ತಂಬಾಕು ಉತ್ಪನ್ನ ಮಾರಾಟ ಅಂಗಡಿಗಳ ಮೇಲೆ ದಾಳಿ

ಚಿತ್ರದುರ್ಗ

     ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ಮಟ್ಟದ ತನಿಖಾ ತಂಡವು ಜಿಲ್ಲೆಯ ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಹಾಗೂ ಹೊಸದುರ್ಗ ತಾಲ್ಲೂಕು ಶ್ರೀರಾಂಪುರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಅಂಗಡಿಗಳ ಮೇಲೆ ದಾಳಿ ನಡೆಸಿ, ನಿಯಮಗಳ ಉಲ್ಲಂಘನೆ ಆರೋಪಕ್ಕಾಗಿ ಮೊಕದ್ದಮೆಗಳನ್ನು ದಾಖಲಿಸಿದೆ ಅಲ್ಲದೆ ದಂಡವನ್ನೂ ವಿಧಿಸಿದೆ.

   ಜಿಲ್ಲಾ ಮಟ್ಟದ ತನಿಖಾ ತಂಡದಿಂದ ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ-2003 ರ ಅಡಿಯಲ್ಲಿ ನಾಯಕನಹಟ್ಟಿ ಹಾಗೂ ಶ್ರೀರಾಂಪುರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟಗಾರರ ವಿವಿಧ ಅಂಗಡಿ, ಮಳಿಗೆಗಳಿಗೆ ದಾಳಿ ನಡೆಸಿ, ಪರಿಶೀಲನೆ ನಡೆಸಲಾಯಿತು. ಅಂಗಡಿಗಳ ಮಾಲೀಕರಿಗೆ, ಸಾರ್ವಜನಿಕರಿಗೆ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು.

     ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಲ್ಲದೆ, ದಂಡವನ್ನೂ ವಿಧಿಸಿದೆ. ಒಟ್ಟು 23 ಪ್ರಕರಣ ದಾಖಲಿಸಿದ್ದು, 5970 ರೂ. ದಂಡ ವಿಧಿಸಲಾಗಿದೆ. ಅಲ್ಲದೆ ವಿವಿಧೆಡೆ ತಂಬಾಕು ಉತ್ಪನ್ನಗಳ ಜಾಹೀರಾತು ಬೋರ್ಡ್‍ಗಳನ್ನು ತೆರವುಗೊಳಿಸಿದೆ. ತಂಬಾಕು ಉತ್ಪನ್ನಗಳ ಬಗ್ಗೆ ನಿಯವiದನ್ವಯ ಜಾಹೀರಾತು ಮೂಲಕ ಪ್ರಚಾರ ಮಾಡುವಂತಿಲ್ಲ. ಆದರೂ ಕೆಲವೆಡೆ ಅಳವಡಿಸಿದ್ದ ಜಾಹೀರಾತು ಫಲಕಗಳನ್ನು ತೆರವುಗೊಳಿಸಿದೆ. ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮಾಡುವ ಪ್ರಕರಣಗಳನ್ನೂ ಕೂಡ ದಾಖಲಿಸಿ, ದಂಡ ವಿಧಿಸಿದೆ.

     ಜಿಲ್ಲಾ ಮಟ್ಟದ ತನಿಖಾ ತಂಡದ ಅಧಿಕಾರಿಗಳಾದ ಬಿ.ಎಂ. ಪ್ರಭುದೇವ್ ಜಿಲ್ಲಾ ಸಲಹಾಗಾರರು, ಸಿದ್ದರಾಮಪ್ಪ ಹೆಲ್ತ್ ಇನ್ಸ್‍ಪೆಕ್ಟರ್, ಹೊಸದುರ್ಗ, ಜಗದೀಶ್ ಹೆಲ್ತ್ ಇನ್ಸ್‍ಪೆಕ್ಟರ್, ಶ್ರೀರಾಂಪುರ ಸಿ.ಹೆಚ್.ಸಿ, ಪ್ರಭಾಕರ್ ಮತ್ತು ಶಿವಕುಮಾರ್ ಪೋಲೀಸರು, ಶ್ರೀರಾಂಪುರ ಸಿ.ಹೆಚ್.ಸಿ, ಶ್ರೀ ವೆಂಕಟೇಶ್ ಹೆಲ್ತ್ ಇನ್ಸ್‍ಪೆಕ್ಟರ್, ಮತ್ತು ಶ್ರೀ ಕೆ.ಎಂ.ತಿಪ್ಪೇಸ್ವಾಮಿ ಸಮಾಜ ಕಾರ್ಯಕರ್ತರು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಇವರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap