ತಾಲೂಕು ಕಛೇರಿ ಮುಂಬಾಗ ಅನಿರ್ಧಿಷ್ಟಾವಧಿ ಧರಣಿ-ತಿಪ್ಪೇಸ್ವಾಮಿ

ಜಗಳೂರು:

     ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಜಗಳೂರು ಶಾಖಾ ಕಾಲುವೆ ಮಾರ್ಗ ನಿರ್ಮಾಣಕ್ಕೆ ಸರ್ಕಾರದ ಮಟ್ಟದಲ್ಲಿ ಜನಪ್ರತಿನಿಧಿ ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಸೂಕ್ತ ಸ್ಪಂದನೆ ನೀಡುತ್ತಿಲ. ಸೊಮವಾರದಿಂದ ತಾಲೂಕು ಕಛೇರಿ ಮುಂಬಾಗ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಭದ್ರಾ ಮೇಲ್ದಂಡೆ ಹೊರಾಟ ಸಮಿತಿಯ ಅಧ್ಯಕ್ಷ ತೋರಣಗಟ್ಟೆ ತಿಪ್ಪೇಸ್ವಾಮಿ ಹೇಳಿದರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭದ್ರಾಮೇಲ್ದಂಡೆ ನೀರಾವರಿ ಹೋರಾಟ ಸಮಿತಿ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

      ನಮ್ಮ ಪಾಲಿನ ನೀರು ಬಿಡಲು ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲು ವಿಫಲವಾಗಿದೆ. ಕಳೆದವಾರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದಾಗ ಜೂನ್ 15 ರವರೆಗೆ ಗಡುವು ನೀಡಿದ್ದ ಇಂಜಿನೀಯರ್ ಇಂದು ರಾಗ ಬದಲಿಸುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಿಲ್ಲದೆ ಹೋರಾಟ ಮಾರ್ಗವೊಂದೆ ನಮಗೆ ಗುರಿಯಾಗಿದೆ .ಇದಕ್ಕೆ ತಾಲೂಕಿನ ಜನತೆ ಸಜ್ಜಾಗಬೇಕು ಎಂದು ಕರೆ ನೀಡಿದರು.
ಸಮಿತಿಯ ಸದಸ್ಯ ಯಾದವರೆಡ್ಡಿ ಮಾತನಾಡಿ, ಜಗಳೂರು ತಾಲೂಕಿಗೆ ಮೀಸಲಾಗಿದ್ದ 2.5 ಟಿಎಂಸಿ ನೀರು ಬಿಡಲು ಮೂಲ ಮಾರ್ಗವನ್ನೆ ಬದಲಿಸಿ ಚಿತ್ರದುರ್ಗ ತಾಲೂಕಿನ ವಿವಿಧ ಹಳ್ಳಿಗಳಿಗೆ ಸಮಪರ್ಕ ಕಲ್ಪಿಸುವ ಹುನ್ನಾರ ನಡೆಯುತ್ತಿದೆ ನಮ್ಮ ಹೋರಾಟದ ಫಲವನ್ನು ಅನ್ಯರು ಪಡೆಯುತ್ತಿದ್ದು ಇದಕ್ಕೆ ಪಟ್ಟಭದ್ರ ಹಿತಾಸಕ್ತಿಗಳ ಸಹಕಾರವಿದೆ ಪುನಃ ಹೋರಾಟಕ್ಕೆ ಧುಮುಕಿದರೆ ಮಾತ್ರ ನಮ್ಮ ಪಾಲಿನ ನೀರು ಬರಲು ಸಾದ್ಯ ಎಂದರು.

      ವಕೀಲ ಆರ್ ಓಬಳೇಶ್ ಮಾತನಾಡಿ,ಭದ್ರಾಮೇಲ್ದಂಡೆ ಯೋಜನೆ ತಾಲೂಕಿನ ರೈತರಿಗೆ ಮಾಡು ಇಲ್ಲವೆ ಮಡಿ ಎನ್ನುವಂತಾಗಿದೆ. ಹತಾಶರಾಗದೆ ಮತ್ತೆ ಹೋರಾಟಕ್ಕೆ ಸರ್ವರೂ ಪಕ್ಷಾತೀತ,ಜಾತ್ಯಾತೀತವಾಗಿ ಕೈಜೋಡಿಸಿದಾಗ ಮಾತ್ರ ಮೂಲ ಯೋಜನೆಯ ಮಾರ್ಗವನ್ನು ಉಳಿಸಲು ಸಾದ್ಯ ಎಂದರು.

      ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಅನ್ವರ್ ಸಾಬ್, ಪ್ರಕಾಶ್ ರೆಡ್ಡಿ, ಕೆಟಿ ಬಡಯ್ಯ, ಲುಕ್ಮಾನ್ ಖಾನ್, ತಿಪ್ಪೇಸ್ವಾಮಿಗೌಡ, ವೀರಸ್ವಾಮಿ, ಲಿಂಗರಾಜ್, ಎಪಿಎಂಸಿ ಉಪಾಧ್ಯಕ್ಷ ಗುರುಮೂರ್ತಿ, ಗ್ರಾ.ಪಂ ಸದಸ್ಯ ನಾಗಲಿಂಗಪ್ಪ ,ಮಾಜಿ ತಾ.ಪಂ ಸದಸ್ಯ ಬಸವರಾಜಪ್ಪ ರೈತ ಸಂಘದ ಗಡಿಮಾಕುಂಟೆ ಬಸವರಾಜಪ್ಪ, ಶೇಖರಪ್ಪ, ಪ್ರಕಾಶ್, ತ್ಯಾಗರಾಜ್ ಮುಸ್ಟೂರು ಲಿಂಗರಾಜ್ ಶಿವಲಿಂಗಪ್ಪ ಸೇರಿದಂತೆ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link