ಬೆಂಗಳೂರು
ಇಡೀ ದೇಶದ ಗಮನ ಸೆಳೆದಿರುವ ಅಯೋಧ್ಯೆ ತೀರ್ಪು ಪ್ರಕಟವಾಗಿರುವ ಹಿನ್ನಲೆಯಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದ್ದು ರಾಜ್ಯ ಎಲ್ಲಾ ಸಾರಿಗೆ ವಿಭಾಗದ ಡಿಸಿಗಳಿಗೆ ಮತ್ತು ಪ್ರಯಾಆಣಿಕರಿಗೆ ನಿಗಮವು ಜಾಗರೂಕತೆ ವಹಿಸುವಂತೆ ಸೂಚಿಸಿದೆ. ಒಂದು ವೇಳೆ ಏನಾದರು ಅಹಿತಕರ ಘಟನೆ ನಡೆದರೆ ಅಥವಾ ಕಲ್ಲು ತೂರಾಟದಂತಹ ಘಟನೆ ವರದಿಯಾದರೆ ಕೂಡಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ಅಹಿತಕರ ಘಟನೆ ನಡೆದ ತಕ್ಷಣವೇ ಕೇಂದ್ರ ಕಚೇರಿಗೆ ಮಾಹಿತಿ ನೀಡಿ ಎಂದು ಸೂಚನೆ ನೀಡಲಾಗಿದೆ. ಎಲ್ಲಾ ಡಿಸಿಗಳು ಮತ್ತು ವಿಭಾಗೀಯ ಅಧಿಕಾರಿಗಳು, ಡಿಪೋ ವ್ಯವಸ್ಥಾಪಕರು ತಮ್ಮ ಪ್ರಧಾನ ಕಚೇರಿಯಲ್ಲಿರಬೇಕು ಮತ್ತು ಬಸ್‌ಗಳನ್ನು ಚಾಲನೆ ಮಾಡುವಾಗ ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಉತ್ತಮ ಸಂಪರ್ಕದಲ್ಲಿ ಇರಬೇಕು ಎಂದು ನಿರ್ದೇಶಿಸಿದೆ.ಇನ್ನು ಪ್ರಯಾಣಿಕರಾಗಲಿ ಅಥವಾ ಅಧಿಕಾರಿಗಳಾಗಲಿ ಯಾವುದೇ ರೀತಿಯ ವದಂತಿಗಳಿಗೆ ಕಿಗೊಡಬೇಡಿ ಎಂದು ಕೆಎಸ್ ಆರ್ ಟಿಸಿ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/11/Untitled-1-9.gif)