ಕಾಬುಲ್
ಉತ್ತರ ಅಫ್ಘಾನಿಸ್ತಾನ್ ದ ಬದಗೀಸ್ ಪ್ರಾಂತ್ಯದಲ್ಲಿ ತಾಲಿಬಾನಿ ಭಯೋತ್ಪಾದಕರ ದಾಳಿಗೆ 35ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದಾರೆ. ತಾಲಿಬಾನ್ ಉಗ್ರರು ಏಳು ಸೈನಿಕರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಮರಿ ಜಿಲ್ಲೆಯಲ್ಲಿ ತಾಲಿಬಾನ್ ಉಗ್ರರು ಸತತ ದಾಳಿ ನಡೆಸಿದ್ದಾರೆ. ಸೈನಿಕರು ಗೋರ್ ಪ್ರಾಂತ್ಯದಿಂದ ಬದಗೀಸ್ ಪ್ರಾಂತ್ಯದತ್ತ ಪ್ರಯಾಣಿಸುತ್ತಿದ್ದರು. ಈ ವೇಳೆ ನಡೆದ ದಾಳಿಯಲ್ಲಿ 35ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದು, ಹಲವರಿಗೆ ಗಾಯವಾಗಿದೆ.
ಮಾಹಿತಿಯ ಅನುಸಾರ ಸೈನಿಕರ ಸಹಾಯಕ್ಕೆ ಹೆಚ್ಚುವರಿ ಸೈನಿಕರು ಬಾರದಿದ್ದರಿಂದ ಮೃತರ ಸಂಖ್ಯೆಯಲ್ಲಿ ಏರಿಕೆ ಆಗಿದೆ. ಉಗ್ರರ ದಾಳಿಯ ಬಳಿಕ ವಾಯು ಸೇನೆಯಿಂದ ದಾಳಿ ನಡೆದಿದ್ದು, ಸುಮಾರು 50 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ .ತಾಲಿಬಾನ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








