ಸಿದ್ಧರಾಮಯ್ಯ – ಹೆಚ್.ವಿಶ್ವನಾಥ್ ನಡುವೆ ಮಾತಿನ ಸಮರ ..!!

ಬೆಂಗಳೂರು

    ಜಾತ್ಯಾತೀತ ಜನತಾದಳದ ಅಧ್ಯಕ್ಷ ಸ್ಥಾನಕ್ಕೆ ಹೆಚ್.ಕೆ.ಕುಮಾರಸ್ವಾಮಿ ನೇಮಕವಾಗುತ್ತಿದ್ದಂತೆಯೇ ಬದ್ಧ ವೈರಿಗಳಾಗಿರುವ ಸಿದ್ಧರಾಮಯ್ಯ ಹಾಗೂ ಹೆಚ್.ವಿಶ್ವನಾಥ್ ನಡುವೆ ತೀವ್ರ ಮಾತಿನ ಸಮರ ಆರಂಭವಾಗಿದೆ.

    ಇಂದು ಜೆಡಿಎಸ್ ಪಕ್ಷದ ಕಛೇರಿಯಲ್ಲಿ ಹೆಚ್.ಕೆ.ಕುಮಾರಸ್ವಾಮಿ ಅವರಿಗೆ ಪಕ್ಷಾಧ್ಯಕ್ಷ ಸ್ಥಾನ ನೀಡುತ್ತಿದ್ದಂತೆಯೇ ಟ್ವಿಟರ್ ಧಾಳಿ ನಡೆಸಿದ ಮಾಜಿ ಸಿಎಂ ಸಿದ್ಧರಾಮಯ್ಯ,ತಮಗೆ ಸಿಕ್ಕ ಪಕ್ಷಾಧ್ಯಕ್ಷ ಸ್ಥಾನವನ್ನು ಸರಿಯಾಗಿ ಆರು ತಿಂಗಳು ನಿಭಾಯಿಸಲಾಗದೆ ಪಲಾಯನಗೈದ ವಿಶ್ವನಾಥ್ ಬಗ್ಗೆ ನನಗೆ ಅನುಕಂಪವಿದೆ ಎಂದರು.

     ಇದಕ್ಕೆ ಪ್ರತಿಯಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ನಾಯಕ ಹೆಚ್.ವಿಶ್ವನಾಥ್:ಎಲ್ಲರಿಗೂ ಸಂಧಿಪಾಠ ಮಾಡಿಕೊಂಡು ಕಾಲ ಕಳೆಯುತ್ತಿರುವ ಸಿದ್ಧರಾಮಯ್ಯ ಅವರಿಂದ ತಾವು ಕಲಿಯಬೇಕಾದದ್ದೇನೂ ಇಲ್ಲ ಎಂದು ಗುಡುಗಿದರು .ಅಂದ ಹಾಗೆ ಉಭಯ ನಾಯಕರ ಮತ್ತೊಂದು ಸುತ್ತಿನ ಸಂಘರ್ಷದ ಮೊದಲ ಕಿಡಿ ಹೊತ್ತಿದ್ದು ಜಕ್ಕರಾಯನ ಕೆರೆ ಮೈದಾನದಲ್ಲಿರುವ ಜೆಡಿಎಸ್ ಕಛೇರಿಯಲ್ಲಿ.

     ಮತ್ತೊಬ್ಬರ ಸಾಮಥ್ರ್ಯದ ಬಗ್ಗೆ ಮಾತನಾಡುತ್ತಾ ತಮ್ಮ ದೌರ್ಬಲ್ಯವನ್ನು ಮುಚ್ಚಿಕೊಳ್ಳುವ ವಿಶ್ವನಾಥ್ ಅವರ ಬಗ್ಗೆ ನನಗೆ ಅನುಕಂಪವಿದೆ ಎಂದೂ ಅವರು ಟ್ವಿಟರ್‍ನಲ್ಲಿ ವ್ಯಂಗ್ಯವಾಡಿದ್ದರು.ಅವರ ಈ ಟ್ವೀಟ್‍ನಿಂದ ಸಿಟ್ಟಿಗೆದ್ದ ವಿಶ್ವನಾಥ್ ಸುದ್ದಿಗಾರ ರೊಂದಿಗೆ ಮಾತನಾಡಿ,ಎಲ್ಲರಿಗೂ ಸಂದಿ ಪಾಠ ಹೇಳಿಕೊಂಡು ಕಾಲ ಕಳೆಯುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನಾನು ಕಲಿಯುವುದು ಏನೂ ಇಲ್ಲ ಎಂದರು.

     ಸಿದ್ದರಾಮಯ್ಯನವರ ಟ್ವೀಟ್ ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸಿದ್ಧರಾಮಯ್ಯ ಅವರಿಗೆ ಬಹುವಚನದಲ್ಲಿ ಮಾತನಾಡಿಯೇ ಗೊತ್ತಿಲ್ಲ, ಸಂಧಿ ಪಾಠ ಮಾಡುವವರಿಗೆ ಏಕವಚನ ಯಾವುದು, ಬಹುವಚನ ಯಾವುದು ಎಂದು ಗೊತ್ತಿಲ್ಲ ಎಂದರು.ಪಕ್ಷಾಧ್ಯಕ್ಷನಾಗಿ ನಾನು ಆರು ತಿಂಗಳ ಅಧಿಕಾರ ನಡೆಸಿದನೋ, ಮೂರು ತಿಂಗಳು ಅಧಿಕಾರ ಮಾಡಿದೆನೋ, ಅದನ್ನು ಕೇಳಲು ಸಿದ್ಧರಾಮಯ್ಯ ಅವರ್ಯಾರು ಎಂದ ಅವರು,ಇಂತಹ ಮಾತನಾಡಲು ಅವರಿಗೆ ನಾಚಿಕೆಯಾಗಬೇಕು ಎಂದರು.

       ಉತ್ತಮ ಆಡಳಿತ ನೀಡಲು ರಚಿಸಲಾದ ಸಮನ್ವಯ ಸಮಿತಿಗೆ ನಾನು ಸದಸ್ಯನಾಗದಂತೆ ತಡೆದವರು ಇದೇ ಸಿದ್ಧರಾಮಯ್ಯ.ಅಂತವರು ಇದೀಗ ಪಾಠ ಮಾಡುತ್ತಾರೆ.ಮುಂದಾದರೂ ಹೊಸ ಅಧ್ಯಕ್ಷರಿಗೆ ಸಮನ್ವಯ ಸಮಿತಿಯಲ್ಲಿ ಅವಕಾಶ ಕೊಟ್ಟು ಸರ್ಕಾರ ಮತ್ತು ಪಕ್ಷಗಳ ನಡುವೆ ಸಮನ್ವಯತೆ ಇರಲು ಕೊಂಡಿಯಾಗಲಿ.ಸಂಧಿ ಪಾಠ ಆಮೇಲೆ ಮಾಡಲಿ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap