ಸಿಎಂ ಭೇಟಿಯಾದ ಟೆನ್ನಿಸ್ ಆಟಗಾರ್ತಿ ಅರಾಂತ್ಸಾ

ಬೆಂಗಳೂರು:

     ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿಯನ್ನು ಇಂದು ಖ್ಯಾತ ಅಂತಾರಾಷ್ಟ್ರೀಯ ಟೆನ್ನಿಸ್ ಆಟಗಾರ್ತಿ ಅರಾಂತ್ಸಾ ಸ್ಯಾಂಚೆಸ್ ವಿಕಾರಿಯೋ ಭೇಟಿಯಾದರು.

     ಬೆಂಗಳೂರಿನಲ್ಲಿ ಮೇ 19 ರಂದು ನಡೆಯಲಿರುವ ಟಿ.ಸಿ.ಎಸ್ ವಲ್ರ್ಡ್ 10ಕೆ ಬೆಂಗಳೂರು ಮ್ಯಾರಥಾಥ್ ಕುರಿತು ಅದರ ರಾಯಭಾರಿ ಅರಾಂತ್ಸಾ ಸ್ಯಾಂಚೆಸ್ ವಿಕಾರಿಯೋ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಕಾರ್ಯಕ್ರಮದ ವಿವರ ನೀಡಿದರು.

     ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರ ಅಪರ ಮುಖ್ಯ ಕಾರ್ಯದರ್ಶಿ ಇ.ವಿ. ರಮಣರೆಡ್ಡಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ