ಟೀಂ ಮೋದಿಯಿಂದ ಪ್ರಧಾನ ಸೇವಕ ರಥಯಾತ್ರೆ.

ಚಳ್ಳಕೆರೆ

      ಕಳೆದ ಐದು ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಮೈತ್ರಿ ಕೂಟದ ಎನ್‍ಡಿಎ ಸರ್ಕಾರದ ಪ್ರಧಾನ ಮಂತ್ರಿ ದಾಮೋದರ ನರೇಂದ್ರಮೋದಿ ಯಶಸ್ಸಿಯಾಗಿ ಆಡಳಿತ ನಡೆಸಿದ್ದು, ರಾಷ್ಟ್ರದ ಜನರ ಮನಗೆಲ್ಲುವಲ್ಲಿ ಯಶಸ್ಸಿಯಾಗಿದ್ದಾರೆ. ಅವರ ಸಾಧನೆಗಳನ್ನು ಪ್ರತಿಯೊಬ್ಬ ಮತದಾರರಿಗೂ ಅರ್ಥೈಸುವ ಕೆಲಸವಾಗಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್‍ತಿಳಿಸಿದರು.

      ಅವರು, ಮಂಗಳವಾರ ಇಲ್ಲಿನ ನೆಹರೂ ವೃತ್ತದಲ್ಲಿ ಬೆಂಗಳೂರಿನ ಟೀಂ ಮೋದಿ ವತಿಯಿಂದ ಹಮ್ಮಿಕೊಳ್ಳಲಾದ ನರೇಂದ್ರ ಮೋದಿಯವರ ಐದು ವರ್ಷಗಳ ಸಾಧನೆಯ ಪ್ರಧಾನ ಸೇವಕ ರಥಯಾತ್ರೆಯನ್ನು ಸ್ವಾಗತಿಸಿ ಮಾತನಾಡಿದರು. ಸಮಾಜದ ಎಲ್ಲಾ ವರ್ಗಗಳ ಹಿತಕ್ಕಾಗಿ ನಿರಂತರವಾಗಿ ಸೇವೆ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರಮೋದಿ ವಿಶ್ವಮಟ್ಟದಲ್ಲಿ ಖ್ಯಾತರಾಗಿದ್ಧಾರೆ. ಪ್ರಸ್ತುತ ಈ ವರ್ಷದ ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ ಮೈತ್ರಿಕೂಟ 300 ಸ್ಥಾನಗಳನ್ನು ಗಳಿಸಿ ಮತ್ತೊಮ್ಮೆ ರಾಷ್ಟ್ರದ ಆಡಳಿತ ಚುಕ್ಕಾಣಿಯನ್ನು ಹಿಡಿಯಲಿದೆ ಎಂದರು.

       ಜಿಲ್ಲಾ ಉಪಾಧ್ಯಕ್ಷ, ಯುವ ಮುಖಂಡ ಬಾಳೆಮಂಡಿ ರಾಮದಾಸ್ ಮಾತನಾಡಿ, ಪ್ರಧಾನ ಸೇವಕ ರಥಯಾತ್ರೆಯಲ್ಲಿ ಐದು ವರ್ಷಗಳ ಸಾಧನೆಯ ಕಿರು ಪರಿಚಯವನ್ನು ಎಲ್‍ಇಡಿ ಮೂಲಕ ಜನರಿಗೆ ಪ್ರದಶಿಸಲಾಗುತ್ತಿದೆ. ರಾಷ್ಟ್ರವು ಹೆಚ್ಚು ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗಿರುವುದು ಪ್ರಧಾನ ಮಂತ್ರಿ ನರೇಂದ್ರಮೋದಿಯವರ ಉತ್ತಮ ಆಡಳಿತದಿಂದ ಕಳೆದ ಐದು ವರ್ಷಗಳಿಂದ ರಾಷ್ಟ್ರದ ಅನೇಕ ಜ್ವಲಂತ ಸಮಸ್ಯೆಗಳನ್ನು ನಿವಾರಿಸುವಲ್ಲಿ ಮೋದಿ ಉತ್ತಮ ಹೆಜ್ಜೆ ಇಟ್ಟಿದ್ಧಾರೆ. ಇಂದು ಯುವಕರು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿಸಲು ತೀರ್ಮಾನಿಸಿದ್ದಾರೆ.

      ಜಿಲ್ಲಾ ಸಂಚಾಲಕ ಮಹದೇಶ ಮಾತನಾಡಿ, ಹಿರಿಯೂರು ತಾಲ್ಲೂಕಿನ ಮೂಲಕ ಚಿತ್ರದುರ್ಗಕ್ಕೆ ಆಗಮಿಸಿರುವ ಈ ರಥ ಯಾತ್ರೆ ಚಳ್ಳಕೆರೆ-ಚಿತ್ರದುರ್ಗ ತಾಲ್ಲೂಕುಗಳ ಮೂಲಕ ದಾವಣಗೆರೆ ತೆರಳಲಿದೆ. ಜಿಲ್ಲೆಯಲ್ಲಿ ರಥಯಾತ್ರೆ ಸಂಚರಿಸಿರುವ ಎಲ್ಲಾ ಗ್ರಾಮಗಳಲ್ಲಿ ಜನರು ರಥಯಾತ್ರೆಯನ್ನು ನಿರೀಕ್ಷಿಸಿ ಮೋದಿಗೆ ಜಯಕಾರವನ್ನು ಹಾಕುತ್ತಿದ್ಧಾರೆ. ಕೇವಲ ಚುನಾವಣಾ ದೃಷ್ಠಿಯಿಂದ ಮಾತ್ರ ಈ ಕಾರ್ಯಕ್ರಮ ಹಮ್ಮಿಕೊಂಡಿಲ್ಲ, ಬದಲಾಗಿ ಜನತೆಗೆ ಮೋದಿಯವರ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವುದಾಗಿದೆ ಎಂದರು.

     ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕರಾದ ಧರ್ಮ, ಜೀವನ್, ತಾಲ್ಲೂಕು ಸಂಚಾಲಕರಾ ಮಾತೃಶ್ರೀ ಎನ್.ಮಂಜುನಾಥ, ಕುಮಾರ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಟಿ.ಮಂಜುನಾಥ, ಜಿಲ್ಲಾ ಉಪಾಧ್ಯಕ್ಷ ಜಯಪಾಲ್, ಯುವ ಮೋರ್ಚಾ ಅಧ್ಯಕ್ಷ ಆರ್.ನಾಗೇಶ್, ಕರೀಕರೆ ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ ಶ್ರೀವತ್ಸ, ರಂಗಸ್ವಾಮಿ, ಆದರ್ಶ, ಬೀಡಾಸ್ಟಾಲ್ ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap