ಕುಣಿಗಲ್
ತಾಲೂಕಿನ ಬರಬೇಕಾದ ಹೇಮಾವತಿ ನೀರು ತರುವಲ್ಲಿ ಎಂದಿಗೂ ಹಿಂದೆಸರಿಯುವುದಿಲ್ಲಾ. ನೀರಿಗಾಗಿ ಯಾರು ಏನೇ ಹೇಳಿದರೂ ಯಾವುದೇ ಟೀಕೆ ಠಿಪ್ಪಣಿಗೆ ಕೇರ್ ಮಾಡದೇ ಹೇಮಾವತಿ ನೀರು ಹರಿಸುವಲ್ಲಿ ಶತಾಯಗತಾಯ ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದು ಬೆಂಗಳೂರು ಗ್ರಾ.ಮಾಂತರ ಸಂಸದ ಡಿ.ಕೆ.ಸುರೇಶ್ ಗುಡುಗಿದರು.
ತಾಲೂಕಿನ ಕೊಪ್ಪ ಗ್ರಾಮದಲ್ಲಿ ಬುಧವಾರ ನಡೆದ ಮತದಾರರಿಗೆ ಆಯೋಜಿಸಿದ್ದ ಕೃತಜÐತಾ ಸಮಾರಂಭದಲ್ಲಿ ಮಾತನಾಡಿದರು.
ತಾಲೂಕಿನ ಪಾಲಿನ ಹೇಮಾವತಿ ನೀರನ್ನು ಸರಾಗವಾಗಿ ಹರಿಸಿಕೊಳ್ಳಲು ಈಗಾಗಲೇ ನಾನು ಮತ್ತು ಶಾಸಕರು ಮುಂದಾಗಿದ್ದು ಯಾವುದೇ ಆರೋಪ ಮಾಡಿದ್ದರೂ ಅದನ್ನು ಅರಗಿಸಿಕೊಳ್ಳುವ ಶಕ್ತಿಯನ್ನು ಜನ ಕೊಟ್ಟಿದ್ದಾರೆ. ಈ ಸಂಬಂದ ತಾಲೂಕಿನ ಜನತೆಯ ಜೊತೆ ಬೀದಿಗಿಳಿದು ಹೋರಾಟ ಮಾಡಲು ಸಿದ್ದನಾಗಿದ್ದೇನೆ ಎಂದು ಸವಾಲು ಹಾಕಿದರು.
ಯಾರ ಹಕ್ಕನ್ನು ಇಲ್ಲಿ ಕಸಿದುಕೊಳ್ಳುವ ಕೆಲಸ ಮಾಡುತ್ತಿಲ್ಲ. ಕುಣಿಗಲ್ ತಾಲೂಕಿಗೆ ಹೇಮಾವತಿ ನೀರು ಹರಿದು ರೈತರ ಬದುಕು ಹಸನಾಗಬೇಕು ಎಂದು ಹುಚ್ಚಮಾಸ್ತಿಗೌಡ, ವೈ.ಕೆ.ರಾಮಯ್ಯ, ಎಸ್.ಪಿ.ಮುದ್ದಹನುಮೇಗೌಡ, ರಾಮಸ್ವಾಮಿಗೌಡ ಅವರು ಹಾಕಿಕೊಂಡಿದ್ದ ಕನಸ್ಸಿನ ಪಂಕ್ತಿಗೆ ಮುಕ್ತಿ ಕೊಡುವ ಪ್ರಮಾಣಿಕ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಮೋದಿಯವರ ಅಲೆ ಬರಲೇಯಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಶಕ್ತಿಯಿಂದ ಮತ್ತೇ ಕಾಂಗ್ರೆಸ್ ಸದೃಡವಾಗಿದೆ ಎಂದು ತಿಳಿಸಿದರು.
ಮೂರನೇ ಬಾರಿಗೆ ನನ್ನನು ಸಂಸದನನ್ನಾಗಿ ಆಯ್ಕೆ ಮಾಡುವ ಮೂಲಕ ಜವಾಬ್ದಾರಿ ಹೆಚ್ಚಿಸಿದ್ದೀರ ಇಡೀ ಕರ್ನಾಟಕವೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಡೆ ನೋಡುವಂತೆ ಮಾಡಿರುವ ನಿಮ್ಮ ಭರವಸೆಗಳನ್ನು ಹುಸಿ ಮಾಡದೆ ನಿಮ್ಮ ಗೌರವಕ್ಕೆ ಧಕ್ಕೆ ತರದೆ ಅವಮಾನ ಮಾಡದೆ ಎಲ್ಲವನ್ನು ಈಡೇರಿಸುವ ಸೇವಾಕನಾಗಿ ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆ.
ಒಬ್ಬನೇ ಸಂಸದನಾದರೂ ಅತ್ಮಸ್ಥೈರ್ಯ ಕಳೆದುಕೊಳ್ಳದೆ ರಾಜ್ಯದ ನೆಲ. ಜಲ. ಭಾಷೆಯ ಬಗ್ಗೆ ಹಾಗೂ ರಾಜ್ಯದ ಹಿತ ಕಾಪಾಡುವಲ್ಲಿ ಯಾವುದೆ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ಮೊದಿಯವರ ಅಲೆಯ ನಡುವೆಯೂ ನೀವು ಕೊಟ್ಟಿರುವ ಶಕ್ತಿಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದರು.
ತಾಲೂಕಿನ ಬೆಸ್ಕಾಂ ಅಧಿಕಾರಿಗಳು ಹೆಚ್‍ವಿಡಿಎಸ್ ಯೋಜನೆಯಡಿ ಟಿಸಿ ಅಳವಡಿಸಲು ರೈತರಿಂದ ಹಣ ವಸೂಲಿ ಮಾಡುತ್ತಿದ್ದಾರೆಂಬ ದೂರು ಬಂದಿದೆ. ಯಾರು ಒಂದು ನಯಾಪೈಸೆಯನ್ನು ಕೊಡಬೇಡಿ ಇದು ಸಂಪೂರ್ಣ ಉಚಿತ ಯಾರದಾರೂ ಹಣ ಕೇಳಿದ್ದರೇ ಹಿಡಿದು ಬಡಿಯಿರಿ ಎಂದು ಹೇಳಿದರು.
ಕುಣಿಗಲ್ ಪಟ್ಟಣದಲ್ಲಿ ಪುರಸಭೆ ಅಧಿಕಾರವನ್ನು ಕಾಂಗ್ರೆಸ್ ತೆಕ್ಕೆ ಕೊಟ್ಟಿರುವ ಮತದಾರರ ಋಣ ತೀರಿಸಲು ಪಟ್ಟಣವನ್ನು ಮಾದರಿ ನಗರವನ್ನಾಗಿ ಮಾಡಲು ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ. ಸ್ವಚ್ಚ ಕುಣಿಗಲ್, ಸರಳ ಅಡಳಿತ, ಶುದ್ದ ಕುಡಿಯುವ ನೀರು ಹಾಗೂ ನಾಗರೀಕರ ಹಿತರಕ್ಷಣೆ ಮಾಡುವ ದೃಷ್ಠಿಕೊನ ಇಟ್ಟುಕೊಳ್ಳಲಾಗಿದೆ ಪುರಸಭೆ ಸದಸ್ಯರು ಅಧಿಕಾರಿಗಳಿಗೆ ಸ್ವತಂತ್ರವಾಗಿ ಅಧಿಕಾರ ನಡೆಸಲು ಅವಕಾಶ ಮಾಡಿಕೊಡಬೇಕೆಂದು ಸಲಹೆ ನೀಡಿದ ಅವರು ಪಟ್ಟಣ ಸೇರಿದಂತೆ ತಾಲುಕಿನಾದ್ಯಂತ ಮೂರು ತಿಂಗಳೊಳಗಾಗಿ 2000 ಸಾವಿರ ನಿವೇಶ ಹಂಚಿಕೆ ಮಾಡಲಾಗುವುದೆಂದು ತಿಳಿಸಿದರು.
ಶಾಸಕ ಡಾ.ರಂಗನಾಥ್ ಮಾತನಾಡಿ, ಮಾರ್ಕೋನಹಳ್ಳಿ ಜಲಾಶಯದಿಂದ ಕುಣಿಗಲ್ ದೊಡ್ಡಕೆರೆಗೆ ಲಿಂಕ್ ಚಾನಲ್ ಮಾಡಿಕೊಡ ಬೇಕು,ಕಳೆದ ಒಂದು ವರ್ಷದಿಂದ ಕ್ಷೇತ್ರಾದ್ಯಂತ ಎಲ್ಲಾ ವರ್ಗದ ಜನರ ವಿಶ್ವಾಸ ಗಳಿಸಿ ಲೋಕಸಭೆ,ಪುರಸಭೆಯಲ್ಲಿ ಗೆಲುವು ಸಾಧಿಸಿದ್ದೇವೆ ,ನಿಮ್ಮ ಮನೆಯ ಮಗನಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ಶಾಸಕರು ಸೇರಿದಂತೆ ಪಕ್ಷದ ಹಿರಿಯ ಮುಖಂಡರುಗಳು, ಕಿರಿಯ ಮುಖಂಡರುಗಳು ಸೇರಿದಂತೆ ನೂತನವಾಗಿ ಪುರಸಭೆಯಲ್ಲಿ ಗೆದ್ದ ಅಭ್ಯರ್ಥಿಗಳು ಮತ್ತು ಅಪಾರ ಕಾರ್ಯಕರ್ತರು ಭಾಗವಹಿಸಿದ್ದರು. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರಿಗೆ ಬಾರಿ ಭೂರಿ ಭೋಜನದ ವ್ಯವಸ್ಥೆಯನ್ನ ಮಾಡಲಾಗಿತ್ತು.