ಮಧುಗಿರಿ
ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರ ನಡೆಸಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಶಿಕ್ಷಕರೊಬ್ಬರನ್ನು ಗುರವಾರ ಅಮಾನತ್ತು ಪಡಿಸಲಾಗಿದೆ.
ತಾಲ್ಲೂಕಿನ ಕಸಬಾ ಹೋಬಳಿಯ ಕಮ್ಮನಕೋಟೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಚಂದ್ರಮೌಳಿ ಮಾ.31ರಂದು ತಮ್ಮ ವಾಟ್ಸಪ್ ಮುಖಾಂತರ ಕಸಬಾ ಟೌನ್ ಶಿಕ್ಷಕರ ಬಳಗದ ಗ್ರೂಪ್‍ಗಳಿಗೆ ಈ ಬಾರಿ ಬಿಜೆಪಿ ಪಕ್ಷ ಬೆಂಬಲಿಸುವಂತೆ ಪೋಸ್ಟ್ ಹಾಕಿದ್ದರು.
ಈ ಸಂಬಂಧ ಸಾರ್ವಜನಿಕರ ದೂರನ್ನು ಆಧರಿಸಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಶಿಕ್ಷಕನನ್ನು ಡಿಡಿಪಿಐ ಅಮಾನತ್ತು ಗೊಳಿಸಿದ್ದಾರೆಂದು ಬಿಇಓ ರಂಗಪ್ಪ ಪತ್ರಿಕೆಗೆ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ