ದಾವಣಗೆರೆ:
ಜಿಲ್ಲಾ ಮತ್ತು ತಾಲೂಕು ಪೋಟೋಗ್ರಾಫರ್ಸ್ ವೇಲ್‍ಪೇರ್ ಅಸೋಸಿಯೇಷನ್ ವತಿಯಿಂದ ನಗರದ ಜಿ.ಪಂ ಕಚೇರಿಯ ಅವರಣದಲ್ಲಿ ಮಹಾತ್ಮ ಗಾಂಧಿಜೀ, ಲಾಲ್ ಬಹದ್ದೂರು ಶಾಸ್ತ್ರಿಜೀ ಅವರ ಜನ್ಮದಿನ ಹಿನ್ನಲೆಯಲ್ಲಿ ಅವರಣವನ್ನು ಸ್ವಚ್ಚ ಮಾಡುವ ಮೂಲಕ ಸ್ವಚ್ಛ ಭಾರತ ಅಭಿಯಾನಕ್ಕೆ ನಗರದ ಛಾಯಾಗ್ರಾಹಕರು ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಜಿ.ಪಂ ಅಧ್ಯಕ್ಷೆ ಕೆ.ಆರ್.ಜಯಶೀಲಾ ಆವರಣದಲ್ಲಿನ ಸ್ವಚ್ಛ ಮಾಡಿರುವುದಕ್ಕೆ ಛಾಯಾಗ್ರಾಹಕರಿಗೆ ಅಭಿನಂದನೆ ಸಲ್ಲಿಸಿದರು.
ಸಿಇಒ ಅಶ್ವತಿ ಮಾತನಾಡಿ, ಜಿ.ಪಂ ಆವರಣದಲ್ಲಿ ಸ್ವಚ್ಛತೆ ಛಾಯಾಗ್ರಾಹಕರು ಕೈಗೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಅವರಣ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ತಾಕೀತು ಮಾಡಿದರು. ಈ ವೇಳೆ ಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ್, ಜಿಲ್ಲಾಧ್ಯಕ್ಷ ಶಿಕಾರಿ ಶಂಭು ,ಶ್ರೀನಾಥ ಅಗಡಿ, ಹೆಚ್‍ಕೆಸಿ ರಾಜು, ವಿಜಯಜಾಧವ್, ದುಗ್ಗೇಶ ಕಡೇಮನಿ, ಕೆ.ಪಿ.ನಾಗರಾಜ್, ಶಿವಶಂಕರ, ಮಂದಾರ ಬಸವರಾಜ್, ಕಿರಣಕುಮಾರ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








