ ತಿಳಿಸಿದರು,

     ಇಂದು ತುಮಕೂರು ತಾಲ್ಲೂಕು ಗೂಳೂರು ಗ್ರಾಮದಲ್ಲಿ ನಡೆದ ಮಹಾತ್ಮ ಗಾಂದೀಜಿ ಅವರ ಜನ್ಮದಿನದ ನಿಮಿತ್ತ ನಡೆದ ಸ್ವಚ್ಚತಾ ಅಭಿಯಾನದಲ್ಲಿ ಮಾಜಿ ಶಾಸಕ ಬಿ.ಸುರೇಶಗೌಡ ಭಾಗವಹಿಸಿ ಮಾತನಡಿದರು,

     ಗಾಂದೀಜಿ ಕೂಡಾ ಇಂದಿನ ಚುನಾವಣೆಯಲ್ಲಿ ಸೋಲಿಸುವಂಥ ವ್ಯವಸ್ಥೆ ಈ ದೇಶದಲ್ಲಿ ಇದೆ ಯಾಕೆಂದರೆ ರಾಜಕಾರಣದಲ್ಲಿ ಸೇವೆಗೆ ಹೋರಾಟಗಳಿಗೆ ಪ್ರಾಮಾಣಿಕತೆಗೆ ಸಜ್ಜನಿಕೆಗೆ ಜನ ಮಹತ್ವ ನೀಡುವ ಕಾಲ ದೂರ ಆಗಿದೆ ಗಾಂದೀಜಿಗೆ ನೂರ ಐವತ್ತು ವರ್ಷ ಆದರೂ ಕೂಡಾ ಇಂದಿಗೂ ಎಂದೆಂದಿಗೂ ಅಜರಾಮರ ಪ್ರಪಂಚದ ಅನೇಕರಿಗೆ ಗಾಂದೀಜಿ ಮಾದರೀ ಆಗಿದ್ದಾರೆ ಅಧ್ಯಯನ ಶೀಲರಾಗಿದ್ದಾರೆ, ಎಂದು ಬಿ.ಸುರೇಶಗೌಡ ತಿಳಿಸಿದರು,

     ದೇಶದ ಬಗ್ಗೆ ಕಾಳಜಿ ಇಲ್ಲದಂತೆ ಆಗಿದೆ, ದೇಶಕ್ಕಾಗಿ ನಾವು ಏನಾದರೂ ಮಾಡಬೇಕು ನಿಸ್ವಾರ್ಥ ಸೇವೆಯಿಂದ ಬದುಕನ್ನು ರೂಡಿಸಿಕೊಳ್ಳುವಂತಾಗಬೇಕು,

    ಯುವಕರು ದೇಶದ ಆಸ್ತಿ ಆಗಬೇಕು ನಮ್ಮ ಹಳ್ಳಿಯ ರಸ್ತೆಗಳು ಚರಂಡಿಗಳು ಸ್ವಚ್ಚತೆಯಿಂದ ಇರಬೇಕು ನಮ್ಮ ನಮ್ಮ ಮನೆಯ ಮುಂದೆ ನಾವು ಸ್ವಚ್ಚತೆ ಮಾಡಿಕೊಳ್ಳುವುದು ಆಗಬೇಕು ನಾವು ಪರಾವಲಂಬಿಗಳಾಗಿದ್ದೇವೆ ಗ್ರಾ,ಪಂ ತಾ,ಪಂ ಸರ್ಕಾರದವರು ಬಂದು ಸ್ವಚ್ಚ ಮಾಡಲಿ ಅಂದರೆ ಹೇಗೆ? ಇದರಿಂದ ಅನಾರೊಗ್ಯಕ್ಕೆ ತುತ್ತಾದರೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುವಂತಾದ್ದಾಗಿದೆ, ಇದು ತಪ್ಪಬೇಕು ಇದಕ್ಕೆ ಗ್ರಾಮಸ್ಥರು ಎಚ್ಚೆತ್ತುಕೊಳ್ಳಬೇಕು,

     ಚುನಾವಣೆಯಲ್ಲಿ ನನಗೆ ಸೋಲು ಆಗಿರಬಹುದು ಆದರೆ ತಾವು ಅವಕಾಶ ನೀಡಿದ 10 ವರ್ಷಗಳ ಕಾಲ ಪ್ರಾಮಾಣಿಕವಾಗಿ ಕೆಲಸ ಮಾಡಿ ಕ್ಷೇತ್ರದಲ್ಲಿ ವಿದ್ಯುತ್ ಯೋಜನೆಗಳು ಸಮುದಾಯಭವನಗಳು ಉತ್ತಮ ರಸ್ತೆಗಳು ಹೇಮಾವತಿ ನೀರು ಹರಿಸಲು ಪೈಪು ಲೈನ ಕಾಮಗಾರಿಗಳು ಕೆರೆಗಳಿಗೆ ನೀರು ಹರಿಸಿದ್ದೇನೆ , ಉತ್ತಮ ಶಾಲೆಗಳ ನಿರ್ಮಾಣ ಮಾಡಿರುವ ತೃಪ್ತಿ ಇದೆ ಎಂದು ಸುರೇಶಗೌಡ ತಿಳಿಸಿದರು,

ಸಾಲ ಮನ್ನಾ ಮಾಡದ ಮುಖ್ಯಮಂತ್ರಿ      ಕೇವಲ ಪುಸ್ತಕಗಳಲ್ಲಿ ಸಾಲ ಮನ್ನಾ ನೋಡಿಸುತ್ತಿರುವ ಕುಮಾರಸ್ವಾಮಿ ರೈತರಿಗೆ ಹಸಿ ಹಸಿ ಸುಳ್ಳು ಹೇಳುವಲ್ಲಿ ನಿಸ್ಸೀಮರು ಎಂದು ಬಿ.ಸುರೇಶಗೌಡ ಟೀಕೆ ಮಾಡಿದರು,

     ಸಾಲ ಮನ್ನಾ ಆಗಿದ್ದಲ್ಲಿ ಬ್ಯಾಂಕ್ ನೋಟೀಸ್ ಯಾಕೆ ಕೊಡಬೇಕು, ಇತ್ತೀಚಿಗೆ ಪಾಂಡವಪುರದ ರೈತ ಮುಖ್ಯಮಂತ್ರಿಗಳ ಜನಸ್ಪಂದನಕ್ಕೂ ಬಂದು ಮನವಿ ಮಾಡಿದರೂ ಸ್ಪಂದಿಸದ ಇವರ ದೋರಣೆಯಿಂದ ಬೆಸತ್ತು ಒಂದೇ ಕುಟುಂಬದ 4 ಜನ ಆತ್ಮಹತ್ಯೆ ಮಾಡಿಕೊಂಡರು, ಇದು ನಮ್ಮ ರೈತರಿಗೆ ಈ ಸರ್ಕಾರದ ಕೊಡುಗೆ ಎಂದು

ಬಿ.ಸುರೇಶಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದರು,

     ಲೋಕಸಭಾ ಚುನಾವಣೆ ಮುನ್ನ ಈ ಸರ್ಕಾರ ಬದಲಾಗಲಿದೆ  ಈ ಸರ್ಕಾರ ಹೆಚ್ಚು ದಿನ ಇರೋಲ್ಲ ಇದು ಯಾವಾಗ ಬೇಕಾದರು ಬಿದ್ದು ಹೋಗಬಹುದು, ಒಳಬೇಗುದಿ ಹತ್ತಿ ಉರಿಯುತ್ತಿದ್ದು ಒಂದೇ ದಿನ 700 ಜನರ ವರ್ಗಾವಣೆ ಮಾಡುವ ಎಚ್,ಡಿ ರೇವಣ್ಣ ಅವರಿಗೆ ಸರ್ಕಾರದ ನೀತಿ ನಿಯಮಗಳ ಬಗ್ಗೆ ಕಿಂಚಿತ್ತೂ ಗೌರವ ಇಲ್ಲ ವರ್ಗಾವಣೆ ದಂದೆ ಮಾಡಿಕೊಂಡಿದ್ದಾರೆ, ನಾಡಿನ ಜನತೆ ಎಲ್ಲವನ್ನೂ ಗಮನಿಸುತ್ತಿದ್ದು ಬರುವಂತ ದಿನಗಳಲ್ಲಿ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು,

    ರೈತರ ಪರ ಜನಪರ ಕೆಲಸ ಮಾಡಿ ಎಂದು ಜನ ಅಧಿಕಾರ ಕೊಟ್ಟಿದ್ದಾರೆ ಇದನ್ನು ಅರ್ಥ ಮಡಿಕೊಳ್ಳದ ರೇವಣ್ಣ ಈ ಸರ್ಕಾರ ಎಷ್ಟು? ದಿನ ಇರುತ್ತೋ ಹೋಗುತ್ತೋ ಎಂದು ಏಕಾಏಕಿ ವರ್ಷದ ಮದ್ಯಭಾಗದಲ್ಲಿ ವರ್ಗಾವಣೆ ದಂದೆ ಮಾಡಿಕೊಂಡಿರುವುದು ನಾಚಿಕೆ ಗೇಡಿನ ಸಂಗತಿ ಎಂದರು

     ಗಾಂದೀಜಿ ಜನ್ಮದಿನದಂದು ಸ್ವಚ್ಚತಾ ಆಂದೋಲನಕ್ಕೆ ಕರೆ ನಿಡಿದ ಮೊದಿ ಅವರ ಆಶಯದಂತೆ ನಾವೆಲ್ಲ ಕೆಲಸ ಮಾಡೋಣ ದೇಶದ ಸ್ವಚ್ಚತೆಗೆ ನಮ್ಮ ಕೊಡುಗೆ ಹೆಚ್ಚಾಗಿ ಇರಲಿ ಇದು ಇಂದಿಗೆ ಕೊನೆ ಆಗಬಾರದು ನಿತ್ಯ ನಿರಂತರವಾಗಬೇಕು ಎಂದು ಬಿ.ಸುರೇಶಗೌಡರು ಜನತೆಗೆ ತಿಳಿಸಿದರು,

ಉಪಸ್ಥಿತಿ;- ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ,ಜಿ,ಪಂ ಸದಸ್ಯರಾದ ಗೂಳೂರು ಶಿವಕುಮಾರ್ ನರಸಿಂಹಮೂರ್ತಿ ಶಿವಮ್ಮ ನಾಗರಾಜು, ಅನಿತಾಸಿದ್ದೇಗೌಡ ಗ್ರಾ,ಪಂ ಉಪಾಧ್ಯಕ್ಷರು, ಯುವ ಮುಖಂಡರಾದ ವಿನಯ್ ಪದ್ಮನಾಭ್ ಸುರೇಶ ಸಿದ್ದೇಗೌಡ ಮತ್ತಿತರ ನೂರಾರು ಯುವಕರು ಇದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link