ಸುಳ್ಳು ಜಾತಿ ಪ್ರಮಾಣ ಪತ್ರ : ನೀಡಿದವರ ವಿರುದ್ದ ಸೂಕ್ತ ಕ್ರಮಕ್ಕೆ ಆಗ್ರಹ

ಹರಪನಹಳ್ಳಿ:

      ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ನೀಡಿದ್ದು ಕೂಡಲೇ ಸಂಬಂಧಿಸಿದ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಅಮಾನತ್ತು ಗೊಳಿಸಬೇಕೆಂದು ಸಿಪಿಐ(ಎಂಎಲ್) ಪಕ್ಷದ ಜಿಲ್ಲಾ ಕಾರ್ಯದರ್ಶಿ ಇದ್ಲಿ ರಾಮಪ್ಪ ಆಗ್ರಹಿಸಿದರು.

     ಪಟ್ಟಣದ ಐ.ಬಿ.ವೃತ್ತದ ಜಿಲ್ಲಾ ಹೋರಾಟ ಸಮಿತಿಯ ಟೆಂಟ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಜಿ.ದಾದಾಪುರ ಗ್ರಾಮದಲ್ಲಿ ಪ್ರವರ್ಗ 1ರಲ್ಲಿ ಬರುವ ಕಿಳ್ಳಿಕ್ಯಾತರ ಜನಾಂಗದವರು ಈಗಲೂ ಸಹ ಪರಿಶಿಷ್ಟ ಜಾತಿಯ ಸಿಳ್ಳಿಕ್ಯಾತಸ್ ಎಂದು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ದುರುಪಯೋಗಪಡಿಸಿಕೊಳ್ಳುತ್ತಿದ್ದು ಈ ಕುರಿತು ಜಿಲ್ಲಾ ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದ್ದು ಅಧಿಕಾರಿಗಳು ವಿಸೃತ ತನಿಖೆ ನಡೆಸಿ ಜಿ.ದಾದಾಪುರ ಗ್ರಾಮದ ಕಿಳ್ಳಿಕ್ಯಾತರ ಪರಶುರಾಮಪ್ಪ, ನಾಗರಾಜ, ಇಂದ್ರಮ್ಮ ಎಂಬುವವರ ಸುಳ್ಳು ಜಾತಿ ಪ್ರಮಾಣ ಪಡೆದಿರುವುದು ದೃಡೀಕೃತವಾಗಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಜಾತಿ ಪ್ರಮಾಣಪತ್ರವನ್ನು ರದ್ದುಪಡಿಸುವಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಜಾತಿ ಪರೀಶೀಲಾನ ಸಮಿತಿ ನಡಾವಳಿಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ರದ್ದುಪಡಿಸುವಂತೆ ಸಮಿತಿ ತಿರ್ಮಾನಿಸಿದೆ.

      ಈ ಕುರಿತು ಹರಪನಹಳ್ಳಿ ಠಾಣೆಯಲ್ಲಿ ನ.5ರಂದು ಗುಲ್ಬರ್ಗ ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದೂರು ದಾಖಲಿಸಿರುತ್ತಾರೆ. ಇದಲ್ಲದೆ ತಾಲ್ಲೂಕಿನ ಕೂಲಹಳ್ಳಿ, ಮತ್ತಿಹಳ್ಳಿ, ಪುಣ್ಯನಗರ ಹಾಗೂ ಹರಪನಹಳ್ಳಿ ಪಟ್ಟಣಗಳಲ್ಲಿ ಜೋಗೇರ ಜನಾಂಗದವರು ಹಂಡಿ ಜೋಗಿಸ್ ಎಂದು ಸುಳ್ಳು ಜಾತಿ ಪ್ರಮಾಣ ಪಡೆಯುತ್ತಿದ್ದು ಈ ಕೂಡಲೇ ಕಂದಾಯ ಅಧಿಕಾರಿಗಳು ಹಾಗೂ ತಹಶೀಲ್ದಾರರು ಪರಿಸ್ತಿತಿ ಗಂಬೀರತೆ ಅರಿತು ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಕೊಡುವುದನ್ನು ನಿಲ್ಲಿಸದಿದ್ದರೆ ಎಸ್.ಸಿ, ಎಸ್‍ಟಿ ಕಾಯ್ದೆಯ ಅನ್ವಯ ತಹಶೀಲ್ದಾರ ಮತ್ತು ಕಂದಾಯ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

      ಈ ಸಂದರ್ಭದಲ್ಲಿ ತಾಪಂ ಸದಸ್ಯ ಹೆಚ್.ಚಂದ್ರಪ್ಪ, ಹಂಚಿನ ಮನಿ ಕೆಂಚಪ್ಪ, ಕೆಪಿಆರ್‍ಎಸ್ ಕೆ.ರಾಜಪ್ಪ, ಸಿದ್ದಯ್ಯ, ದಾಸಪ್ಪ, ಸಿ.ರಾಮನಗೌಡ, ಶೃಂಗಾರತೋಟ ಬಸವರಾಜ, ಕೆ.ಚಂದ್ರಪ್ಪ, ಬಬ್ರುವಾಹನ, ಶೇಕಬುಡೆನ್, ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap