ಚಳ್ಳಕೆರೆ
ಕಳೆದ ಐದು ವರ್ಷಗಳ ನರೇಂದ್ರಮೋದಿಯವರ ಸರ್ಕಾರ ರಾಷ್ಟ್ರದ ಬಡ ಜನತೆಗೆ ಯಾವುದೇ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿಲ್ಲ. ರೈತರ ಸಾಲ ಮನ್ನಾ ವಿಚಾರದಲ್ಲೂ ಸಹ ಮೋದಿಗೆ ಹಿನ್ನೆಡೆಯಾಗಿದೆ. ಬಹುರಾಷ್ಟ್ರೀಯ ಕಂಪನಿ, ಕೇವಲ ಅಂಬಾನಿ, ಮಲ್ಯರಂತಹ ಕೋಟ್ಯಾಧೀಶರಿಗೆ ಮಾತ್ರ ಮೋದಿ ಸಹಾಯ ಮಾಡಿದ್ದಾರೆ. ಬಡ ಜನರ ಕಲ್ಯಾಣಕ್ಕಾಗಿ ಶ್ರಮಿಸುವುದು ಕಾಂಗ್ರೆಸ್ ಪಕ್ಷ ಮಾತ್ರ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು, ಶುಕ್ರವಾರ ತುರುವನೂರು ಹೋಬಳಿಯ ಕೂನಬೇವು, ತುರುವನೂರು, ಕಡುಬನಕಟ್ಟೆ ಬಾಗೆನಾಳ್, ಬೆಳಗಟ,್ಟ ಹಾಯ್ಕಲ್, ಹುಣಸೆಕಟ್ಟೆ, ಮಾಡನಾಯಕನಹಳ್ಳಿ ಮುಂತಾದ ಗ್ರಾಮಗಳಲ್ಲಿ ವ್ಯಾಪಕ ಪ್ರಚಾರ ನಡೆಸಿ ಈ ತಿಂಗಳ 18ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಹಾಲಿ ಸಂಸದ ಸರಳ ಸಜ್ಜನ ವ್ಯಕ್ತಿ ಬಿ.ಎನ್.ಚಂದ್ರಪ್ಪನವರಿಗೆ ಮತ ನೀಡುವಂತೆ ವಿನಂತಿಸಿದರು.
ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯ ಅಭಿವೃದ್ಧಿಗಾಗಿ ಸುಮಾರು 15 ಕೋಟಿ ಅನುದಾನವನ್ನು ಚಂದ್ರಪ್ಪ ನೀಡಿದ್ಧಾರೆ. ಜಿಲ್ಲೆಯ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ, ಜಿಲ್ಲೆಗೆ ಸಮಗ್ರ ನೀರಾವರಿ ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಹಾಗೂ ತುಂಗಾ ಹಿನೀರು ಯೋಜನೆಗೆ ನೆರವು ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ಧಾರೆ. ಜಿಲ್ಲೆಯ ಅಭಿವೃದ್ಧಿಯನ್ನು ಕೈಗೊಂಡ ಸಂಸದರಲ್ಲಿ ಬಿ.ಎನ್.ಚಂದ್ರಪ್ಪ ಅಗ್ರಮಾನ್ಯರು. ಕ್ಷೇತ್ರದ ಮತದಾರರು ನನಗೂ ಎರಡನೇ ಬಾರಿಗೆ ಶಾಸಕನಾಗಲು ಅವಕಾಶ ನೀಡಿದಂತೆ ಚಂದ್ರಪ್ಪನವರಿಗೂ ಸಹ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುರೆಡ್ಡಿ, ಮುಖಂಡರಾದ ಟಿ.ಪ್ರಭುದೇವ್, ಆರ್.ಪ್ರಸನ್ನಕುಮಾರ್, ಎಂ.ಚೇತನ್ಕುಮಾರ್ ಮುಂತಾದವರು ಪ್ರಚಾರ ಕಾರ್ಯದಲ್ಲಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








