ಮಾಸ್ಟರ್ ಹಿರಣ್ಣಯ್ಯ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಸಾಣೇಹಳ್ಳಿ

      ಇಲ್ಲಿನ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ರಂಗಭೂಮಿಯ ಹಿರಿಯ ನಟ ಮಾಸ್ಟರ್ ಹಿರಣ್ಣಯ್ಯ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. 2000 ನೇ ಇಸವಿಯಲ್ಲಿ ಸಾಣೇಹಳ್ಳಿಯಲ್ಲಿ ಗುಬ್ಬಿವೀರಣ್ಣ ಪ್ರಶಸ್ತಿ ಪುರಸ್ಕೃತರ `ಸಮ್ಮಿಲನ’ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಹಿರಣ್ಣಯ್ಯ ಅತ್ಯಂತ ಸಂತೋಷದಿಂದ ಭಾಗವಹಿಸಿದ್ದರು.

      ಅಂದಿನಿಂದ ಇಂದಿನವರೆಗೂ ಅವರು ನಮ್ಮೊಡನೆ ಅನ್ಯೋನ್ಯವಾದ ಒಡನಾಟ ಇಟ್ಟುಕೊಂಡಿದ್ದರು. ತಮ್ಮ ಪ್ರಸಿದ್ಧ `ಲಂಚಾವತಾರ’ ನಾಟಕವನ್ನು ಸಾಣೇಹಳ್ಳಿಯಲ್ಲಿ ಪ್ರದರ್ಶಿಸಿದ್ದರು. ಹಲವೆಡೆ ಒಂದೇ ವೇದಿಕೆಯ ಮೇಲೆ ಭಾಗವಹಿಸಿದ್ದೆವು. ಕಲಾವಿದರನ್ನು ಮೊದಲು ಜನ ಅನುಮಾನದಿಂದ ನೋಡುವರು. ನಂತರ ಅವಮಾನ ಮಾಡುವರು. ಕೊನೆಯಲ್ಲಿ ಸನ್ಮಾನ ಮಾಡುವರು ಎನ್ನುವ ಅವರ ಮಾತು ಕಲಾವಿದರು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕಾದುದು.

      ಅವರು ರಂಗಭೂಮಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡರು. ರಂಗಭೂಮಿ ಅವರಿಗೆ ಕೇವಲ ಹೊಟ್ಟೆಹೊರೆದು ಕೊಳ್ಳುವ ಸಾಧನವಾಗದೆ; ಜನರಲ್ಲಿ ಜಾಗೃತಿಯನ್ನುಂಟು ಮಾಡುವ ವೇದಿಕೆಯಾಗಿತ್ತು. ಅಜಾತ ಶತೃಗಳಾಗಿ ಸೇವೆ ಸಲ್ಲಿಸಿದರು. ಅವರ ಅಗಲುವಿಕೆಯಿಂದ ನಿಜಕ್ಕೂ ಕನ್ನಡ ರಂಗಭೂಮಿಗೆ ತುಂಬಲಾರದ ನಷ್ಟವುಂಟಾಗಿದೆ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link