ಕೊರಟಗೆರೆ:-
ಪೂರ್ವ ಅಂಗಾಮಿಗೆ ಕೊರಟಗೆರೆಕ್ಷೇತ್ರತತ್ತರಗೊಂಡಿದ್ದು, ಸರಾಸರಿ 60ಮೀಮೀ ಮಳೆಯಾಗುವುದರ ಜೋತೆಗೆ ಬಿರುಗಾಳಿ ಸಹಿತ ಗುಡುಗು-ಸಿಡಿಲು ಆಲಿಕಲ್ಲು ಮಳೆಗೆ ರೈತನ ಲಕ್ಷಂತರರೂ ಮೌಲ್ಯದಅಡಿಕೆ, ತೆಂಗು, ಮಾವು, ತರಕಾರಿ ಸೇರಿದಂತೆ ಹೂವಿನ ತೋಟದ ಬೆಳೆ ನಾಶವಾಗಿದ್ದು,ರೈತರ ಬರದಗಾಯದ ಮೇಲೆ ಅತ್ತೀವ ಮಳೆ ಬರೆ ಎಳೆದಂತ್ತಾಗಿ ರೈತ ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊರಟಗೆರೆ ಪಟ್ಟಣ ಮತ್ತುಕಸಬಾದಲ್ಲಿ ಸರಾಸರಿ 70ಮೀಮೀ, ಹೊಳವನಹಳ್ಳಿ ಭಾಗದಲ್ಲಿ 62ಮೀಮೀ, ಕೋಳಾಲದಲ್ಲಿ 42ಮೀಮೀ, ತುಂಬಾಡಿಯಲ್ಲಿ 19ಮೀಮೀ, ಮಾವತ್ತೂರುನಲ್ಲಿ 20ಮೀಮೀ ಮತ್ತುತೋವಿನಕೆರೆ ವ್ಯಾಪ್ತಿಯಲ್ಲಿ ಕೇವಲ 5ಮೀಮೀ ಮಳೆಯ ವರದಿಯಾಗಿದೆ.ಉಳಿದಂತೆ ಬಿರುಗಾಳಿ ಮಾತ್ರ ಬಂದು ಮಳೆಯ ಪ್ರಮಾಣಕಡಿಮೆಯಾಗಿದೆ.
ತಾಲೂಕಿನತುಂಬಾಡಿ, ಹೊಳವನಹಳ್ಳಿ, ಬಿ.ಡಿ.ಪುರ, ಕ್ಯಾಮೇನಹಳ್ಳಿ, ಮಾವತ್ತೂರು, ದೊಡ್ಡಸಾಗ್ಗೆರೆ, ಗೊರವನಹಳ್ಳಿ, ಕೋಳಾಲ, ಎಲೆರಾಂಪುರ, ಹುಲೀಕುಂಟೆ, ಅಕ್ಕಿರಾಂಪುರ, ಬೇರೈನಹಳ್ಳಿ, ಅರಸಾಪುರ, ಕೊರಟಗೆರೆ ಪಟ್ಟಣ, ಬೋಡಬಂಡೇನಹಳ್ಳಿ, ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಿರುಗಾಳಿ ಮಳೆಗೆ ರೈತರ ನೂರಾರುಎಕರೇಯಲ್ಲಿತೋಟದ ಬೆಳೆಗಳು ನೆಲಕಚ್ಚಿವೆ. ತುಂಬಾಡಿಯರೈತ ಮಾರುತಿಎಂಬುವರ ಹೂ ಮತ್ತು ಬಾಳೆ ತೋಟ ಸೇರಿಒಟ್ಟು 2ಲಕ್ಷಕ್ಕೂ ಅಧಿಕ ಬೆಳೆ ನಷ್ಟವಾಗಿದೆ.
ಕೊರಟಗೆರೆ ಪಟ್ಟಣದ ವಿವಿಧ ವಾರ್ಡುಗಳಲ್ಲಿ ಚರಂಡಿಯಲ್ಲಿನ ಕೊಳವೆನೀರು ಮಳೆಯೊಳಗೆ ತುಂಬಿಕೊಂಡಿದೆ.ರಾಜಕಾಲುವೆ ಸಮೀಪದ ಮನೆಗಳಿಗೆ ನೀರು ನುಗ್ಗಿರುವ ಪರಿಣಾಮರಾತ್ರಿಯಿಡಿಜಾಗರಣೆ ಮಾಡುವಂತಹ ಪರಿಸ್ಥಿತಿ ನಿರ್ಮಾಣಆಗಿತ್ತು. ಕೊರಟಗೆರೆ ಸಮೀಪದ ಬೋಡಬಂಡೇನಹಳ್ಳಿ ರಸ್ತೆಯಲ್ಲಿನಚೌಡೇಶ್ವರಿದೇವಾಲಯ ಮೇಲ್ಚಾವಣಿ ಬಿರುಗಾಳಿಗೆ 1ಕೀಮೀ ದೂರಕ್ಕೆ ಹಾರಿಹೋಗಿದೆ.ಅಕ್ಕಪಕ್ಕದರೈತರ ಭಯಬೀತರಾಗಿ ಮಲಗುವಂತಾಗಿದೆ.
ಕಳೆದ ಏಳು ವರ್ಷದಿಂದ ಬರಗಾಲದಿಂದ ಬರಡಾಗಿದ್ದ ಭೂಮಿಗೆ ಮಳೆರಾಯನ ಆಗಮನದಿಂದ ಕೆರೆಕಟ್ಟೆಗಳಲ್ಲಿ ಅಲ್ಪಸ್ವಲ್ಪ ಮಳೆ ಶೇಖರಣೆಯಾಗಿದೆ.ಬಿರುಗಾಳಿ ಮಳೆಗೆ ಮಾವು, ತೆಂಗು ಮತ್ತುಅಡಿಕೆ ಬೆಳೆಗಳು ನಾಶವಾಗಿದ್ದುತೋಟಗಾರಿಕೆ ಮತ್ತುಕಂದಾಯ ಇಲಾಖೆ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಸರಕಾರದಿಂದರೈತರ ಬೆಳೆಗಳಿಗೆ ಬರುವಂತಹ ಪರಿಹಾರವನ್ನುಕೂಡಿಸಬೇಕುಎಂದುರೈತರುಆಗ್ರಹ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
