ತಿಪಟೂರು
ಹುಚ್ಚಗೊಂಡನಹಳ್ಳಿಯಿಂದ ಕಂಚಾಘಟ್ಟದವರೆಗೆ ಬರುವ ಗ್ರಾಮಗಳ ಜಮೀನಿಗೆ ಮೂಲ ಬೆಲೆ ತುಂಬಾಕಡಿಮೆಯಿರುವುದರಿಂದ ಮಧ್ಯಸ್ಥಿಕೆಯಲ್ಲಿ ಸರಿಪಡಿಸಿಕೊಡಲಾಗುವುದು ಎಂದುಜಿಲ್ಲಾಧಿಕಾರಿಡಾ.ರಾಕೇಶ್‍ಕುಮಾರ್‍ಭರವಸೆ ನೀಡಿದರು.
ಕಳೆದ ನಾಲ್ಕು ವರ್ಷಗಳಿಂದಲೂ ನ್ಯಾಯಯುತ ಪರಿಹಾರಗಳಿಗಾಗಿ ನಡೆಯುತ್ತಿರುವರಾಷ್ಟ್ರೀಯ ಹೆದ್ದಾರಿ 206 ಹೋರಾಟಗಾರರು, ರೈತ ಮುಖಂಡರುಜೊತೆಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ತಿಪಟೂರು ಶಾಸಕ ಮತ್ತು ಸಂಬಂಧಿತ ಅಧಿಕಾರಿಗಳ ಜೊತೆಇಂದು ಎ.ಪಿ.ಎಂ.ಸಿ ರೈತ ಭವನದಲ್ಲಿ ಸಭೆ ನಡೆಯಿತು ಈ ಸಂದರ್ಭದಲ್ಲಿ ಮಾತನಾಡಿದಅವರುಪರಿಹಾರದ ಹಣಕೊಡದೆಕಾಮಗಾರಿ ನಡೆಸುವುದಾಗಲೀಅಥವಾ ಮರ, ಗಿಡಕಡಿಯುವುದಾಗಲೀ ಸಹಿಸುವುದಿಲ್ಲ.
ಸಂಬಂಧಪಟ್ಟವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು. ಸಂತ್ರಸ್ತರೈತರಿಗೆ ಜೆಎಂಸಿ ಪ್ರತಿಯನ್ನುಕೂಡಲೇ ನೀಡಬೇಕು. ಬಗರ್ ಹುಕುಂ, ಇತರೆಕಂದಾಯ ಸಮಸ್ಯೆಗಳಿರುವ ಜಮೀನುಗಳನ್ನು ಇತ್ಯರ್ಥಗೊಳಿಸಬೇಕೆಂದು ಉಪವಿಭಾಗಾಧಿಕಾರಿಗಳಿಗೆ ಹಾಗೂ ತಹಸೀಲ್ದಾರರಿಗೆ ಆದೇಶಿಸಿದ ಅವರುಪರಿಹಾರ ಪಡೆದುಕೊಳ್ಳಲು ಆಧಾರ್‍ಕಾರ್ಡ್, ವಂಶವೃಕ್ಷ, ಬ್ಯಾಂಕ್ ಖಾತೆಗಳ ದಾಖಲೆ ಮಾತ್ರ ಸಾಕು. ಇದಕ್ಕೆಆದೇಶವನ್ನು ಹೊರಡಿಸಲಾಗಿದೆ.
ಹಳೆ ಬೈಪಾಸ್‍ಗೆ ಸ್ವಾಧೀನಗೊಂಡ ಜಮೀನುಗಳು ಮೂಲ ಖಾತೆದಾರನಿಗೆ ವಾಪಸ್‍ಆಗಿದ್ದರೂ ಪರಿಹಾರ ಸಿಗದ ಸಮಸ್ಯೆಯನ್ನುಒಟ್ಟಾರೆಯಾಗಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಜೊತೆ ಮಾತುಕತೆ ನಡೆಸಿ ಬಗೆಹರಿಸಲಾಗುವುದುಎಂದರು.
ಶಾಸಕ ಬಿ.ಸಿ.ನಾಗೇಶ್‍ದನಿಗೂಡಿಸಿ ಮುಂದಿನ ವಾರದಲ್ಲೇ ಸಭೆ ನಡೆಸಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಎಸ್.ಎನ್.ಸ್ವಾಮಿರೈತರ ಹಕ್ಕೊತ್ತಾಯಗಳ ಮನವಿ ಪತ್ರ ಹಾಗೂ ವಿವಿಧ ಗ್ರಾಮಗಳ ಸಮಸ್ಯೆಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ಮಾತುಕತೆಯ ನಂತರ ನಡೆದ ಸಂತ್ರಸ್ತರೈತರ ಸಭೆಯಲ್ಲಿರಾಷ್ಟ್ರೀಯ ಹೆದ್ದಾರಿ 206 ಸಂತ್ರಸ್ತರ ಹೋರಾಟ ಸಮಿತಿಯ ಸಂಚಾಲಕಎಸ್.ಎನ್.ಸ್ವಾಮಿ ಮಾತನಾಡಿ, ಕಳೆದ 4 ವರ್ಷಗಳಿಂದಲೂ ಜಮೀನಿಗೆ ನ್ಯಾಯಯುತ ಬೆಲೆಗಾಗಿ ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದೇವೆ. ಇದೀಗ ಜಿಲ್ಲಾಡಳಿತ ರೈತರ ಹಕ್ಕೊತ್ತಾಯಗಳಿಗೆ ಸ್ಪಂದಿಸಿದೆ.ಅವರು ಮಾತಿನಲ್ಲಿ ನೀಡಿರುವ ಭರವಸೆಗಳನ್ನು ಕೃತಿಯಲ್ಲಿತರಬೇಕುಎಂದು ಒತ್ತಾಯಿಸಿದರು.
ಇದುವರೆಗೂ ನಡೆದ ಹೋರಾಟದ ಫಲವಾಗಿ ಭರವಸೆಗಳು ಬಂದಿವೆ. ಇದುತುಮಕೂರುರೈತರ ಹೋರಾಟಕ್ಕೆ ಸಂದಜಯ.ಏಕೆಂದರೆಯಾವುದೇ ಸರ್ಕಾರರೈತರ ಪರವಾಗಿಲ್ಲ. ಕೊರೊನಾ ಲಾಕ್‍ಡೌನ್ ಸಂದರ್ಭವನ್ನುಕೇಂದ್ರ ಮತ್ತುರಾಜ್ಯ ಸರ್ಕಾರ ದುರುಪಯೋಗಪಡಿಸಿಕೊಂಡು ಎ.ಪಿ.ಎಂ.ಸಿ ಕಾಯ್ದೆ, ಭೂ ಸುಧಾರಣಾಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆಗಳಿಗೆ ತಿದ್ದುಪಡಿಗಳನ್ನು ತಂದುರೈತರಜೀವನವನ್ನು ನರಕ ಮಾಡುತ್ತಿದೆ.ಇವುಗಳ ವಿರುದ್ಧವೂ ಸಂಘಟಿತ ಹೋರಾಟಗಳನ್ನು ನಡೆಸಬೇಕು.ಜೊತೆಗೆ, ಈ ಭರವಸೆಗಳನ್ನು ಈಡೇರಿಸಿಕೊಳ್ಳುವ ಜವಾಬ್ದಾರಿಜನರ ಮೇಲಿದೆ. ನಾವು ಎಚ್ಚೆರಿಕೆಯಿಂದಗೆಲುವನ್ನು ಕಾಪಾಡಿಕೊಳ್ಳಬೇಕು ಎಂದುಕರೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ 206 ಸಂತ್ರಸ್ತರ ಹೋರಾಟ ಸಮಿತಿಯ ಸಂಚಾಲಕ ಎಸ್.ಎನ್.ಸ್ವಾಮಿ, ಹಸಿರು ಸೇನೆಯ ತಾಲೂಕು ಅಧ್ಯಕ್ಷಟಿ.ಎಸ್.ದೇವರಾಜು, ಆರ್.ಕೆ.ಎಸ್‍ಜಿಲ್ಲಾ ಮುಖಂಡ ಲೋಕೇಶ್ ಭೈರನಾಯಕನಹಳ್ಳಿ, ಬೆಲೆ ಕಾವಲು ಸಮಿತಿಯ ಕಾರ್ಯದರ್ಶಿ ಶ್ರೀಕಾಂತ್ ಕೆಳಹಟ್ಟಿ, ಕರ್ನಾಟಕರಾಜ್ಯರೈತ ಸಂಘದತಾಲ್ಲೂಕುಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ ಹಾಗೂ ಹುಚ್ಚಗೊಂಡನಹಳ್ಳಿ, ರಾಮಶೆಟ್ಟಿಹಳ್ಳಿ, ಈಡೇನಹಳ್ಳಿ, ಹಳೆಪಾಳ್ಯ, ಅಣ್ಣಾಪುರ, ಕಂಚಾಘಟ್ಟ, ಭೈರನಾಯಕನಹಳ್ಳಿ, ಮಾದಿಹಳ್ಳಿ, ಚೌಡ್ಲಾಪುರ, ಸಿದ್ದನಹಳ್ಳಿ, ಬಿಳಿಗೆರೆಯ ಸಂತ್ರಸ್ತರು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ