ತುಮಕೂರು
ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2019 ರ ಫೆಬ್ರವರಿಯಿಂದ ಜುಲೈ ತಿಂಗಳವರೆಗಿನ ಆರು ತಿಂಗಳ ಅವಧಿಯಲ್ಲಿ ದಾಖಲಾಗಿರುವ ಶಿಶು ಜನನದ ಮಾಹಿತಿಯಲ್ಲಿ ಹೆಣ್ಣು ಶಿಶುಗಳಿಗಿಂತ ಗಂಡು ಶಿಶುಗಳ ಜನನವೇ ಅಧಿಕವಾಗಿರುವ ಸ್ವಾರಸ್ಯಕರ ಅಂಶ ಬೆಳಕಿಗೆ ಬಂದಿದೆ.
ಈ ಅವಧಿಯಲ್ಲಿ ಒಟ್ಟು 6,353 ಶಿಶುಗಳು ಜನಿಸಿವೆ. ಇದರಲ್ಲಿ 3,272 ಗಂಡು ಶಿಶುಗಳಿದ್ದರೆ, 3,081 ಹೆಣ್ಣುಶಿಶುಗಳಿವೆ. ಲಿಂಗಾನುಪಾತದಲ್ಲಿ ಇರುವ ವ್ಯತ್ಯಾಸವು ಇದೀಗ ಚರ್ಚೆಗೆಡೆಮಾಡುವ ಸಂಗತಿಯಾಗಿದೆ.
ಮಾಹೆಯಾನ ವಿವರ
2019 ರ ಫೆಬ್ರವರಿಯಲ್ಲಿ 523 ಗಂಡು ಹಾಗೂ 445 ಹೆಣ್ಣು ಸೇರಿ ಒಟ್ಟು 968 ಶಿಶುಗಳು ಜನಿಸಿವೆ. ಮಾರ್ಚಿ ತಿಂಗಳಿನಲ್ಲಿ 616 ಗಂಡು ಹಾಗೂ 569 ಹೆಣ್ಣು ಸೇರಿ ಒಟ್ಟು 1,185 ಶಿಶುಗಳು ಜನಿಸಿವೆ. ಏಪ್ರಿಲ್ ಮಾಹೆಯಲ್ಲಿ 560 ಗಂಡು ಹಾಗೂ 504 ಹೆಣ್ಣು ಸೇರಿ ಒಟ್ಟು 1,064 ಶಿಶುಗಳು ಜನಿಸಿವೆ. ಮೇ ತಿಂಗಳಿನಲ್ಲಿ 548 ಗಂಡು ಹಾಗೂ 552 ಹೆಣ್ಣು ಸೇರಿ ಒಟ್ಟು 1,100 ಶಿಶುಗಳು ಜನಿಸಿವೆ. ಜೂನ್ ತಿಂಗಳಿನಲ್ಲಿ 496 ಗಂಡು ಹಾಗೂ 508 ಹೆಣ್ಣು ಸೇರಿ ಒಟ್ಟು 1,004 ಶಿಶುಗಳ ಜನನವಾಗಿವೆ. ಜುಲೈ ತಿಂಗಳಿನಲ್ಲಿ 529 ಗಂಡು ಮತ್ತು 503 ಹೆಣ್ಣು ಸೇರಿ ಒಟ್ಟು 1,032 ಶಿಶುಗಳು ಜನಿಸಿವೆ ಎಂಬ ಕುತೂಹಲಕರ ಸಂಗತಿ ಬೆಳಕಿಗೆ ಬಂದಿದೆ.
ಮರಣ ಪ್ರಮಾಣ
ಇದೇ ಅವಧಿಯಲ್ಲಿ ಅಂದರೆ 2019 ರ ಫೆಬ್ರವರಿಯಲ್ಲಿ ಗಂಡು-182, ಹೆಣ್ಣು-93 ಸೇರಿ ಒಟ್ಟು-275, ಮಾರ್ಚ್ ತಿಂಗಳಿನಲ್ಲಿ ಗಂಡು-167, ಹೆಣ್ಣು-109, ಒಟ್ಟು- 276, ಏಪ್ರಿಲ್ ತಿಂಗಳಿನಲ್ಲಿ ಗಂಡು-140, ಹೆಣ್ಣು-91 ಸೇರಿ ಒಟ್ಟು- 231, ಮೇ ತಿಂಗಳಿನಲ್ಲಿ ಗಂಡು-159, ಹೆಣ್ಣು- 77 ಸೇರಿ ಒಟ್ಟು- 236, ಜೂನ್ ತಿಂಗಳಿನಲ್ಲಿ ಗಂಡು-148, ಹೆಣ್ಣು-86 ಸೇರಿ ಒಟ್ಟು- 234, ಜುಲೈ ತಿಂಗಳಿನಲ್ಲಿ ಗಂಡು -190, ಹೆಣ್ಣು-97 ಸೇರಿ ಒಟ್ಟು 287 ಜನರು ಮರಣ ಹೊಂದಿರುವ ಬಗ್ಗೆ ದಾಖಲಾಗಿದೆ. ದಾಖಲಾತಿಗಳ ಪ್ರಕಾರ ಗಂಡು-986 ಹಾಗೂ ಹೆಣ್ಣು-553 ಸೇರಿ ಒಟ್ಟು 1,539 ಜನರು ಮೃತರಾಗಿರುವ ಬಗ್ಗೆ ದಾಖಲಾಗಿದೆ.
ನಿರ್ಜೀವ ಶಿಶು ಜನನ
ಫೆಬ್ರವರಿಯಲ್ಲಿ ಗಂಡು-5, ಹೆಣ್ಣು-3, ಮಾರ್ಚ್ ತಿಂಗಳಿನಲ್ಲಿ ಗಂಡು-4, ಹೆಣ್ಣು-7, ಏಪ್ರಿಲ್‍ನಲ್ಲಿ ಗಂಡು-6, ಹೆಣ್ಣು-2, ಮೇ ತಿಂಗಳಿನಲ್ಲಿ ಗಂಡು-5, ಹೆಣ್ಣು- 2, ಜೂನ್ ತಿಂಗಳಿನಲ್ಲಿ ಗಂಡು-5, ಹೆಣ್ಣು-8, ಜುಲೈ ತಿಂಗಳಿನಲ್ಲಿ ಗಂಡು-6, ಹೆಣ್ಣು-1 ಹೀಗೆ ಒಟ್ಟು 31 ಗಂಡು ಹಾಗೂ 23 ಹೆಣ್ಣು ಸೇರಿ ಒಟ್ಟು 54 ನಿರ್ಜೀವ ಶಿಶುಗಳು ಜನಿಸಿವೆ ಎಂದು ದಾಖಲಾತಿಗಳು ತಿಳಿಸುತ್ತಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ