ಎಂ ಎನ್ ಕೋಟೆ :
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಮುದ್ದಪುರ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿ ಮುಗಿದರೂ ಕೂಡ ಇನ್ನು ಉದ್ಘಾಟನೆ ಭಾಗ್ಯ ಕಂಡಿಲ್ಲ ಎಂದು ಮುದ್ದಪುರ ಗ್ರಾಮಸ್ತರು ಅರೋಪಿಸಿದ್ದಾರೆ.ಅಂಗನವಾಡಿ ಕಟ್ಟಡ ರೆಡೆಯಾಗಿ ಸುಮಾರು 6ತಿಂಗಳು ಕಳೆದಿದೆ. ಆದರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ ದಿಂದ ಇನ್ನು ಅಂಗನವಾಡಿ ಕಟ್ಟಡ ಉದ್ಘಾಟನೆಯಗಿಲ್ಲ ಅಂಗನವಾಡಿ ಕಟ್ಟಡ ಇಲ್ಲದೆ ಬೇರೆ ಕಡೆ ಮಕ್ಕಳಿಗೆ ಪಾಠ ಕೇಳುವ ಪರಿಸ್ಥಿತಿ ಎದುರಾಗಿದೆ.
ಹೊಸದಾಗಿ ಅಂಗನವಾಡಿ ಕಟ್ಟಡ ಕಾಮಾಗಾರಿ ಮುಗಿದು ಇಲ್ಲಿಗೆ 6 ತಿಂಗಳೂ ಕಳೆದರೂ ಕಟ್ಟಡ ಉದ್ಗಾಟನೆಯಾಗಿಲ್ಲ ಅಂಗನವಾಡಿ ಕಟ್ಟಡ ಇಲ್ಲದೇ ಬೇರೆ ಕೊಠಡಿಯಲ್ಲಿ ಮಕ್ಕಳಿಗೆ ಪಾಠ ಕೇಳುವ ಪರಿಸ್ಥಿತಿ ಎದುರಾಗಿದೆ. ಅಂಗನವಾಡಿಯಲ್ಲು ಸುಮಾರು 18 ಮಕ್ಕಳು ಇವೆ ಆದರೆ ಹೊಸ ಅಂಗನವಾಡಿ ಕಟ್ಟಡವನ್ನು ಜನ ಪ್ರತಿನಿಧಿಗಳು ಇನ್ನು ಉದ್ಘಾಟನೆ ಮಾಡದೇ ಅಂಗನವಾಡಿ ಶಾಲಾ ಮಕ್ಕಳ ಜೂತೆ ಚಲ್ಲಾಟವಾಡುತ್ತಿದ್ದಾರೆ. ತ್ಯಾಗಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಓ ನಿರ್ಲಕ್ಷದಿಂದ ಇನ್ನು ಕಟ್ಟಡ ಉದ್ಘಾಟನೆ ಭಾಗ್ಯ ಕಂಡಿಲ್ಲ ಎಂದು ಮುದ್ದಪುರ ಗ್ರಾಮಸ್ತರು ಆರೋಪಿಸಿದ್ದಾರೆ.
ಅಂಗನವಾಡಿ ಕಟ್ಟಡ ಕಾಮಾಗಾರಿ ಮುಗಿದಿದೆ ಇದು ನನ್ನ ಗಮನಕ್ಕೆ ಬಂದಿದೆ. ಅದಷ್ವು ಬೇಗ ಅಂಗನವಾಡಿ ಕಟ್ಟಡವನ್ನು ಪ್ರಾರಂಭಮಾಡಲು ಅಧ್ಯಕ್ಷರು ಹಾಗೂ ಪಿಡಿಓ ಗಮನಕ್ಕೆ ತಂದು ಅಂಗನವಾಡಿ ಕಟ್ಟಡವನ್ನು ಶೀಘ್ರದಲ್ಲಿ ಪ್ರಾರಂಭ ಮಾಡಲಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
