ಕೊರೋನಾ ಸೋಂಕಿತ ಜಿಲ್ಲೆಗಳ ವಿಂಗಡಣೆ ವಿವರ ಇಂತಿದೆ..!

ಬೆಂಗಳೂರು

       ಕೊರೋನ ವೈರಸ್ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಆರೋಗ್ಯ ಮತ್ತು ಗೃಹ ಇಲಾಖೆ ಕರ್ನಾಟಕವನ್ನು ಕೆಂಪು , ಕಿತ್ತಳೆ ಮತ್ತು ಹಸಿರು ವಲಯಗಳಾಗಿ ವಿಂಗಡಿಸಿದೆ. ಹೆಚ್ಚಿನ ಸಂಖ್ಯೆಯ ಕೊರೋನಾ ಪ್ರಕರಣಗಳನ್ನು ಹೊಂದಿರುವ ಜಿಲ್ಲೆಗಳು ಕೆಂಪು ವಲಯದ ವ್ಯಾಪ್ತಿಗೆ ಬರುತ್ತವೆ, ಮಧ್ಯಮ ಸಂಖ್ಯೆಯ ಪ್ರಕರಣಗಳನ್ನು ಹೊಂದಿರುವ ಜಿಲ್ಲೆಗಳು ಕಿತ್ತಳೆ ವಲಯದ ವ್ಯಾಪ್ತಿಗೆ ಬರುತ್ತವೆ,ಕೊರೊನಾವೈರಸ್ ಪ್ರಕರಣಗಳಿಲ್ಲದ ಜಿಲ್ಲೆಗಳು ಹಸಿರು ವಲಯದ ವ್ಯಾಪ್ತಿಗೆ ಬರುತ್ತವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

       ಇನ್ನು  ರಾಜ್ಯದ 11 ಜಿಲ್ಲೆಗಳನ್ನು ರೆಡ್ ಜೋನ್ ಅಡಿಯಲ್ಲಿ ಬರುತ್ತವೆ , 8 ಜಿಲ್ಲೆಗಳು ಆರೇಂಜ್ ಜೋನ್ ಗೆ ಬರುತ್ತವೆ  ಮತ್ತು 10 ಗ್ರೀನ್ ಜೋನ್ ಅಡಿಯಲ್ಲಿ ಪಟ್ಟಿ ಮಾಡಲಾಗಿದೆ ಎನ್ನಲಾಗಿದೆ .

ಬೆಂಗಳೂರು  , ಮೈಸೂರು,ಚಿಕ್ಕಬಳ್ಳಾಪುರ,ದಕ್ಷಿಣ ಕನ್ನಡ,ಬೀದರ್ , ಉತ್ತರ ಕನ್ನಡ , ಬಾಗಲಕೋಟೆ, ಕಲಬುರಗಿ  , ಬೆಳಗಾವಿ , ವಿಜಯ ಪುರ ಮತ್ತು ಬಳ್ಳಾರಿ , ಜಿಲ್ಲೆಗಳನ್ನು ರೆಡ್ ಜೋನ್ ಅಡಿಯಲ್ಲಿ ತರಲಾಗಿದೆ. ಬೆಂಗಳೂರು, ಮೈಸೂರು, ಕಲಬುರಗಿ, ಚಿಕ್ಕಬಲ್ಲಾಪುರ, ಬೀದರ್, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡಗಳನ್ನು ಹಾಟ್ ಸ್ಪಾಟ್‌ ಗಳ ಅಡಿಯಲ್ಲಿ ಗುಂಪು ಮಾಡಲಾಗಿದೆ.

  ಮಂಡ್ಯ , ಬೆಂಗಳೂರು ಗ್ರಾಮೀಣ , ದಾವಣಗೆರೆ, ಉಡುಪಿ, ಕೊಡಗು, ಧಾರವಾಡ, ತುಮಕುರು, ಮತ್ತು ಗದಗ್ ಆರೇಂಜ್ ಜೋನ್   ಅಡಿಯಲ್ಲಿವೆ. ಈ ಜಿಲ್ಲೆಗಳು ಪ್ರಕರಣಗಳ ಸಂಖ್ಯೆಯಲ್ಲಿ ಹಠಾತ್ ಹೆಚ್ಚಳಕ್ಕೆ ಸಾಕ್ಷಿಯಾಗಬಹುದು ಮತ್ತು ಆದ್ದರಿಂದ ಜಾಗರೂಕತೆ ಮುಂದುವರಿಯಲಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

    ಗ್ರೀನ್ ಜೋನ್  ಜಿಲ್ಲೆಗಳು ಶಿವಮೊಗ್ಗ, ಯಾದಗಿರಿ, ರಾಮನಗರ, ಕೋಲಾರ, ಚಿತ್ರದುರ್ಗ, ಕೊಪ್ಪಳ, ಹಾವೇರಿ, ಹಾಸನ, ಚಾಮರಾಜನಗರ ಮತ್ತು ರಾಯಚೂರು, ಅಲ್ಲಿ ಒಂದು ಕರೋನವೈರಸ್ ಪ್ರಕರಣವೂ ಇಲ್ಲಿಯವರೆಗೆ ಧೃಡಪಟ್ಟಿಲ್ಲ. ಇನ್ನೂ, ಶಿವಮೊಗ್ಗ(8), ಯಾದಗಿರಿ(8) , ರಾಮನಗರ(10),ಕೋಲಾರ್(5),ಚಿತ್ರದುರ್ಗ(1),ಕೊಪ್ಪಳ(1),ಕಾವೇರಿ(2), ಹಸನ(5),ಚಾಮರಾಜನಗರ (0), ಮತ್ತು ರಾಯಚೂರು (0) .ಕ್ವಾರಂಟೈನ್ ಅವಧಿ ಪೂರ್ಣಗೊಳ್ಳುವವರೆಗೆ ಮತ್ತು ಎಲ್ಲಾ ಪ್ರಕರಣಗಳ ವರದಿಯು ನಕಾರಾತ್ಮಕವೆಂದು ಸಾಬೀತಾಗುವವರೆಗೆ, ಈ ಜಿಲ್ಲೆಗಳನ್ನು ಅಧಿಕೃತವಾಗಿ ಹಸಿರು ವಲಯ ಎಂದು ವರ್ಗೀಕರಿಸಲಾಗುವುದಿಲ್ಲ. ಆದ್ದರಿಂದ ಈ ಜಿಲ್ಲೆಗಳ ಜನರು ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link