ತಹಶೀಲ್ದಾರ್ ಕಛೇರಿಗೆ ಮುತ್ತಿಗೆ

ಪಾವಗಡ

        ಸಮಾಜಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಹೊರಗುತ್ತಿಗೆ ಆದಾರದ ಮೇಲೆ ಅಡುಗೆ ಕೆಲಸ ಮಾಡುತ್ತಿರುವ ಅಡುಗೆ ಸಿಬ್ಬಂದಿ ಸಿ.ಐ.ಟಿ.ಯು. ನ ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ಶುಕ್ರವಾರ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಾವಗಡ ತಹಶೀಲ್ದಾರ್ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

         ಮುತ್ತಿಗೆಯಲ್ಲಿ ಸಿ.ಐ.ಟಿ.ಯು. ನ ಮುಖಂಡ ಶಿವಕುಮಾರ್ ಮಾತನಾಡಿ, ಪಾವಗಡ ತಾಲ್ಲೂಕಿನಲ್ಲಿ ಸಮಾಜಕಲ್ಯಾಣ ಇಲಾಖೆ ಹಾಗೂ ಬಿ.ಸಿ.ಎಂ. ಇಲಾಖೆಗಳಲ್ಲಿ ಹತ್ತಾರು ವರ್ಷಗಳಿಂದ ಅಡುಗೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಅದರೆ ಇವರಿಗೆ ಸಂಬಳ ಮತ್ತು ಈ.ಏಫ್. ಹಾಗೂ ಪಿ.ಏಫ್. ಹಣ ಬಿಡುಗಡೆ ಮಾಡಿಲ್ಲ ಈ ಬಗ್ಗೆ ತಾಲ್ಲೂಕು ಅಧಿಕಾರಿಗಳನ್ನು

        ಕೇಳಿದರೆ ಇಷ್ಟ ಇದ್ದರೆ ಕೆಲಸ ಮಾಡಿ ಇಲ್ಲ ಎಂದರೆ ಕೆಲಸ ಬಿಟ್ಟು ಹೋಗಿ ಎಂದು ಗದರಿಸುತ್ತಾರೆ, ಅದರೇ ಇದನ್ನೆ ನಂಬಿಕೊಂಡು ಕೆಲಸ ಮಾಡುತ್ತಿರುವ ಅಡುಗೆ ಸಿಬ್ಬಂದಿ ಕಳೆದ 1 ವರ್ಷ ದಿಂದ ಸಂಬಳ ಇಲ್ಲದೇ ಅತಂತ್ರದಲ್ಲಿ ಬದುಕುತ್ತಿದ್ದಾರೆ, ಸಂಬಳ ಕೊಡಿಸಿ ಎಂದುನಿಲಯಪಾಲಕರನ್ನು ಕೇಳಿದರೆ ಉದ್ಧಟತನ ತೋರುತ್ತಾರೆ, ಅದ್ದರಿಂದ ಸರ್ಕಾರ ನೌಕರರಿಗೆ ಕಾಲಕಾಲಕ್ಕೆ ಸಂಬಳ ನೀಡಬೇಕು ,ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ನಿವೃತ್ತಿ ವಯಸ್ಸು 60 ವರ್ಷ ತಲುಪುವವರೆಗೂ ಸೇವಾ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದ ಅವರು , ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಗಮನ ಸೆಳೆಯಲು ಈ ತಿಂಗಳ 20 ರಂದು ಸಾವಿರಾರು ನೌಕರರು ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.

          ವೈ.ಎನ್. ಹೊಸಕೋಟೆ ಗ್ರಾಮದ ಸಮಾಜಕಲ್ಯಾಣ ಇಲಾಖೆಯ ವಸತಿ ನಿಲಯದ ಅಡುಗೆ ಸಿಬ್ಬಂದಿ ಅಕ್ಕಮ್ಮ ಮಾತನಾಡಿ, ಕಳೆದ ಜನವರಿ ಯಿಂದ ಸಂಬಳ ನೀಡಿಲ್ಲ,ಸಂಬಳ ಕೇಳಿದರೆ ಸರ್ಕಾರದಿಂದ ಹಣ ಮೂಂಜೂರಾಗಿಲ್ಲ ಎನ್ನುತ್ತಾರೆ ಇದರಿಂದ ನಮಗೆ ಅನ್ಯಾಯವಾಗುತ್ತಿದೆಎಂದು ಅಲವತ್ತುಕೊಂಡರು.

         ಪಾವಗಡದ ಹಾಬ್ಬಂಡೆಯಲ್ಲಿನ ವಸತಿನಿಲಯದ ಅಡುಗೆ ಸಿಬ್ಬಂದಿ ಲಕ್ಷ್ಮೀದೇವಿ ಮಾತನಾಡಿ, ನಾನು ವಿಧವೆಯಾಗಿದ್ದು ಸಣ್ಣಮಕ್ಕಳಿದ್ದು ಮಕ್ಕಳನ್ನು ಓದಿಸಬೇಕು, ಮನೆ ಬಾಡಿಗೆ ಕಟ್ಟಬೇಕು ಸಂಬಳ ಇಲ್ಲದೆ ನಾವು ಬೀದಿಗೆ ಬಂದಿದ್ದು , ಸಂಕಷ್ಟದಲ್ಲಿ ಸಿಲುಕಿದ್ದೇವೆ ಸರ್ಕಾರ ಕೂಡಲೆ ನಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.ಗ್ರೇಡ್-2 ತಹಶೀಲ್ದಾರ್ ಹನುಮಂತಯ್ಯಗೆ ಮನವಿ ಪತ್ರ ಸಲ್ಲಿಸಿದರು.

           ಮುಖಂಡರಾದ ಗೋಪಿ, ವಿನಯ್, ಮಂಜುನಾಥ್, ಲಿಂಗೇಶ್ವರ್,ಅಡುಗೆ ಸಿಬ್ಬಂದಿ ಎನ್. ಭಾಗ್ಯಮ್ಮ, ಗಂಗಮ್ಮ, ಪಾರ್ವತಿ, ಸೌಬಾಗ್ಯಲಕ್ಷ್ಮೀ, ಸರೋಜಮ್ಮ, ರಾಮಲಕ್ಷ್ಮಮ್ಮ, ನಾಗರತ್ನಮ್ಮ, ಉಮಾದೇವಿ, ಸುಜಾತ, ಸುಮಲತ, ಲಕ್ಷ್ಮೀ, ಈಶ್ವರಮ್ಮ, ಲಕ್ಷ್ಕಮ್ಮ, ಅನುಸೂಯಮ್ಮ, ಸರಸ್ಪತಿ, ಲಲಿತಮ್ಮ, ರತ್ನಮ್ಮ, ರಾಜಮ್ಮ, ಓಬಳಮ್ಮ, ಸಿ.ಸರಸ್ಪತಿ,ಮಾರಪ್ಪ, ಪಿ.ನಾಗರಾಜ್, ಹಾಜರಿದ್ದರು. ಪಟ್ಟಣದ ನೀರೀಕ್ಷಣಾ ಮಂದಿರದಿಂದ ತಹಶೀಲ್ದಾರ್ ಕಛೇರಿವರೆಗೂ ರ್ಯಾಲಿ ನಡೆಸಲಾಯಿತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link