ಡಿ.ಜೆ ಹಳ್ಳಿ ಪ್ರಕರಣ : ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ

ಬೆಂಗಳೂರು

      ಡಿ.ಜೆ.ಹಳ್ಳಿಯಲ್ಲಿ ನಡೆದ ಗಲಭೆಯು ದುರಾದೃಷ್ಟಕರ ಪ್ರಕರಣ.ದೇಶದ ಯಾವುದೇ ಭಾಗದಲ್ಲಿ ಇಂತಹ ಘಟನೆ ನಡೆಯಬಾರು.ಗಲಭೆ ಸಂಬಂಧ ಪೊಲೀಸರು 150 ಜನರನ್ನು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಬಂಧಿತರಲ್ಲಿ ಎಷ್ಟು ಜನ ನಿರಪರಾಧಿಗಳಿದ್ದಾರೆ.ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ನಿರಪರಾಧಿಗಳಿಗೆ ಶಿಕ್ಷೆ ಆಗುವುದು ಬೇಡವೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದ್ದಾರೆ.

     ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಪುಲಿಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ್ ಅವರ ಮನೆ ಮೇಲಿನ ದಾಳಿ ಪ್ರಕರಣ ದುರದೃಷ್ಟಕರ ಘಟನೆ.ದೇಶದ ಯಾವ ಭಾಗದಲ್ಲೂ ಇಂಥ ಪ್ರಕರಣ ನಡೆಯಬಾರದು.ದೊಂಬಿ ಗಲಾಟೆ ಘಟನೆ ಸಂಬಂಧ ಪೊಲೀಸರು 150 ಜನರನ್ನು ಬಂಧಿಸಿದ್ದಾರೆ. ಆದರೆ ಇವರಲ್ಲಿ ನಿಜವಾದ ಅಪರಾಧಿಗಳು ಎಷ್ಟು?ಇವರಲ್ಲಿ ಎಲ್ಲರೂ ಅಪರಾಧಿಗಳಾಗಿರಲು ಸಾಧ್ಯವಿಲ್ಲ.ಅದ ರಿಂದ ತಪ್ಪಿತಸ್ಥರನ್ನು ಮಾತ್ರ ಘಟನೆಗೆ ಹೊಣೆಗಾರರನ್ನಾಗಿ ಮಾಡಿ ಅಂತವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊ ಳ್ಳಿ.ನಿರಪರಾಧಿಗಳಿಗೆ ಶಿಕ್ಷೆ ಆಗುವುದು ಬೇಡ ಎಂದು ಪೊಲೀಸರಲ್ಲಿ ನಾನು ಮನವಿ ಮಾಡುತ್ತೇನೆಂದು ತಿಳಿಸಿ ದ್ದಾರೆ.

     ಗಲಭೆ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಹೇಳಿದ್ದಾರೆ. ನಗರದ ಪೊಲೀಸ್ ಆಯುಕ್ತರು ಹಿಂದೆ ಸಿಬಿಐನಲ್ಲಿ ಕೆಲಸ ಮಾಡಿದ್ದಾರೆ.ಹೀಗಾಗಿ ಅವರು ತಾರತಮ್ಯ ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಾರೆಂಬ ಭಾವನೆ ತಮಗಿದೆ.ಆದರೂ ಅಂತಿಮ ನಿರ್ಧಾರ ಸರ್ಕಾರವೇ ತೆಗೆದುಕೊಳ್ಳಲಿ.ನಿಜವಾದ ಕಿಡಿಗೇಡಿಗಳ ವಿರುದ್ದ ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತೇನೆ ಎಂದರು.ಮನೆ ಸುಡುವುದು, ಕಾರುಗಳಿಗೆ ಬೆಂಕಿ ಹಚ್ಚುವುದು,ಮನೆ ದೋಚುವುದು ಎಂದೂ ರಾಜ್ಯದಲ್ಲಿ ನಡೆದಿದ್ದನ್ನು ನಾನು ನೋಡಿಲ್ಲ. ಅದರಲ್ಲೂ ಶಾಸಕರ ಮನಗೆ ಬೆಂಕಿ ಹಚ್ಚಿರುವುದು ಇತಿಹಾಸದಲಿಯೇ ಇದು ಮೊದಲು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

    ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಹಾಗೂ ಕುಟುಂಬಕ್ಕೆ ಆಗಿರುವ ಅನ್ಯಾಯಕ್ಕೆ ನ್ಯಾಯ ಸಿಗಬೇಕು. ಆಸ್ತಿ ಪಾಸ್ತಿ ಹಾನಿಯ ನಷ್ಟವನ್ನು ಸರಕಾರ ತನಿಖೆ ನಡೆಸಬೇಕು.ಅಲ್ಲದೆ ಶಾಸಕರಿಗೆ ಧೈರ್ಯ ತುಂಬುದು ಕೆಲ ಸವನ್ನು ಸರ್ಕಾರ ಮಾಡಬೇಕು.ಹಾಗೂ ಕುಟುಂಬಕ್ಕೆ ಶಾಸಕರಿಗೆ ರಕ್ಷಣೆ ಒದಗಿಸಬೇಕು. ಶಾಸಕರು ಕಣ್ಣೀರು ಹಾಕಿ ರುವುದನ್ನು ನಿನ್ನೆ ಮತ್ತು ಒಂದು ಸುದ್ದಿ ಮಾಧ್ಯಮಗಳಲ್ಲಿ ನೋಡಿದ್ದೇನೆ. ಅವರ ಕುಟುಂಬ,ಹೆಂಡತಿ ಮಕ್ಕಳ ನೋವನ್ನೂ ನೋಡಿದ್ದೇನೆ.ಅವರಿಗೆ ಆಗಿರುವ ಅನ್ಯಾಯ ಸರಿಪಡಿಸಲು, ಪರಿಹಾರ ಕೊಡಲು ಸರ್ಕಾರ ಎಲ್ಲಾ ಕ್ರಮ ತಗೆದುಕೊಳ್ಳಬೇಕು.ಶಾಸಕರು ಯಾರಿಗೂ ಅನ್ಯಾಯ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

     ಈ ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದರು ಎನ್ನುವ ವಿಚಾರ ಬೇರೆಯದು.ಆದ್ರೆ ಯಾರಿಗೂ ಅವರು ಮೋಸ, ಅನ್ಯಾಯ ಮಾಡಿಲ್ಲ.ಗಲಭೆ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಕೆಸರೆ ಎರೆಚಾಟ ಮಾಡಬಾರದು.ಇದರಲ್ಲಿ ಯೂ ರಾಜಕೀಯ ಚೆಲ್ಲಾಟ ಬೇಡ.ಯಾರೂ ಈ ಬಗ್ಗೆ ಮನಸ್ಸಿಗೆ ಬಂದ ಹಾಗೆ ಹೇಳಿಕೆ ನೀಡುವುದು ಸರಿಯಲ್ಲ. ಬಿಜೆಪಿ ಸಚಿವರು ಹಾಗೂ ಕಾಂಗ್ರೆಸ್ ಅಧ್ಯಕ್ಷರು,ಸಿಎಲ್ ಪಿ ನಾಯಕರ ಮಾತುಗಳನ್ನು ಗಮನಿಸಿದ್ದೇನೆ ಎಂದು ಹೇಳುವ ಮೂಲಕ ಎರಡೂ ಪಕ್ಷಗಳು ಶಾಂತಿ ಸಮಾಧಾನದಿಂದ ವರ್ತಿಸಿ ಎಂದು ಅವರು ಕರೆ ನೀಡಿದರು.

    ಅಧಿಕಾರಿಗಳು ತಮ್ಮ ಜವಾಬ್ದಾರಿ ನಿರ್ವಹಣೆ ಮಾಡುವಾಗ ರಾಜಕೀಯ ಪಕ್ಷಗಳು ಮಧ್ಯ ಪ್ರವೇಶ ಮಾಡಬಾರ ದು.ಬಿಜೆಪಿ ಸರಕಾರವೇ ಅಧಿಕಾರದಲ್ಲಿ ಇದೆ.ಘಟನೆ ಕುರಿತು ಈಗಾಗಲೇ ಮುಖ್ಯಮಂತ್ರಿ ಅವರು ತನಿಖೆಗೆ ಆದೇಶ ಮಾಡಿದ್ದಾರೆ.ಇದಾದ ಮೇಲೂ ಕೆಲವು ಸಚಿವರು ಹೇಳಿಕೆ ನೀಡುತ್ತಿದ್ದಾರೆ.ಮುಖ್ಯಮಂತ್ರಿ ಅವರ ಆದೇಶ ನೀಡಿದ ಮೇಲೆ ಇತರರು ಮಾತನಾಡುವುದು ಎಷ್ಟು ಸರಿ,ಹಾಗಿದ್ದರೆ ಅವರ ಮಾತಿಗೆ ಏನು ಬೆಲೆ ಎಂದು ಅವರು ಸಚಿವರ ವರ್ತನೆಯನ್ನು ಮಾಜಿ ಪ್ರಧಾನಿ ಪ್ರಶ್ನಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap