ಪ್ರಜಾ ಪ್ರಗತಿ ವರದಿಯಿಂದ ಎಚ್ಚೆತ್ತ ತಾಲ್ಲೂಕು ಆಡಳಿತ…!!

ಮಧುಗಿರಿ:

      ಮೇ 20 ಸೋಮವಾರದಂದು ಹಳೆಯ ಹ್ಯಾಂಡ್ ಬೋರ್ ರೀಪೇರಿಗೆ ಒತ್ತಾಯ ಶೀರ್ಷಿಕೆಯಡಿಯಲ್ಲಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಸುದ್ದಿಗೆ ಎಚ್ಚೆತ್ತಾ ವಾರ್ಡಿನ ಪುರಸಭಾ ಸದಸ್ಯೆ ಜಿ.ಎನ್. ಶೋಭ ಮತ್ತು ಅವರ ಪತಿ ಎಸ್.ಬಿ.ಟಿ ರಾಮು ಶುಕ್ರವಾರದಂದು ಹ್ಯಾಂಡ್ ಬೋರ್ ರೀಪೇರಿ ಮಾಡಿಸಿ ಸಾರ್ವಜನಿಕರಿಗೆ ಅನೂಕೂಲ ಮಾಡಿಕೊಟ್ಟಿದ್ದಾರೆ.

      ತಾಲ್ಲೂಕಿನ ಬಹುಷ ಎಲ್ಲಾ ಕೆರೆಗಳು ಬತ್ತಿ ಹೋಗಿ ಪ್ರತಿ ಗ್ರಾಮದಲ್ಲೂ ಎಲ್ಲಾ ನೀರಿನ ಸಮಸ್ಯೆ ತಲೆದೋರಿದ್ದು ಜನ ಜಾನುವಾರುಗಳು ನೀರಿಗಾಗಿ ಪರಿದಾಡುತ್ತಿದ್ದರೆ ಪಟ್ಟಣದ ದೊಡ್ಡಪೇಟೆಯ ಹಳೆಯ ಹ್ಯಾಂಡ್ ಬೋರ್‍ನಲ್ಲಿ ಕಳೆದ 20 ವರ್ಷಗಳಿಂದ ಬತ್ತದೆ ನಾಗರೀಕರ ನೀರಿನ ದಾಹ ನೀಗಿಸುತ್ತಿದ್ದು ದೊಡ್ಡಪೇಟೆ, ಬಸವನಗುಡಿ ಬೀದಿ, ಹಳೇ ತಾಲ್ಲೂಕು ರಸ್ತೆ, ನಾಯಕರ ಹಟ್ಟಿ ಸೇರಿದಂತೆ ಸುತ್ತಮುತ್ತಲ ವಾರ್ಡಿನ ನಾಗರೀಕರಿಗೆ ದೊಡ್ಡಪೇಟೆ ಮುಖ್ಯ ರಸ್ತೆಯಲ್ಲಿರುವ ಕೈಪಂಪ್ ಹಗಲಿರುಳೆನ್ನದೆ ನಾಗರೀಕರ ಬಳಕೆಗೆ ನೀರನ್ನು ಒದಗಿಸುತ್ತಿದೆ.

       ಮುಖಂಡ ಎಸ್.ಬಿ.ಟಿ ರಾಮು ಮಾತನಾಡಿ ಕಳೆದ ಪುರಸಭಾ ಚುನಾವಣೆಯಲ್ಲಿ ನನ್ನ ಪತ್ನಿಯನ್ನು ಇಲ್ಲಿನ ಜನರು ಬಹುಮತಗಳ ಆಂತರದಿಂದ ಆಯ್ಕೆ ಮಾಡಿದ್ದಾರೆ ಅಂದಿನಿಂದ ಇಂದಿನ ವರೆವಿಗೂ ವಾರ್ಡಿನ ಜನರ ಸಮಸ್ಯೆಗಳನ್ನು ಕೈಲಾದಷ್ಟು ಪರಿಹರಿಸಲಾಗುತ್ತಿದೆ. ಮದುವೆ ಮುಂಜಿ ಮತ್ತಿತರರ ದೇವತಾ ಕಾರ್ಯಗಳಿಗೆ ವಾರ್ಡಿನ ಜನರು ನೀರು ಬೇಕೆಂದಾಗ ಉಚಿತವಾಗಿ ನೀರು ಸರಬರಾಜು ಮಾಡಲಾಗುತ್ತಿದೆ.

      ಈ ಹಳೆಯ ಹ್ಯಾಂಡ್ ಬೋರ್‍ನ ಒಳ ಭಾಗದಲ್ಲಿರುವ ಪೈಪ್‍ಗಳು ತುಕ್ಕು ಹಿಡಿದು ಒಳ ಭಾಗದಲ್ಲಿಯೇ ಏರ್ ಔಟ್ ಆಗುತ್ತಿತ್ತು ಇದರಿಂದಾಗಿ ನೀರು ಸರಿಯಾಗಿ ಮೇಲೆ ಬರುತ್ತಿರಲಿಲ್ಲಾ ಪೈಪ್‍ಗಳನ್ನು ಬದಲಾಯಿಸಲಾಗಿದೆ ಹೆಚ್ಚುವರಿಯಾಗಿ ಮೂರು ಲೆಂಥ್ ಪೈಪ್‍ಗಳನ್ನು ಹ್ಯಾಂಡ್ ಬೋರ್‍ಗೆ ಆಳವಡಿಸಿದ್ದು ಈಗ ನೀರು ಹೆಚ್ಚಾಗಿ ಬರುತ್ತಿದೆ.

      ನಮ್ಮ ವಾರ್ಡಿನಲ್ಲಿರುವ ಶುದ್ಧ ನೀರಿನ ಘಟಕಗಳಿಗೂ ನೀರು ಟ್ಯಾಂಕರ್ ಮೂಲಕ ಹರಿಸುತ್ತಿದ್ದೆನೆ. ಕಳೆದ ವರ್ಷ ಸಿದ್ದಾಪುರದ ಕೆರೆಯಲ್ಲಿ ನೀರಿತ್ತು ಆದರೆ ಇಗ ಅವಧಿಗೂ ಮುನ್ನಾ ಕೆರೆಯಲ್ಲಿ ನೀರು ಖಾಲಿಯಾಗಿದ್ದು ಮರುಭೂಮಿಯಂತಾಗಿದೆ ನೀರಿದ್ದರೆ ನಮಗೆ ಇಂತಹ ದುಸ್ಥಿತಿ ಬರುತ್ತಿರಲಿಲ್ಲ ಎಂದರು.

      ವಾರ್ಡ್ ನಂ1ರಲ್ಲಿ ಇತ್ತೀಚೆಗಷ್ಟೆ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಎರಡು ಮೋರಿಗಳ ಪಕ್ಕದಲ್ಲಿಯೇ ಸುಮಾರು 960 ಅಡಿ ಆಳದಷ್ಟು ಕೊಳವೆ ಬಾವಿಯೊಂದನ್ನು ಕೊರೆಸಿದ್ದು ಆ ಕೊಳವೆ ಬಾವಿಗೆ ಹೊಸದಾಗಿ ಪಂಪ್ ಮತ್ತು ಮೋಟಾರ್ ಆಳವಡಿಸಲಾಗಿದೆ ಆದರೆ ಒಂದೂ ದಿನಕ್ಕಾದರೂ ಈ ಬೋರ್ ವೆಲ್ ನಿಂದ ನೀರು ಮನೆಗಳಿಗೆ ಹರಿದಿಲ್ಲ ಮತ್ತು ಈ ಬೋರ್ ವೆಲ್‍ಗೆ ಗುತ್ತಿಗೆದಾರನಾಗಲಿ ಅಥವಾ ಸಂಭಂಧಪಟ್ಟ ಇಲಾಖೆಯವರಾಗಲಿ ಸುಮಾರು 6ತಿಂಗಳಿನಿಂದ ಎಂಡ್ ಕ್ಯಾಪ್ ಆಳವಡಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap