ದೀಪಾವಳಿ : ನಿಮ್ಮ ಕಣ್ಣಿನ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ : ಡಾ. ಸುಜಾತ ರಾಥೋಡ್

ಬೆಂಗಳೂರು

    ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಾಚರಣೆ ವೇಳೆ ಪಟಾಕಿಗಳನ್ನು ಸಿಡಿಸುವಾಗ ಜಾಗೃತಿ ವಹಿಸುವುದು ಅತ್ಯವಶ್ಯಕ ಎಂದು ಮಿಂಟೋ ಕಣ್ಣು ಆಸ್ಪತ್ರೆ ಪ್ರಾದೇಶಿಕ ನೇತ್ರಾ ಚಿಕಿತ್ಸಾ ಸಂಸ್ಥೆಯ ನಿರ್ದೇಶಕಿ ಡಾ. ಸುಜಾತ ರಾಥೋಡ್ ತಿಳಿಸಿದರು.

    ಜೀವನದಲ್ಲಿ ಕತ್ತಲನ್ನು ದೂರ ಮಾಡಿ ಬೆಳಕನ್ನು ಚೆಲ್ಲುವ ಸಂಭ್ರಮದ ದೀಪಾವಳಿಯಲ್ಲಿ ಪಟಾಕಿ ಸಿಡಿಸಿ, ಶಾಶ್ವತವಾಗಿ ಅಂಧರವಾಗುವುದು ಬೇಡ ಪಠಾಕಿ ಸಿಡಿಸುವ ಮಕ್ಕಳ ಬಗ್ಗೆ ಪೋಷಕರು ಹೆಚ್ಚಿನ ನಿಗಾ ವಹಿಸುವುದು ಅಗತ್ಯ ಎಂದು ಅವರು ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.ತಡೆಗಟ್ಟುವಿಕೆ ಚಿಕಿತ್ಸೆಗಿಂತ ಉತ್ತಮ ಎಂದ ನಾಣ್ನುಡಿಯಂತೆ ದೀಪಾವಳಿ ಹಬ್ಬಗಳ ದಿನಗಳಲ್ಲಿ ಪಟಾಕಿ ಸಿಡಿಸಿ, ಕಣ್ಣುಗಳಿಗೆ ಗಾಯಗಳನ್ನು ಮಾಡಿಕೊಳ್ಳುವ ಮೊದಲೇ ಎಚ್ಚರವಹಿಸುವುದು ಬಹಳ ಮುಖ್ಯ. ಜೀವನದಲ್ಲಿ ಕತ್ತಲನ್ನು ದೂರ ಮಾಡಿ ಬೆಳಕನ್ನು ಚೆಲ್ಲುವ ಸಂಭ್ರಮದ ದೀಪಾವಳಿಯಲ್ಲಿ ಪಟಾಕಿ ಸಿಡಿಸಿ, ಶಾಶ್ವತವಾಗಿ ಅಂಧರವಾಗುವುದು ಬೇಡ ಎಂದರು.

    ಪ್ರತಿವರ್ಷ 50 ರಿಂದ 60 ಜನ ಕಣ್ಣಿನ ಚಿಕಿತ್ಸೆಗಾಗಿ ಮಿಂಟೋ ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದಾರೆ. ವಿಶೇಷವಾಗಿ 10 ವರ್ಷದೊಳಗಿನ ಮಕ್ಕಳೇ ಹೆಚ್ಚಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಹಾಗಾಗಿ 5 ವರ್ಷದೊಳಗಿನ ಮಕ್ಕಳಿಗೆ ಪಟಾಕಿ ಸಿಡಿಸಲು ಅವಕಾಶ ನೀಡಬಾರದು. ಸಣ್ಣವರೇ ಆಗಲಿ, ದೊಡ್ಡವರೆ ಆಗಲಿ ಶಕ್ತಿಶಾಲಿ ಬಾಂಬ್‌ಗಳು, ರಾಕೆಟ್, ಹೂಕುಂಡ ಸೇರಿದಂತೆ ವಿವಿಧ ಬಗೆಯ ಪಟಾಕಿಗಳನ್ನು ಸಿಡಿಸುವಾಗ ಜಾಗ್ರತೆ ವಹಿಸಬೇಕು. ಇಲ್ಲವಾದರೆ ಜೀವನದ ಅತ್ಯಂತ ಪ್ರಮುಖವಾದ ಕಣ್ಣಿಗೆ ಹೆಚ್ಚು ಅಪಾಯ ಸಂಭವಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.

    5 ವರ್ಷದೊಳಗಿನ ಮಕ್ಕಳಿಗೆ ಪಟಾಕಿ ಹಾರಿಸಲು ಬಿಡಬಾರದು, ಮನೆಯಲ್ಲಿ ವಾಹನ ನಿಲುಗಡೆಯಲ್ಲಿ ಪಟಾಕಿಯನ್ನು ಹಾರಿಸಬಾರದು, ಸುಟ್ಟ ಪಟಾಕಿಗಳನ್ನು ಮನಬಂದಂತೆ ಬಿಸಾಡದೆ, ಮತ್ತೆ ಪುನಃ ಸುಡಲು ಯತ್ನಿಸಬಾರದು. ಶಬ್ಧಮಾಲಿನ್ಯ, ವಾಯು ಹಾಗೂ ಪರಿಸರ ಮಾಲಿನ್ಯ ನಿಯಂತ್ರಿಸುವುದು ನಮ್ಮೆಲ್ಲರ ಆದ್ಯಕರ್ತವ್ಯವಾಗಿದೆ ಎಂದು ತಿಳಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap