ಬೆಂಗಳೂರು :
ಸೆಪ್ಟೆಂಬರ್ 14ರಿಂದ ಜೈಲಿನಲ್ಲಿರುವಂತ ನಟಿ ರಾಗಿಣಿ ಹಾಗೂ ಸೆ.16ರಿಂದ ಜೈಲಿನಲ್ಲಿರುವ ನಟಿ ಸಂಜನಾ ಅವರು ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದಂತ ಎನ್ ಡಿ ಪಿ ಎಸ್ ಕೋರ್ಟ್, ಇಬ್ಬರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಈ ಮೂಲಕ ಮತ್ತೆ ಜೈಲೇ ಗತಿ ಎಂಬಂತೆ ಆಗಿದೆ.
ನಟಿ ರಾಗಿಣಿ, ನಟಿ ಸಂಜನಾ ಸೇರಿದಂತೆ ಐವರು ಸ್ಯಾಂಡಲ್ ವುಡ್ ಪ್ರಕರಣದ ಆರೋಪಿಗಳು ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಇಂದು ಎನ್ ಡಿ ಪಿ ಎಸ್ ಕೋರ್ಟ್ ನ ನ್ಯಾಯಾಧೀಶರಾದಂತ ಸೀನಪ್ಪ ಅವರು ವಿಚಾರಣೆ ನಡೆಸಿದರು. ಮೊದಲು ಮೂವರು ಆರೋಪಿಗಳ ಜಾಮೀನು ಅರ್ಜಿಯನ್ನು ಸೆ.30ಕ್ಕೆ ಮುಂದೂಡಿ ಆದೇಶ ಹೊರಡಿಸಿದ್ದರು.
ಈ ಬಳಿಕ ನಟಿ ಸಂಜನಾ, ನಟಿ ರಾಗಿಣಿ ಹಾಗೂ ಪ್ರಕರಣದ ಎ1 ಆರೋಪಿ ಶಿವ ಪ್ರಕಾಶ್, ಸಂಜನಾ ಆಪ್ತ ರಾಹುಲ್ ಮತ್ತು ವಿನಯ್ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದರು. ಇಂತಹ ಜಾಮೀನು ಅರ್ಜಿಯನ್ನು ಎನ್ ಡಿ ಪಿ ಎಸ್ ಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಎಲ್ಲರಿಗೂ ಜೈಲೇ ಗತಿ ಎಂಬಂತೆ ಆಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ