ಆಗ್ರಾ:
ಸಿಡಿಲು ತಾಗಿ ವಿಶ್ವ ವಿಖ್ಯಾತ ತಾಜ್ ಮಹಲ್ ಗೆ ಹಾನಿಯಾದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ ತಾಜ್ ಮಹಲ್ ನ ಮುಖ್ಯ ಸಮಾಧಿ ಮತ್ತು ಕೆಂಪು ಮರಳುಗಲ್ಲಿನ ಅಮೃತಶಿಲೆ ರೇಲಿಂಗ್ ಗೆ ಸಿಡಿಲು ಬಡಿದು ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಗುಡುಗು ಸಹಿತ ಭಾರೀ ಮಳೆಗೆ ತಾಜ್ ಮಹಲ್ ನ ಒಂದು ಬಾಗಿಲು ಹಾನಿಗೀಡಾಗಿದ್ದು ಆವರಣದಲ್ಲಿ ಕೆಲ ಮರಗಳು ಬುಡಸಮೇತ ಉರುಳಿ ಬಿದ್ದಿದೆ ಎಂದು ಭಾರತೀಯ ಪುರಾತತ್ವ ಇಲಾಖೆಯ ಸೂಪರಿಂಟೆಂಡೆಂಟ್ ಬಸಂತ್ ಕುಮಾರ್ ಸ್ವರ್ಣ್ ಕರ್ ತಿಳಿಸಿದ್ದಾರೆ.ತಾಜ್ ಮಹಲ್ ಫಾಲ್ಸ್ ಸೀಲಿಂಗ್ ಕೂಡ ಬಿದ್ದಿದೆ. ಮೆಹ್ತಾಬ್ ಬಾಗ್ ಮತ್ತು ಮರಿಯಮ್ ಮಕ್ಬಾರದಲ್ಲಿ ಮರಗಳು ಬಿದ್ದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








