ಚಿಕ್ಕನಾಯಕನಹಳ್ಳಿ
ಚಿಪ್ಪು ಎಂದರೆ ಹಲವರು ಕೇವಲವಾಗಿ ಮಾತನಾಡುತ್ತಾರೆ, ಆದರೆ ಈ ಚಿಪ್ಪು ಅಂತರಾಷ್ಟ್ರೀಯ ಮಟ್ಟದಲ್ಲಿ ಬಹಳ ಬೇಡಿಕೆಯ ವಸ್ತು ಎಂಬುದು ಯಾರಿಗೂ ತಿಳಿದಿಲ್ಲ, ಚಿಕ್ಕನಾಯಕನಹನಹಳ್ಳಿ ಚಿಪ್ಪಿಗೆ ಅಮೇರಿಕಾದಂತಹ ರಾಷ್ಟ್ರದಲ್ಲಿ ಹೆಚ್ಚಿನ ಮನ್ನಣೆಯಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಪಟ್ಟಣದ ನಿವಾಸಿ ಗ್ಯಾಸ್ ರವಿ. ರಾಜ್ಯದಲ್ಲಿ ಹಲವರು ಚಿಪ್ಪಿನ ಬಗ್ಗೆ ಮಾತನಾಡುವಾಗ ಚಿಕ್ಕನಾಯಕನಹಳ್ಳಿ ಚಿಪ್ಪು ಹಿಡಿಯಬೇಕಾಗುತ್ತದೆ ಎಂದು ಛೇಡಿಸಿ ಮಾತನಾಡುತ್ತಿದ್ದರು,
ಅಂತಹ ಚಿಪ್ಪು ಉದ್ಯೋಗಕ್ಕೆ ದಾರಿಯಾಗಿರುವ ಜೊತೆಗೆ ರಾಷ್ಟ್ರವಲ್ಲದೆ, ಅಂತರಾಷ್ಟ್ರೀಯ ಭಾಗದಲ್ಲಿ ಬಹಳ ಬೇಡಿಕೆಯ ವಸ್ತುವಾಗಿದೆ ಹಾಗೂ ಆನ್ ಲೈನ್ ಶಾಪಿಂಗ್ ತಾಣಗಳಲ್ಲೂ ಮಾರಾಟವಾಗುತ್ತಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕು ಸೇರಿದಂತೆ ಸುತ್ತೇಳು ತಾಲೂಕುಗಳು ತೆಂಗಿಗೆ ಬಹಳ ಹೆಸರುವಾಸಿ, ಈ ಭಾಗಗಳಲ್ಲಿ ತೆಂಗಿನ ಉತ್ಪನ್ನವಾದಂತಹ ಕೊಬ್ಬರಿ ರಕ್ಷಣೆಯಾದ ಕರಟಕ(ಚಿಪ್ಪು) ಬಳಸಿಕೊಂಡು ಸುಟ್ಟು ಇದ್ದಿಲನ್ನು ಮಾಡುತ್ತಾರೆ. ಈ ಚಿಪ್ಪು, ಇದ್ದಿಲಿಗೆ ಮಾತ್ರ ಸೀಮಿತವಾಗಿಲ್ಲ ಇದನ್ನು ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಬಳಸುತ್ತಾರೆ ಎಂದು ತಿಳಿದು ಬಂದಿದೆ.
ನಮ್ಮ ದೇಶದಲ್ಲಿ ಪ್ಲಾಸ್ಟಿಕ್ ಗ್ಲಾಸ್ ಗಳು, ಲೋಟಗಳು, ಪೇಪರ್ ಕಪ್ ಗಳನ್ನು ಬಳಸಿದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ವಸ್ತುಗಳಿಗೆ ಮನ್ನಣೆ ಇದೆ, ಚಿಪ್ಪಿನಲ್ಲಿ ಐಸ್ ಕ್ರಿಂ ಕಪ್ ಗಳಾಗಿ, ಕಾಫಿ ಹಾಗೂ ಟೀ ಕಪ್ ಗಳನ್ನೂ ಇಂತಹ ಚಿಪ್ಪಿನಿಂದ ತಯಾರಿಸುತ್ತಾರೆ ಹಾಗಾಗಿ ಚಿಪ್ಪಗೆ ಬೇಡಿಕೆ ಇದೆ ಎನ್ನಲಾಗಿದೆ.
ಉತ್ತಮ ಗುಣಮಟ್ಟದ ಚಿಪ್ಪು ತಂದು ಕಪ್ ಗಳನ್ನು ತಯಾರಿಸಲು ಉತ್ಪಾದನೆ ವೆಚ್ಚ ಸೇರಿ 7ರೂ ವರೆಗೆ ಖರ್ಚುತಗಲುತ್ತದೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಇದರ ಬೆಲೆ ಹೆಚ್ಚಿರುತ್ತದೆ.ಅಂದದ ಚಿಪ್ಪಿನ ತಯಾರಿಕೆಯಲ್ಲಿ ತೊಡಗಿರುವ ಗ್ಯಾಸ್ ರವಿ ಚಿಪ್ಪಿಗೆ ಇರುವ ಬೇಡಿಕೆ ಬಗ್ಗೆ ತಿಳಿಸಿದರು. ಜೊತೆಗೆ ನಮ್ಮ ತಾಲ್ಲೂಕು ಸುತ್ತಮುತ್ತ ಹಳ್ಳಿಗಳು ಕಲ್ಪತರು ನಾಡಾಗಿದ್ದು ಹೆಚ್ಚು ತೆಂಗನ್ನು ಬೆಳೆಯುತ್ತಾರೆ ಹಾಗಾಗಿ ಈ ಭಾಗದಲ್ಲಿ ಚಿಪ್ಪು ದೊರೆಯಲಿದ್ದು ಯಂತ್ರ ಕೊಂಡು ಈ ಉದ್ಯೋಗವನ್ನೂ ಆರಂಭಿಸಿದೆ ಎನ್ನುತ್ತಾರೆ.
ಚಿಪ್ಪನ್ನು ಬೇಡಿಕೆಗೆ ಬೇಕಾದಂತಹ ರೀತಿಯಲ್ಲಿ ಶೃಂಗರಿಸುವ ರೀತಿಯ ಯಂತ್ರವನ್ನು ಕೊಂಡು ಚಿಪ್ಪಿನ ಉತ್ಪಾದನೆ ಮಾಡಲಾಗಿದೆ, ಈಗಾಗಲೇ ನಾವು ಸಿದ್ದಪಡಿಸಿರುವ ಚಿಪ್ಪನ್ನು ರಫ್ತು ಮಾಡಲಾಗುತ್ತಿದ್ದು, ಚಿಪ್ಪಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬಹಳ ಬೇಡಿಕೆ ಇರುವುದಂತೂ ನಿಜ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
