ತಾಲ್ಲೂಕಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಸಮಿತಿ ಒಪ್ಪಿಗೆ

ಹಿರಿಯೂರು

    ತಾಲ್ಲೂಕಿನ ವಿ.ವಿ.ಸಾಗರ ಜಲಾಶಯದ ಜಲಮೂಲದಿಂದ ವಾಣಿವಿಲಾಸಪುರ ಮತ್ತು ಇತರೆ 11 (ಹನ್ನೊಂದು) ಗ್ರಾಮಗಳಿಗೆ ಜಲಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿಯಲ್ಲಿ ರೂ.819.80 ಕೋಟಿ ವೆಚ್ಚದಲ್ಲಿ ಶಾಶ್ವತ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರು ಮತ್ತು ಮೇಲಾಧಿಕಾರಿಗಳು ಸಂಪೂರ್ಣ ಒಪ್ಪಿಗೆ ನೀಡಿ ಮಂಜೂರು ಮಾಡಿದ್ದಾರೆ.

    ಹಿರಿಯೂರು ತಾಲ್ಲೂಕಿನ ವಾಣಿವಿಲಾಸಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 11 (ಹನ್ನೊಂದು) ಗ್ರಾಮಗಳಾದ ವಿ.ವಿ.ಪುರ, ಭರಮಗಿರಿ, ಕುರುಬರಹಳ್ಳಿ, ಬಳಘಟ್ಟ, ತಳವಾರಹಟ್ಟಿ, ಕುಂಟಪ್ಪನಹಟ್ಟಿ, ಕಕ್ಕಯ್ಯನಹಟ್ಟಿ, ಅಗಳೇರಹಟ್ಟಿ, ಕಂಬದಹಳ್ಳಿ, ಅಮ್ಮನಹಟ್ಟಿ, ಮೇಕೇನಹಳ್ಳಿ (ಲಂಬಾಣಿ ತಾಂಡ) ಪ್ರಸ್ತಾವಿತ ಗ್ರಾಮಗಳಿಗೆ ವಾಣಿವಿಲಾಸ ಸಾಗರ ಜಲಾಶಯದ ಪಕ್ಕದಲ್ಲಿರುವ ಲಕ್ಕಿಹಳ್ಳಿ ರಿ.ಸ.ನಂ.16 ಮತ್ತು 17ರಲ್ಲಿ ಗುಡ್ಡದ ಮೇಲೆ (ಗಾಳಿ ಯಂತ್ರಗಳನ್ನು ಅಳವಡಿಸಿರುವ ಪಕ್ಕದಲ್ಲಿ) ಹೆಚ್ಚುವರಿ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಸಂಪ್ ಪಂಪ್ ನಿರ್ಮಾಣ ಮಾಡಲಾಗಿದ್ದು ಅಲ್ಲಿಂದ ಕುಡಿಯುವ ನೀರು ಪೂರೈಸಲು ಪಂಪು ಮತ್ತು ಮೋಟಾರ್‍ಗಳ ಸಾಮರ್ಥ್ಯ, ಏರು ಕೊಳವೆ ಮಾರ್ಗದ ವಿನ್ಯಾಸ ಹಾಗೂ ಗುರುತ್ವಾಕರ್ಷಕ ವಿತರಣಾ ಪೈಪ್ ಮಾರ್ಗಗಳ ಸಾಮರ್ಥ್ಯ, ವಿದ್ಯುತ್ ಶಕ್ತಿಯ ಸಾಮರ್ಥ್ಯದ ವಿನ್ಯಾಸ ಹಾಗೂ ಬಹು ಮುಖ್ಯವಾಗಿ ವಾಣಿವಿಲಾಸಪುರ ಗ್ರಾಮ ಪಂಚಾಯಿತಿಯ ಎಲ್ಲ 11 (ಹನ್ನೊಂದು) ಗ್ರಾಮಗಳ ಕುಡಿಯುವ ನೀರು ಸರಬರಾಜು ಜಲಮೂಲಗಳ ನೀರಿನ ಗುಣಮಟ್ಟದ ಪರೀಕ್ಷಾ ಪ್ರಯೋಗಾಲಯದ ವರದಿ ಮತ್ತು ವಿ.ವಿ.ಪುರ ರೇಖಾ ಅಂದಾಜು ಪಟ್ಟಿಯನ್ನು ಜಲ ಜೀವನ್ ಮಿಷನ್ ಯೋಜನೆಯಡಿ 819.80 ಕೋಟಿ ರೂ.ಗಳ ವೆಚ್ಚದಲ್ಲಿ ಶಾಶ್ವತ ಶುದ್ಧ ಕುಡಿಯುವ ನೀರು ಸರಬರಾಜಿಗಾಗಿ ಪ್ರಸ್ತಾಪಿತ ಎಲ್ಲಾ ಗ್ರಾಮಗಳನ್ನು ತಾಲ್ಲೂಕು ನಕ್ಷೆಯಲ್ಲಿ ವಿವಿಧ ಬಣ್ಣಗಳಲ್ಲಿ ಗುರುತು ಮಾಡಿ ನೀರಿನ ಬಳಕೆಗೆ ಅನುಮತಿ ದೊರಕಿರುವ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯಿತಿ, ಚಿತ್ರದುರ್ಗ ಇವರು ದಿನಾಂಕ 07-09-2020 ರಂದು ಮಾನ್ಯ ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕಾವೇರಿ ಭವನ, ಬೆಂಗಳೂರು ಇವರಿಗೆ ಸಲ್ಲಿಸಿರುವ ಪ್ರತಿಯನ್ನು ಕಳುಹಿಸಲಾಗಿದೆ.

   ಭ್ರಷ್ಟಾಚಾರ ವಿರೋಧಿ ವೇದಿಕೆ-ಕರ್ನಾಟಕ ಇದರ ನೇತೃತ್ವದಲ್ಲಿ ಶಾಶ್ವತ ಶುದ್ಧ ಕುಡಿಯುವ ನೀರಿಗಾಗಿ ದಿನಾಂಕ : 20-04-2019ರ ಶನಿವಾರದಂದು ಕೈಗೊಂಡ ಹೋರಾಟಕ್ಕೆ ವಾಣಿವಿಲಾಸಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಸಂಘಟನೆಗಳ ಸದಸ್ಯರು, ಅನೇಕ ಮಹಿಳಾ ಸಂಘ, ಸದಸ್ಯರುಗಳು, ಯುವಕರು, ವಿವಿಧ ಧಾರ್ಮಿಕ ಮುಖಂಡರುಗಳು, ಗ್ರಾಮ ಪಂಚಾಯಿತಿ ಸದಸ್ಯರುಗಳು, ಗ್ರಾಮ ಪಂಚಾಯಿತಿ ಕಛೇರಿಯಿಂದ ಗ್ರಾಮದ ಪ್ರಧಾನ ರಸ್ತೆಯಲ್ಲಿ ಸಂವಿಧಾನಾತ್ಮಕ ಕುಡಿಯುವ ನೀರಿನ ಹಕ್ಕಿಗಾಗಿ ಪಾದಯಾತ್ರ ಮೂಲಕ ಶ್ರೀ ಕಣಿವೆ ಮಾರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದರ ಮೂಲಕ ವಿ.ವಿ.ಸಾಗರ ಜಲಾಶಯದಲ್ಲಿರುವ ಶುದ್ಧೀಕರಣ ಘಟಕ (ಪಂಪ್‍ಹೌಸ್) ಕಛೇರಿಯ ಮುಂಭಾಗದಲ್ಲಿ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹಕ್ಕೆ ಬೆಂಬಲಿಸಿದ್ದರು.

   ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಕ್ರಮ ವಹಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಟಿಪ್ಪಣಿ ನೀಡಿರುವ ಕ್ರಮ ಸ್ವಾಗತಾರ್ಹವಾಗಿದೆ ಎಂದು ಭ್ರಷ್ಟಾಚಾರ ವಿರೋಧಿ ವೇದಿಕೆ-ಕರ್ನಾಟಕದ ಮುಖಂಡರು, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಎ.ಉಮೇಶ್ ಅವರು ಅಭಿನಂದಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap