ಚಿಕ್ಕನಾಯಕನಹಳ್ಳಿ:
ತೀ.ನಂ.ಶ್ರೀ ರವರು ವಿದ್ಯಾರ್ಥಿಗಳಿಗೆ ಪಾಠ ಮಾಡುವ ಮೊದಲು ತಯಾರಿ ಮಾಡಿಕೊಂಡು ತರಗತಿ ತೆಗೆದುಕೊಳ್ಳುತ್ತಿದ್ದರು, ತಯಾರಿ ಇಲ್ಲದ ದಿನ ಇವತ್ತಿನ ಪಾಠಕ್ಕೆ ತಯಾರಿ ಮಾಡಿಕೊಂಡಿಲ್ಲ ನನಗೆ ರಜೆ ನೀಡಿ ಎಂದು ಪತ್ರ ಬರೆಯುತ್ತಿದ್ದರು ಎಂದು ಸಾಹಿತಿ ಡಾ.ಎಂ.ವಿ.ನಾಗರಾಜ್ ರಾವ್ ಸ್ಮರಿಸಿಕೊಂಡರು.
ಪಟ್ಟಣದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ತೀ.ನಂ.ಶ್ರೀ 114 ಬದುಕು, ಬರಹ, ಪ್ರಸ್ತುತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ತೀ.ನಂ.ಶ್ರೀಕಂಠಯ್ಯನವರನ್ನು ನಾನು ನೋಡಿದ್ದೇನೆ ಆದರೆ ಅವರಿಂದ ಪಾಠವನ್ನು ಕೇಳಿಲ್ಲ, ತೀ.ನಂ.ಶ್ರೀರವರನ್ನು ಚಿ.ನಾ.ಹಳ್ಳಿ ಪಟ್ಟಣದ ಶಿವಪ್ಪನಗಗುಡಿಯ ಬಳಿ ಸನ್ಮಾನಿಸಲಾಗಿತ್ತು ಆಗ ನಾನಿನ್ನೂ ಚಿಕ್ಕಹುಡುಗನಾಗಿದ್ದೆ ಎಂದು ತೀ.ನಂ.ಶ್ರೀರವರ ಜೀವನದ ಘಟನೆಗಳನ್ನು ತೆರೆದಿಟ್ಟರು.
ಉಪನ್ಯಾಸಕ ಶಶಿಭೂಷಣ್ ಮಾತನಾಡಿ, ಕನ್ನಡದಲ್ಲಿ ಇರುವ ಮೂವರು ಶ್ರೀಗಳಲ್ಲಿ ತೀ.ನಂ.ಶ್ರೀಕಂಠಯ್ಯರವರು ಒಬ್ಬರು, ಶ್ರೀಕಂಠಯ್ಯರವರು ಸಾಹಿತ್ಯ, ಛಂದಸ್ಸು, ವ್ಯಾಕರಣ, ವಿಮರ್ಷೆಗಳನ್ನು ಅದ್ಭುತವಾಗಿ ರೂಪಿಸುತ್ತಿದ್ದರು ಎಂದರು. ಕನ್ನಡಲ್ಲಿರುವ ಮೂವರು ಶ್ರೀಗಳಲ್ಲಿ ತೀ.ನಂ.ಶ್ರೀಕಂಠಯ್ಯನವರು ಒಬ್ಬರಾದರೆ ಬಿ.ಎಂ.ಶ್ರೀಕಂಠಯ್ಯ ಹಾಗೂ ಎಂ.ಆರ್.ಶ್ರೀನಿವಾಸ ಮೂರ್ತಿರವರು ಆಗಿದ್ದಾರೆ, ತೀ.ನಂ.ಶ್ರೀರವರು ರಚಿಸುತ್ತಿದ್ದವುಗಳಲ್ಲಿ ಕಂದಪದ್ಯ, ಛಂದಸ್ಸಿನ ವ್ಯಾಕರಣದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದರು ಹಾಗೂ ತನ್ನ ಚಿಕ್ಕವಯಸ್ಸಿನಲ್ಲೇ ಅದ್ಭುತವಾದ ಕನ್ನಡ ಜ್ಞಾನ ಹೊಂದಿದ್ದರು ಎಂದ ಅವರು, ಒಮ್ಮೆ ಮಾಸ್ತಿರವರು ತಮ್ಮ ಪತ್ರಿಕೆಗಾಗಿ ತೀ.ನಂ.ಶ್ರೀ ರವರ ಸಲಹೆ ಸೂಚನೆಗಳನ್ನು ಪಡೆಯುತ್ತಿದ್ದರು ಎಂದರು.
ಕನ್ನಡ ಉಪನ್ಯಾಸಕಿ ಮೆ.ನಾ.ತರಂಗಿಣಿ ಮಾತನಾಡಿ, ತೀ.ನಂ.ಶ್ರೀರವರು ಓದುತ್ತಿದ್ದಾಗ ಮೈಸೂರು ಮಹಾರಾಜರಿಂದ 6ಚಿನ್ನದ ಪದಕ ಪಡೆದಿದ್ದರು, ತೀ.ನಂ.ಶ್ರೀರವರ ಹೆಸರಿನಲ್ಲೇ ಒಂದು ಗಟ್ಟಿತನವಿದೆ, ಅವರಲ್ಲಿ ಜ್ಞಾನ ದಾಹವಿತ್ತು, ಈಗ ಇರುವ ಕೆ.ಎ.ಎಸ್ನಂತೆ ಆಗಿನ ಕಾಲದಲ್ಲಿ ಎಂ.ಸಿ.ಎಸ್ ಪರೀಕ್ಷೆಯನ್ನು ಪಾಸು ಮಾಡಿದ್ದರು, ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದರೂ ಸಹ ಸಾಹಿತ್ಯದ ಕಡೆ ಹೆಚ್ಚಿನ ಒಲವನ್ನು ವ್ಯಕ್ತಪಡಿಸಿದ್ದರು , ತೀ.ನಂ.ಶ್ರೀರವರು ವಿದೇಶ ಪ್ರವಾಸ ಮಾಡಿದಾಗ ಅಲ್ಲಿನ ವಿದ್ವಾಂಸ ರನ್ನೂ ಭೇಟಿ ಮಾಡಿ ವಿಷಯ ಚರ್ಚಿಸಿ ರಾಷ್ಟ್ರ, ರಾಜ್ಯಕ್ಕೆ ಅಗತ್ಯವಾದ ಮಾಹಿತಿಯನ್ನು ತರುತ್ತಿದ್ದರು ಎಂದರು .ಕಾರ್ಯಕ್ರಮದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಟಿ.ಶಿವಣ್ಣ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ