ತುಮಕೂರು
ಅನರ್ಹ ಶಾಸಕರಿಗೆ ಸಂಬಂಧಿಸಿದ ತೀರ್ಪು ಗುರುವಾರ ಸಂಜೆಯೊಳಗೆ ಪ್ರಕಟವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ಮತ್ತೆ ಆತಂಕ ಶುರುವಾಗಿದ್ದು, ದಿನ ಎಣಿಕೆಯ ಆತಂಕದಲ್ಲಿ ಮುಳುಗಿದ್ದಾರೆ.ಅನರ್ಹ ಶಾಸಕರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ವಿಳಂಬವಾಗುತ್ತಲೆ ಇದೆ. ಇಂದು ಬರಬಹುದು, ನಾಳೆ ಬರಬಹುದು ಎಂದು ಕಾಯುತ್ತಾ ದಿನ ಎಣಿಸುತ್ತಿರುವ ಅನರ್ಹ ಶಾಸಕರಿಗೆ ಈಗ ನೆಮ್ಮದಿಯ ನಿದ್ರೆ ಬರುತ್ತಿಲ್ಲ. ಶುಕ್ರವಾರವಾದರೂ ತೀರ್ಪು ಪ್ರಕಟವಾಗಬಹುದೆ ಎಂಬ ಕಾತುರದಲ್ಲಿ ಇದ್ದಾರೆ.
ಡಿಸೆಂಬರ್ 5 ರಂದು ಉಪ ಚುನಾವಣೆ ನಿಗದಿಯಾಗಿದೆ. ನ.11 ರಿಂದ ನೀತಿ ಸಂಹಿತೆ ಜಾರಿಯಾಗುತ್ತದೆ. ಉಪ ಚುನಾವಣೆ ಸಮೀಪಿಸುತ್ತಿರುವಾಗ ಸುಪ್ರೀಂಕೋರ್ಟ್‍ನಿಂದ ತೀರ್ಪು ಬಾರದೆ ಇರುವುದು ಅನರ್ಹ ಶಾಸಕರಲ್ಲಿ ತಳಮಳಕ್ಕೆ ಕಾರಣವಾಗಿದೆ.ನೀತಿ ಸಂಹಿತೆಗೆ ಇನ್ನು ಮೂರು ದಿನಗಳು ಮಾತ್ರವೆ ಉಳಿದಿರುವಾಗ ಅಷ್ಟರೊಳಗೆ ಸುಪ್ರೀಂಕೋರ್ಟ್ ತೀರ್ಪು ಪ್ರಕಟವಾಗದಿದ್ದರೆ ತ್ರಿಶಂಕು ಸ್ಥಿತಿಗೆ ಸಿಲುಕಬೇಕಾಗುವುದಲ್ಲ ಎಂಬ ಚಿಂತೆ ಆರಂಭವಾಗಿದೆ. ಈ ನಡುವೆ ಅನರ್ಹತೆ ಪ್ರಕರಣದಲ್ಲಿ ತೀರ್ಪು ತಕ್ಷಣಕ್ಕೆ ಬಾರದೇ ಹೋದರೆ ತೀರ್ಪು ಪ್ರಕಟವಾಗುವವರೆಗೂ ಚುನಾವಣೆಯನ್ನೆ ಮುಂದೂಡಿ ಎಂದೂ ಸಹ ಕೆಲವು ಅನರ್ಹ ಶಾಸಕರು ಮತ್ತೊಂದು ಬೇಡಿಕೆ ಮುಂದಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‍ನಲ್ಲಿ ಅರ್ಜಿ ಹಾಕಲು ತಯಾರಿ ನಡೆದಿದೆ.
ಗುರುವಾರ ಬಹುತೇಕ ತೀರ್ಪು ಪ್ರಕಟವಾಗಲಿದೆ ಎಂಬ ನಿರೀಕ್ಷೆಯಲ್ಲಿ ಅನರ್ಹ ಶಾಸಕರಿದ್ದರು. ರಾಜಕೀಯ ಮುಖಂಡರು ಸಹ ಸುಪ್ರೀಂ ತೀರ್ಪನ್ನೇ ಎದುರು ನೋಡುತ್ತಿದ್ದರು. ಆದರೆ ಸಂಜೆಯ ವೇಳೆಗೆ ತೀರ್ಪು ಪ್ರಕಟವಾಗುವ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ. ದೆಹಲಿಯಲ್ಲೇ ಬೀಡುಬಿಟ್ಟಿರುವ ಕೆಲವು ಅನರ್ಹ ಶಾಸಕರಲ್ಲಿ ಮತ್ತೆ ನಡುಕ ಉಂಟಾಗಿದ್ದು, ಇಂದು ಅಥವಾ ನಾಳೆಯೊಳಗೆ ತೀರ್ಪು ಪ್ರಕಟವಾಗಲಿದೆ ಎಂಬ ವಿಶ್ವಾಸದಲ್ಲಿ ಇದ್ದಾರೆ. ಇದೇ ಕಾರಣಕ್ಕಾಗಿ ವಕೀಲರನ್ನೂ ಸಹ ಸಂಪರ್ಕಿಸಿ ದ್ದಾರೆ. ಒಂದು ವೇಳೆ ತೀರ್ಪು ಪ್ರಕಟವಾಗುವುದು ಮತ್ತಷ್ಟು ವಿಳಂಬವಾದರೆ ಚುನಾವಣೆಯನ್ನೇ ಮುಂದೂಡಿ ಎಂಬ ವಾದ ಮುಂದಿಟ್ಟಿದ್ದು, ಇಂದು ಸುಪ್ರೀಂಕೋರ್mನಲ್ಲಿ ಇಂತಹ ಅರ್ಜಿಯೊಂದನ್ನು ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ