ಬೆಂಗಳೂರು
ಶಾಸಕರಿಗೆ ವಿಧಾನಸೌಧದಲ್ಲೇ ರಕ್ಷಣೆ ಇಲ್ಲದಂತಾಗಿದ್ದು ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಕೂಡಲೇ ರಾಜ್ಯಪಾಲರು ತಾತ್ಕಾಲಿಕವಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ಮಾಜಿ ಸಚಿವ ಸಿ.ಟಿ ರವಿ ಆಗ್ರಹಿಸಿದ್ದಾರೆ.
ಮಲ್ಲೇಶ್ವರಂ ನಲ್ಲಿರುವ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು,ಗುಂಡಾಗಿರಿ ಹೊರಗೆ ನಡೆದಿದ್ದನ್ನ ಕೇಳಿದ್ದೇವೆ ಇವತ್ತು ವಿಧಾನಸೌಧದ ಒಳಗೆ ನಡೆದಿದೆ ಅವರು ಕಾಂಗ್ರೆಸ್ ಶಾಸಕರೇ ಇರಬಹುದು, ರಾಜೀನಾಮೆ ಕೊಡುವ ಅಧಿಕಾರ ಅವರಿಗೆ ಇದೆ ಆದರೆ ಅವರನ್ನು ವಿಧಾನಸೌಧದ ಮೂರನೇ ಮಹಡಿಯ ಮಂತ್ರಿಗಳ ಕಚೇರಿಯಲ್ಲಿ ಕೂಡಿಹಾಕಿದ್ದಾರೆ ಅದೇನು ಕಾಂಗ್ರೆಸ್ ಕಚೇರಿಯಲ್ಲ, ರಾಜ್ಯದ ಜನ ಇದನ್ನೆಲ್ಲ ನೋಡಿದ್ದಾರೆ ಕಾಂಗ್ರೆಸ್ ನ ತೋಳ್ಬಲ ಏನು ಎಂದು ನೋಡುತ್ತಿದ್ದಾರೆ ಎಂದರು.
ಸರ್ಕಸರ ಬಿದ್ದರೆ ಕಾಂಗ್ರೆಸ್ ನ ಎಟಿಎಂ ಬಂದ್ ಆಗಲಿದೆ ಎಂದು ಸರ್ಕಾರ ಉಳಿಸಿಕೊಳ್ಳಲು ಪ್ರಯಾಸ ಪಡುತ್ತಿದ್ದಾರೆ ಆದರೆ ಸಧ್ಯದ ಮಟ್ಟಿಗೆ ಶಾಸಕರಿಗೆ ವಿಧಾನಸೌಧದಲ್ಲೇ ರಕ್ಷಣೆ ಇಲ್ಲ ಎಂದರೆ ಹೊರಗಡೆ ಇರಲು ಸಾಧ್ಯವೇ? ಹಾಗಾಗಿ ಕೂಡಲೇ ತಾತ್ಕಾಲಿಕವಾಗಿ ರಾಷ್ಟ್ರಪತಿಗಳ ಆಳ್ವಿಕೆ ಹೇರಿ ಕಾನೂನು-ಸುವ್ಯವಸ್ಥೆ ಸರಿಪಡಿಸಬೇಕು ಇಂದು ನಡೆದಿದ್ದು ಬರೀ ರಿಹರ್ಸಲ್ ಎನ್ನಬಹುದು ಹಾಗಾಗಿ ಶಾಸಕರಿಗೆ ಬೇಕಾದ ರಕ್ಷಣೆಯನ್ನು ಒದಗಿಸಬೇಕು ಎಂದು ಮನವಿ ಮಾಡಿದರು.
ಇವತ್ತು ಸುಧಾಕರ್ ಅವರೆ ಬಂದು ರಾಜೀನಾಮೆ ಕೊಟ್ಟಿದ್ದಾರೆ ಇದೆಲ್ಲಾ ಮಾಧ್ಯಮದ ಕಣ್ಣೆದುರಿಗೆ ನಡೆದಿದೆ ಅವರು ಸ್ವಇಚ್ಛೆಯಿಂದ ರಾಜೀನಾಮೆ ಕೊಟ್ಟಿದ್ದಾರೆ ರಾಜೀನಾಮೆ ಕೊಟ್ಟು ಹೊರಗೆ ಹೋಗುವ ಸಂದರ್ಭದಲ್ಲಿ ಅವರನ್ನು ಅವರನ್ನು ತಳ್ಳಾಡ ಕೂಡಿ ಹಾಕಲಾಗಿದೆ, ಸುಧಾಕರ್ ಪತ್ನಿ ನಮಗೆ ದೂರವಾಣಿ ಕರೆ ಮಾಡಿ ಪತಿಯ ರಕ್ಷಣೆಗೆ ಮನವಿ ಮಾಡಿದ್ದಾರೆ, ನಾವು ರಾಜಕೀಯವಾಗಿ ಬೇರೆ ಬೇರೆ ಪಕ್ಷದವರಾದರೂ ಸ್ನೇಹಿತರೇ ಹಾಗಾಗಿ ನಮಗೆ ಕರೆ ಮಾಡಿ ಮನವಿ ಮಾಡಿದ್ದಾರೆ ಎಂದರು.