ಲಾರಿ ಡಿಕ್ಕಿ : ಮುರಿದ ವಿದ್ಯುತ್-ಟೆಲಿಫೋನ್ ಕಂಬಗಳು

ಮಿಡಿಗೇಶಿ

      ಮಿಡಿಗೇಶಿ ಬಸ್ ನಿಲ್ದಾಣದ ರಸ್ತೆಯ ತಿರುವಿನಲ್ಲಿದ್ದ ವಿದ್ಯುತ್ ಕಂಬಕ್ಕೆ ಅ.23 ರ ಮಧ್ಯರಾತ್ರಿ ಸಿಮೆಂಟ್ ಮೂಟೆಗಳನ್ನು ತುಂಬಿದ್ದ ಲಾರಿಯೊಂದು (ಎ.ಪಿ.02-2788) ಡಿಕ್ಕಿ ಹೊಡೆದಿದೆ. ಆಗ ವಿದ್ಯುತ್ ಕಂಬ ಮತ್ತು ಟೆಲಿಫೋನ್ ಕಂಬಗಳು ಮುರಿದು ಬಿದ್ದಿವೆ. ಬೇಕರಿಯ ಮುಂಭಾಗ ಅಳವಡಿಸಿದ್ದ ಜ್ಹಿಂಕ್‍ಶೀಟ್‍ಗಳು ಕೂಡ ಮುರಿದಿವೆ. ಮಧ್ಯರಾತ್ರಿ ಸಮಯವಾದ್ದರಿಂದ ಜನ ಸಂಚಾರವಿರಲಿಲ್ಲ. ಹಾಗಾಗಿ ಯಾವುದೇ ಪ್ರಾಣಹಾನಿಯಾಗಿಲ್ಲ. ಅವಘಡದ ಬಗ್ಗೆ ಬೇಕರಿ ಮಾಲೀಕರು ಮತ್ತು ಬೆಸ್ಕಾಂನ ಎಸ್.ಓ ಮಿಡಿಗೇಶಿ ಠಾಣೆಗೆ ದೂರು ನೀಡಿದ್ದಾರೆ. ಲಾರಿಯನ್ನು ಮಿಡಿಗೇಶಿ ಪೋಲೀಸರು ವಶಕ್ಕೆ ಪಡೆದಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕೆಶಿಪ್ ಇಲಾಖೆ ಮೇಲೆ ಸಾರ್ವಜನಿಕರ ಆಕ್ರೋಶ :

      ಮಳವಳ್ಳಿಯಿಂದ ರಾಯದುರ್ಗಕ್ಕೆ ಹಾದು ಹೋಗುವ ರಾಜ್ಯ ಹೆದ್ದಾರಿಯ, ಮಿಡಿಗೇಶಿ ಬಸ್ ನಿಲ್ದಾಣದ ಬಳಿ ಸುರಕ್ಷಿತ ಕಾಮಗಾರಿ ಕೈ ಗೊಳ್ಳದಿರುವುದೇ ಈ ಅವಘಡಗಳಿಗೆಲ್ಲಾ ನಡೆಯಲು ಪ್ರಮುಖ ಕಾರಣ ಎಂದು ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಸ್ ನಿಲ್ದಾಣದ ಬಳಿ ಒಂದು ಕಡೆ ಮಾತ್ರ ಚರಂಡಿ ವ್ಯವಸ್ಥೆ ಕಲ್ಪಿಸಿದ್ದು, ಈಗ ಅಪಘಾತವಾಗಿರುವ ಕಡೆ ಚರಂಡಿ ವ್ಯವಸ್ಥೆಯನ್ನು ಕಲ್ಪಿಸಿರುವುದಿಲ್ಲ. ಫುಟ್‍ಪಾತ್ ವ್ಯವಸ್ಥೆಯೂ ಸರಿಯಾಗಿ ಮಾಡಿರುವುದಿಲ್ಲ.

      ಅಲ್ಲದೆ ಕೆಲವು ಅಂಗಡಿಗಳ ಮುಂಭಾಗ ಜ್ಹಿಂಕ್‍ಶೀಟ್‍ಗಳನ್ನು ಅಳವಡಿಸಿದ್ದಾರೆ. ಇದರಿಂದಾಗಿ ಹೊಸದಾಗಿ ಸಂಚರಿಸುವ ವಾಹನಗಳ ಚಾಲಕರಿಗೆ ರಸ್ತೆಗಳ ತಿರುವು ಕಾಣುವುದೆ ಇಲ್ಲ. ಹಾಗಾಗಿ ಸಹ ಅವಘಡಗಳು ಸಂಭವಿಸುತ್ತಿವೆ. ಕೆಶಿಪ್ ಇಲಾಖೆಯು ಸಾರ್ವಜನಿಕರ ಹಿತ ರಕ್ಷಣೆ ದೃಷ್ಟಿಯಿಂದ ಮಿಡಿಗೇಶಿ ಬಸ್ ನಿಲ್ದಾಣದ ಬಳಿ ಸುರಕ್ಷಿತ ಕ್ರಮಗಳನ್ನು ಕೈ ಗೊಳ್ಳುವುದು ಹೆಚ್ಚು ಸೂಕ್ತ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap