ದಿನಕ್ಕೊಂದು ತಿರುವು ಪಡೆಯುತ್ತಿರುವ ಪಠ್ಯ ಪುಸ್ತಕ ಗೊಂದಲ..!

ಬೆಂಗಳೂರು

    ಪಠ್ಯಪುಸ್ತಕದಲ್ಲಿ ಟಿಪ್ಪು ಪಠ್ಯವನ್ನು ಕೈಬಿಡುವ ಸಂಬಂಧ ವಾದ-ವಿವಾದ ತಾರಕಕ್ಕೇರಿರುವ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಹುತಾತ್ಮರಾದ ಕೊಡಗಿನ ಸುಬೇದರ್ ಗುಡ್ಡೆಮನೆ ಅಪ್ಪಯ್ಯ ಗೌಡ ಮತ್ತು ಕೆದಂಬಾಡಿ ರಾಮೇಗೌಡರ ಚರಿತ್ರೆಯನ್ನು ಪಠ್ಯ ಪುಸ್ತಕಗಳಲ್ಲಿ ದಾಖಲಿಸಲಿಸಲು ಮುಂದಾಗಿದ್ದಾರೆ.

    ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಭಾರತ ಜ್ಞಾನಾಭಿವೃದ್ಧಿ ಟ್ರಸ್ಟ್ ಆಯೋಜಿಸಿದ್ದ, ಅಮರ ಸುಳ್ಯ ಸಮರ-1837 ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದ ಮುಖ್ಯಮಂತ್ರಿಗಳು ಈ ವಿಷಯ ತಿಳಿಸಿದರು.1837ರಲ್ಲಿ ಅಮರಸುಳ್ಯ ಸಮರ ಎಂದೇ ಪ್ರಸಿದ್ಧವಾದ ಬ್ರಿಟಿಷರ ವಿರುದ್ಧ ಉಗ್ರವಾದ ಹೋರಾಟವನ್ನು ಮಾಡಿ ಅಪ್ಪಯ್ಯಗೌಡ, ರಾಮೇಗೌಡರು ಹುತಾತ್ಮರಾಗಿದ್ದಾರೆ. ಇವರ ಬಗ್ಗೆ ಮುಂದಿನ ಪೀಳಿಗೆಗೆ ತಿಳಿದು ಪಡಿಸುವುದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಪರಿಶೀಲಿಸಿ, ಇವರ ಬಗ್ಗೆ ಪಠ್ಯ ಪುಸ್ತಕಗಳಲ್ಲಿ ಅಳವಡಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಜನ ಸಂಘಟನೆ

    ಕಿತ್ತೂರುರಾಣಿ ಚೆನ್ನಮ್ಮ, ಒನಕೆ ಓಬವ್ವ, ಸಂಗೋಳ್ಳಿ ರಾಯಣ್ಣ, ಬಿದರೂರಿನ ದೊರೆಗಳು ಸೇರಿದಂತೆ ಅನೇಕ ಕನ್ನಡಿಗರು ಸ್ವಾತಂತ್ರ್ಯ ಕ್ಕಾಗಿ ಹೋರಾಟ ಮಾಡಿದ್ದಾರೆ. ಅದರ ಜೊತೆಯಲ್ಲೇ ಮಡಿಕೇರಿ ಅಪ್ಪಯ್ಯ ಗೌಡ, ಕೆದಂಬಾಡಿ ರಾಮೇಗೌಡ ಒಬ್ಬರು. ಅವರು ಜನ ಸಂಘಟನೆ ಮಾಡಿ, ಹೋರಾಟ ಮಾಡಿದರು. ಅವರ ಬಗ್ಗೆ ನಮಗೆ ಗೊತ್ತಿಲ್ಲ. ಅವರ ಬಗ್ಗೆ ಚರಿತ್ರ ಅಲ್ಲಿ ದಾಖಲಿಸುವ ಕೆಲಸ ಆಗಬೇಕು ಎಂದರು.

    ಸ್ವಾತಂತ್ರ್ಯಕ್ಕಾಗಿ ಹಲವು ಜನ ಬಲಿದಾನ ಮಾಡಿದ್ದಾರೆ. ಅವರು ಯುವ ಪೀಳಿಗೆಗೆ ಅರಿವಿಲ್ಲ. ಅದನ್ನು ತಪುಲಿಸುವ ಕಾರ್ಯ ನಡೆಯಬೇಕಿದೆ. ಅನೇಕ ಸ್ವಾತಂತ್ರ್ಯ ಹೋರಾಟಗಾರ ಬಗ್ಗೆ ಇತಿಹಾಸ ಪುಟದಲ್ಲಿ ಮಾಹಿತಿ ಇಲ್ಲ. ಅಂತಹರವನ್ನು ಇತಿಹಾಸ ಸೇರಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.

    ಮಡಿಕೇರಿ , ಸುಳ್ಯವನ್ನು ಮದ್ರಾಸ್ ಪ್ರಾಂತ್ಯಕ್ಕೆ ಸೇರಿಸುವ ಯತ್ನ ನಡೆಯಿತು. ಅದರ ವಿರುದ್ಧ ರೈತರು ಬ್ರಿಟಿಷರ ವಿರುದ್ಧ ದಂಗೆ ಎದ್ದರು. ಉಪ್ಪು, ತಂಬಾಕು ಉತ್ಪನ್ನಗಳ ಮೇಲೆ ವಿಧಿಸುವ ಬ್ರಿಟೀಷರು ಕೆಲಸ ಮಾಡಿದರು. ಅನೇಕರು ಅದರ ವಿರುದ್ಧ ಹೋರಾಟ ಮಾಡಿದರು. ಕೆಲ ಹೋರಾಟ ವಿಷಯಗಳು ಚರಿತ್ರ ಪುಟದಲ್ಲಿ ಇಲ್ಲ. ಅದನ್ನು ಚರಿತ್ರೆಯ ಕಾರರು ಇತಿಹಾಸ ಪುಟ ಸೇರಿಸಬೇಕು ಎಂದು ಯಡಿಯೂರಪ್ಪ ನುಡಿದರು.

ಪ್ರತಿಮೆಗೆ ಮನವಿ

      ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ವಾಸ್ತವವಾಗಿ ದೇಶದ ಸ್ವಾತಂತ್ರ್ಯ ಸಂದರ್ಭದಲ್ಲಿ ದೇಶಕ್ಕಾಗಿ ಬಲಿದಾನವಾದ ವ್ಯಕ್ತಿ ಗಳನ್ನು ಸ್ಮರಿಸುತ್ತಾರೆ. ಆದರೆ, ಅವರ ಆಶಯಗಳನ್ನು, ವಿಚಾರಧಾರೆ ಗಳನ್ನು ಜೊತೆಯಲ್ಲಿ ಕರೆದೊಯ್ಯುವ ಕೆಲಸ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

     ಹುತಾತ್ಮ ಅಪ್ಪಯ್ಯಗೌಡ ಮತ್ತು ರಾಮೇಗೌಡರ ಪ್ರತಿಮೆ ಯನ್ನು ರಾಜಧಾನಿ ನವದೆಹಲಿಯಲ್ಲಿ ಸ್ಥಾಪಿಸಬೇಕು ಜೊತೆಗೆ ಅವರ ಹೆಸರಿನಲ್ಲಿ ಕನ್ನಡ ಭವನವನ್ನು ಸ್ಥಾಪಿಸಬೇಕು ಬೆಂಗಳೂರಿನಲ್ಲಿರುವ ದಂಡುಪ್ರದೇಶದ ರೈಲು ನಿಲ್ದಾಣಕ್ಕೆ ನಾಮಕರಣ ಮಾಡಿ ರೈಲು ನಿಲ್ದಾಣದ ಮುಂದೆ ಅವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಭಾರತ ಜ್ಞಾನಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ತಲಕಾಡು ಚಿಕ್ಕರಂಗೇಗೌಡ ಅವರು ಮನವಿ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ, ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ, ಸಚಿವ ಆರ್.ಅಶೋಕ್ ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಪ್ರಮುಖರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link