ವಿದ್ಯಾಪೀಠದ ಕೃಷ್ಣನ ಸನ್ನಿಧಾನದ ಪಕ್ಕದಲ್ಲಿಯೇ ಶ್ರೀಗಳಿಗೆ ತಾತ್ಕಾಲಿಕ ಬೃಂದಾವನ ವ್ಯವಸ್ಥೆ.!

ಬೆಂಗಳೂರು:

      ದೈವಾದೀನರಾದ ಉಡುಪಿಯ ಪೇಜಾವರ ಶ್ರೀಗಳ ಪಾರ್ಥೀವ ಶರೀರವನ್ನು ಇಂದು ಮಧ್ಯಾಹ್ನ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಇರಿಸಿ ನಂತರದಲ್ಲಿ ಅವರ ಪಾರ್ಥೀವ ಶರೀರವನ್ನು ವಿದ್ಯಾಪೀಠದಲ್ಲಿ ನಿರ್ಮಿಸಲಾಗಿರುವ ತಾತ್ಕ಻ಲಿಕ ಬೃಂದಾವನದಲ್ಲಿ ಇರಿಸಲಾಗುವುದು ಎಂದು ಕೇಶವಾಚಾರ್ಯ ತಿಳಿಸಿದ್ದಾರೆ.

    ವಿದ್ಯಾಪೀಠದಲ್ಲಿನ ಶೀಕೃಷ್ಣನ ದೇವಸ್ಥಾನದ ಪಕ್ಕದಲ್ಲೇ ಶ್ರೀಗಳು ಬೃಂದಾವನ ಪ್ರವೇಶ ಮಾಡಲಿದ್ದಾರೆ.ಮಧ್ವ ಸಂಪ್ರದಾಯ ದಂತೆ ಅಂತಿಮ ವಿಧಿ‌ ವಿಧಾನಗಳು ನೆರವೇರಲಿವೆ ಎಂದು ತಿಳಿಸಿದ್ದಾರೆ.ಸೂರ್ಯಾಸ್ತದೊಳಗೆ ಪಾರ್ಥೀವ ಶರೀರವನ್ನು ವಿದ್ಯಾಪೀಠಕ್ಕೆ ಕರೆತರಲಾಗುವುದು . ಮೊದಲಿಗೆ ಶ್ರೀಗಳ ಪಾರ್ಥೀವ ಶರೀರಕ್ಕ ಸ್ನಾನ ಮಾಡಿಸಲಾಗುತ್ತದೆ. ನಂತರ ಗೋಪಿ ಚಂದನ, ಮುದ್ರಾಧಾರಣೆ ಮಾಡಲಾಗುತ್ತದೆ. ಶರೀರವನ್ನು ಬೆತ್ತದ ಬುಟ್ಟಿಯಲ್ಲಿ ಇರಿಸಿ ವಿದ್ಯಾಪೀಠದ ಸುತ್ತ ಪ್ರದಕ್ಷಿಣೆ ‌ಮಾಡಿಸಲಾಗುತ್ತದೆ‌. 

    ವಿದ್ಯಾಪೀಠದ ಪಾಠ ಪ್ರವಚನ ಕಿವಿಗೆ ಕೇಳಿಸುತ್ತಿರಬೇಕೆಂದು ಶ್ರೀಗಳು ಹೇಳುತ್ತಿದ್ದರು. ಹೀಗಾಗಿ ಇಲ್ಲೇ‌ ಬೃಂದಾವನ ನಿರ್ಮಿಸುತ್ತಿದ್ದೇವೆ ಎಂದು ಶ್ರೀಗಳ ಆಪ್ತರು ಹೇಳಿದ್ದಾರೆ. ಬೃಂದಾವನದೊಳಗೆ ಶ್ರೀಗಳನ್ನು ಸ್ವಸ್ತಿಕಾಸನದಲ್ಲಿ ಇರಿಸಿ ಮಣ್ಣು ಹಾಕಲಾಗುತ್ತದೆ. ಬೇರೆ ಪುಣ್ಯ ಕ್ಷೇತ್ರಗಳಿಂದ ತಂದ‌ ಮಣ್ಣನ್ನೂ ಕೂಡಾ‌ ಹಾಕಲಾಗುತ್ತದೆ. ಬೃಂದಾವನದ ಮೇಲೆ ಪಾತ್ರೆ ಇಟ್ಟು ಹಾಗೂ ಅದರಲ್ಲಿ ಸಾಲಿಗ್ರಾಮ ಇರಿಸಲಾಗುತ್ತದೆ.‌ ಈ ಪಾತ್ರೆಯಲ್ಲಿ ರಂಧ್ರ ಇರುತ್ತದೆ. ಪ್ರತಿ ದಿನ ಪೂಜೆ ಮಾಡಿದ ಬಳಿಕ ನೀರನ್ನು ಸಾಲಿಗ್ರಾಮಕ್ಕೆ ಸುರಿಯಲಾಗುತ್ತದೆ.‌ ಆ ನೀರು ಅವರ ದೇಹದ ಮೇಲೆ ಬೀಳುತ್ತದೆ.

    ಸದ್ಯಕ್ಕೆ ಇದು ತಾತ್ಕಾಲಿಕ ‌ಬೃಂದಾವನವಾಗಿದ್ದು, ಒಂದೆರಡು ತಿಂಗಳ ನಂತರ ತಿಥಿ ದಿನಾಂಕ ಗೊತ್ತುಮಾಡಿ, ವ್ಯವಸ್ಥಿತವಾಗಿ ರೂಪಿಸಿದ ಕಲ್ಲಿನ ಬೃಂದಾವನ ಪ್ರತಿಷ್ಠಾಪಿಸಲಾಗುವುದು ತಿಳಿಸಿದ್ದಾರೆ

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap