ತುರುವೇಕೆರೆ:
ಪಟ್ಟಣದ ಇಂದಿರಾ ನಗರದ ಪೊಲೀಸ್ ಕ್ವಾಟ್ರಸ್ ಹಿಂಭಾಗದ ಸ್ಥಳಕ್ಕೆ ಪೊಲೀಸರು ತಂತಿ ಬೇಲಿ ಹಾಕಿರುವುದನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಹಾಗು ಶಾಲಾ, ಕಾಲೇಜು ವಿದ್ಯಾರ್ಥಿಗಳ ಓಡಾಟಕ್ಕೆ ಅನುವು ಮಾಡಿಕೊಡಬೇಕೆಂದು ಇಂದಿರಾನಗರದ ವಾಸಿಗಳು ಇಲ್ಲಿನ ಸಿಪಿಐ ಕಚೇರಿಯ ಪೊಲೀಸರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಇಂದಿರಾ ನಗರದ ಪೊಲೀಸ್ ಕ್ವಾಟ್ರಸ್ ಹಿಂಭಾಗದ ರಸ್ತೆಯಲ್ಲಿ ಬಹಳ ವರ್ಷಗಳಿಂದಲೂ ಇಂದಿರಾನಗರ ಮತ್ತು 6ನೆ ವಾರ್ಡ್‍ನ ಜನರು ನಿತ್ಯ ಓಡಾಡುತ್ತಿದ್ದರು. ಇದೇ ಮಾರ್ಗದಲ್ಲಿ ಜೆಪಿ ಕಾನ್ವೆಂಟ್, ಸಾರ್ವಜನಿಕ ಆಸ್ಪತ್ರೆ, ಹೊಸ ಬಸ್ ನಿಲ್ದಾಣ, ಜಿಜೆಸಿ ಕಾಲೇಜು ಹೀಗೆ ನೂರಾರು ಜನರು ಇಲ್ಲಿ ಸಂಚರಿಸುತ್ತಾರೆ.
ಅಲ್ಲದೆ ವಿದ್ಯಾನಗರಕ್ಕೆ ಹೋಗುವವರಿಗೂ ಬಹಳ ಅನುಕೂಲವಾಗುತ್ತಿತ್ತು. ಮೊನ್ನೆ ಪೊಲೀಸ್ ಅಧಿಕಾರಿಗಳು ಈ ಜಾಗ ಪೊಲೀಸ್ ಇಲಾಖೆಗೆ ಸೇರಿದ್ದೆಂದು ಜನರು ತಿರುಗಾಡುತ್ತಿದ್ದ ಸ್ಥಳಕ್ಕೆ ತಂತಿ ಬೇಲಿ ಹಾಕಿದ್ದಾರೆ. ಇದರಿಂದ ಇಂದಿರಾನಗರ ಮತ್ತು 6ನೆ ವಾರ್ಡ್‍ನ ಜನರು ತಮ್ಮ ಯಾವುದೇ ಕೆಲಸ ಕಾರ್ಯಗಳಿಗಾಗಿ ದಬ್ಬೇಘಟ್ಟ ರಸ್ತೆ ಮೂಲಕ ಅಥವಾ ಮಾಯಸಂದ್ರ ರಸ್ತೆ ಮೂಲಕವೇ ಸಂಚರಿಸಿ, ವ್ಯವಹರಿಸಬೇಕಾಗಿದೆ.
ಆಗಾಗಿ ವಯಸ್ಸಾದವರು, ರೋಗಿಗಳು, ಗರ್ಭಿಣಿ ಸ್ತ್ರಿಯರು ಆಸ್ಪತ್ರೆಗೆ ಹೋಗಲು ಮತ್ತು ಪುಟ್ಟ ಶಾಲಾ ಮಕ್ಕಳು ಶಾಲೆಗೆ ತೆರಳು ಕಷ್ಟಪಡುವಂತಾಗಿದ್ದಿ ಇರುವ ಜಾಗದಲ್ಲೇ ಇಲ್ಲಿನ ಜನರ ಓಡಾಟಕ್ಕೆ ಸ್ವಲ್ಪ ಸ್ಥಳ ನೀಡ ಬೇಕೆಂದು ಇಂದಿರಾನಗರದ ವಾಸಿಗಳು ಅಳಲು ತೋಡಿಕೊಂಡರು.
ಇದಕ್ಕೂ ಮುನ್ನಾ ನೂರಾರು ಮಹಿಳೆಯರು, ಮಕ್ಕಳು, ವೃದ್ದರು ಸಿಪಿಐ ಕಚೇರಿ ಮುಂದೆ ಸೇರಿ ಪೊಲೀಸ್ ಸಿಬ್ಬಂದಿಗಳಿಗೆ ತಮ್ಮ ಸಮಸ್ಯೆ ನಿವೇದಿಸಿಕೊಂಡರು. ಸಿಪಿಐ ಮಹಮದ್‍ಸಲೀಂ ಕಚೇರಿಯಲ್ಲಿ ಇಲ್ಲದ್ದರಿಂದ ಎಎಸ್‍ಐ ಶಿವಲಿಂಗಯ್ಯ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ 6ನೆ ವಾರ್ಡ್‍ನ ಪ.ಪಂ ಸದಸ್ಯ ಚಿದಾನಂದ್, ಇಂದಿರಾ ನಗರದ ನಿವಾಸಿಗಳಾದ ಅಬ್ಜಲ್, ಯೋಗೀಶ್ ಮಂಜು, ಸುರೇಶ್, ಉಮೇಶ್ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ