ದಾವಣಗೆರೆ:
ಕೊರೋನಾ ಲಾಕ್‍ಡೌನ್‍ನಿಂದಾಗಿರೈತರುಜಿಲ್ಲಾಕೇಂದ್ರಕ್ಕೆತೋಟಗಾರಿಕೆ ಉತ್ಪನ್ನಗಳನ್ನು ತರುವುದೇಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿರೈತರ ನೆರವಿಗೆ ಕೃಷಿ ಪರಿಕರ ಮಾರಾಟಗಾರರು ಮುಂದೆ ಬಂದಿದ್ದಾರೆ.
ಕೋವಿಡ್-19 ಸೋಂಕು ಹರಡುವುದನ್ನುತಡೆಗಟ್ಟಲು ಸರ್ಕಾರ ಲಾಕ್‍ಡೌನ್ ಘೋಷಿಸಿದೆ.ಆದರೆರೈತರು ಕೈಗೆ ಬಂದ ಫಸಲನ್ನು ಮಾರುಕಟ್ಟೆಗೆಕೊಂಡೊಯ್ಯಲಾಗದೆ, ಉತ್ಪನ್ನಗಳು ಜಮೀನಿನಲ್ಲೇ ಕೊಳೆಯುತ್ತಿವೆ. ಇಂತಹ ಸಂದರ್ಭದಲ್ಲಿ ಸಂಕಷ್ಟದಲ್ಲಿರುವರೈತರ ಅನುಕೂಲಕ್ಕಾಗಿ ದೇವನಗರಿತೋಟಗಾರಿಕೆರೈತಉತ್ಪಾದಕ ಕಂಪನಿ ಮುಂದಾಗಿದ್ದು, ಇದೀಗ ದಾವಣಗೆರೆಜಿಲ್ಲಾ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟಗಾರರ ಸಂಘದ ಸಹಕಾರವೂ ಸಿಕ್ಕಿದೆ.
ಹುಚ್ಚವ್ವನಹಳ್ಳಿ, ಕೊಡಗನೂರು, ಹೆದ್ನೆ, ಬಸಾಪುರ ಸೇರಿದಂತೆತಾಲೂಕು ವಿವಿಧ ಕಡೆಗಳಲ್ಲಿ ಎಪಿಎಂಸಿ ನಿಗಧಿಪಡಿಸಿರುವ ದರಕ್ಕಿಂತ ಶೇ.5ರಷ್ಟು ಹೆಚ್ಚು ಬೆಲೆಯಲ್ಲಿರೈತರಿಂದ ನೇರವಾಗಿತರಕಾರಿಖರೀದಿಸುತ್ತಿರುವದೇವನಗರಿಕಂಪನಿಯುಜಿಲ್ಲಾಕೇಂದ್ರದಲ್ಲಿ ಮನೆ-ಮನೆಗೆ ಕೊಂಡೊಯ್ದು ಮಾರಾಟ ಮಾಡುತ್ತಿದೆ. ಆದರೆರೈತರಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಲಾಭರಹಿತ ಸೇವೆಯಲ್ಲಿತೊಡಗಿಕೊಂಡಿರುವ ಕಂಪನಿಗೆ ಸಾಗಾಣಿಕೆಯದ್ದೇ ಸಮಸ್ಯೆಯಾಗಿದೆ.
ವಿಷಯ ತಿಳಿದ ಜಿಲ್ಲಾ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟಗಾರರ ಸಂಘದವರುಒಂದು ತಿಂಗಳ ಮಟ್ಟಿಗೆ ಬಾಡಿಗೆ ವಾಹನದ ವ್ಯವಸ್ಥೆ ಮಾಡುವಜೊತೆಗೆ ಕಂಪನಿಗಾಗಿ ಸ್ವಂತ ವಾಹನ ಖರೀದಿಸಲೂ ನೆರವು ನೀಡುತ್ತಿದ್ದಾರೆ.ಕಳೆದ ಏ.14ರಿಂದಲೂ ರೈತರಿಂದ ಸೌತೆಕಾಯಿ, ಹೀರೇಕಾಯಿ, ಚವಳಿ ಕಾಯಿ, ಈರುಳ್ಳಿ, ಟೊಮ್ಯಾಟೊ, ಮೆಣಸಿನ ಕಾಯಿ, ತೆಂಗಿನ ಕಾಯಿ ಹೀಗೆ ಅನೇಕ ಉತ್ಪನ್ನಗಳನ್ನು ಖರೀದಿಸುತ್ತಿರುವಕಂಪನಿಯು, ಈಗಾಗಲೇ ಸುಮಾರು 3 ಲಕ್ಷದಷ್ಟುಉತ್ಪನ್ನ ಖರೀದಿಸಿ ಗ್ರಾಹಕರಿಗೆ ತಲುಪಿಸಿದೆ.
ಇದರಿಂದಾಗಿತಾಲೂಕಿನ ನೂರಾರುರೈತರಿಗೆ ಅನುಕೂಲವಾಗಿದೆ.ಯಾವುದೇ ಲಾಭದಅಪೇಕ್ಷೆಇಲ್ಲದೆ ಮಾಡುತ್ತಿರುವ ಕೆಲಸದಲ್ಲಿ ನಷ್ಟವಾದರೂ ನಾವೇ ಭರಿಸಬೇಕಾಗುತ್ತದೆ.ಹೀಗಿರುವಾಗ ಕೃಷಿ ಪರಿಕರ ಮಾರಾಟಗಾರರು ನೆರವು ನೀಡಲು ಮುಂದಾಗಿರುವುದರಿಂದ ಸಾಕಷ್ಟು ರೈತರಿಗೆ ಪ್ರಯೋಜನವಾಗಲಿದೆಎನ್ನುತ್ತಾರೆ ಕಂಪನಿ ಅಧ್ಯಕ್ಷ ಹೆದ್ನೆ ಮುರುಗೇಶಪ್ಪ.
ತಾಲೂಕಿನ ಹೆದ್ನೆಗ್ರಾಮಕ್ಕೆ ಭೇಟಿ ನೀಡಿದ್ದಜಿಲ್ಲಾ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟಗಾರರ ಸಂಘದವರುರೈತರಿಗೆ ಅನುಕೂಲವಾಗುವಂತೆ ಕಂಪನಿ ಉಪಯೋಗಕ್ಕೆ ವಾಹನ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದರು. ಇದೇ ವೇಳೆ ಸಂಘದಅಧ್ಯಕ್ಷ ಹಾಗೂ ಬಿಜೆಪಿ ರೈತ ಮೋರ್ಚಾಜಿಲ್ಲಾಧ್ಯಕ್ಷಲೋಕಿಕೆರೆ ನಾಗರಾಜ್ ಹಾಗೂ ತಂಡದವರು ಕುಂಬಳಕಾಯಿ ಬೆಳೆ ನಷ್ಟ ಅನುಭವಿಸಿರುವ ರೈತರ ಜಮೀನುಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು.ಸಂಘದಿಂದರೈತರಿಗೆ 30 ಸಾವಿರಕ್ಕೂಅಧಿಕ ಪರಿಹಾರ ವಿತರಿಸಲಾಯಿತು.
ಈ ಸಂದರ್ಭದಲ್ಲಿಸಂಘದ ಕಾರ್ಯದರ್ಶಿ ಕೆ.ಎಂ.ಉಮಾಪತಯ್ಯ, ಖಜಾಂಚಿ ಶಾಂತರಾಜ್, ನಿರ್ದೇಶಕರಾದ ವಿ.ಪಿ.ಕೃಷ್ಣಮೂರ್ತಿ, ಸೋಮಶೇಖರ, ಉಮೇಶ, ಕಂಪನಿ ಸಿಇಓ ಶಿವಕುಮಾರ, ನಿರ್ದೇಶಕರಾದಕಂಬಾರ್‍ರಾಜು, ವಿಜಯಕುಮಾರ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
