ಕೆಲವೇ ಗಂಟೆಗಳಲ್ಲಿ ಜನತೆಯ ಸಂತೋಷ ಮಾಯ!

ದಾವಣಗೆರೆ:
     ಆರಂಭದಲ್ಲಿ ನೆರೆಜಿಲ್ಲೆಚಿತ್ರದುರ್ಗದ ಮಹಿಳೆ ಸೇರಿಜಿಲ್ಲೆಯ ಮೂವರಲ್ಲಿ ಸೋಂಕು ದೃಢಪಟ್ಟು, ಈ ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಅಂದರೆ, ಕಳೆದ 20ಕ್ಕೂ ಹೆಚ್ಚು ದಿನಗಳಿಂದ ಜಿಲ್ಲೆಯಲ್ಲಿಕೊರೊನಾ ಪಾಸಿಟಿವ್ ಪತ್ತೆಯಾಗದ ಹಿನ್ನಲೆಯಲ್ಲಿ ಸರ್ಕಾರಮಂಗಳವಾರ ಅಷ್ಟೇ ದಾವಣಗೆರೆಜಿಲ್ಲೆಯನ್ನುಗ್ರೀನ್‍ಜೋನ್‍ಎಂಬುದಾಗಿ, ಘೋಷಿಸಿದ್ದರಿಂದ ಕೆಲ ನಿರ್ಬಂಧಗಳು ಸಡಿಲವಾಗಿದ್ದರಿಂದಖುಷಿಯಲ್ಲಿದ್ದದೇವನಗರಿಗರ ಸಂತೋಷ ಕೆಲವೇ ಗಂಟೆಗಳಲ್ಲಿ ಮಾಯವಾಗಿದೆ.
     ಹೌದು… ಆರಂಭದಲ್ಲಿ ಮೂವರಲ್ಲಿ ಕೊರೊನಾ ದೃಢ ಪಟ್ಟಿದ್ದರಿಂದ ಕಂಗೆಟ್ಟಿದ್ದ ಜನತೆ ಜಿಲ್ಲೆಯಲ್ಲಿ ಅದೆಷ್ಟು ಜನರನ್ನು ಮಹಾಮಾರಿ ಕೊರೊನಾ ಬಲಿ ಪಡೆಯಲಿದೆ ಎಂಬ ಆತಂಕ ಮನೆ ಮಾಡಿತ್ತು.ಆದರೆ, ಈ ಮೂವರುಚಿಕಿತ್ಸೆಗೆ ಸ್ಪಂದಿಸಿದ್ದರ ಪರಿಣಾಮ ಕೊರೊನಾಕ್ಕೆ ಯಾವುದೇ ಬಲಿಯಾಗದೆ ಸಂಪೂರ್ಣವಾಗಿ ಗುಣಮುಖರಾಗಿ ಈ ಮೂವರು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರುಳಿದ್ದರಿಂದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.ಅಲ್ಲದೆ, ಇತ್ತೀಚೆಗೆ ಜಿಲ್ಲೆಯಲ್ಲಿ ಕೊರೊನಾ ಹೊಸ ಪ್ರಕರಣ ದೃಢಪಡದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಂಗಳವಾರ ಅಷ್ಟೆ ಜಿಲ್ಲೆಯನ್ನು ಗ್ರೀನ್‍ ಜೋನ್ ಆಗಿ ಘೋಷಿಸಿ, ಕೆಲ ವ್ಯಾಪಾರ-ವಹಿವಾಟು ನಡೆಸಲು ಅನುಮತಿ ನೀಡಿ ಲಾಕ್‍ಡೌನ್ ಸಡಿಲಿಸಿತ್ತು. ಹೀಗಾಗಿ ಬಹುತೇಕರು ನಮ್ಮ ಜಿಲ್ಲೆ ಕೊರೊನಾದಿಂದ ಮುಕ್ತವಾಗಿದೆ ಎಂಬುದಾಗಿ ಖುಷಿಪಟ್ಟಿದ್ದರು.ಆದರೆ, ಇದಾದ ಕೆಲವೇ ಗಂಟೆಗಳಲ್ಲಿ ಜಿಲ್ಲೆಯ ಮಹಿಳೆಯೊಬ್ಬರಲ್ಲಿ ಹೊಸದಾಗಿ ಕೊರೊನಾ ಸೊಂಕು ದೃಢಪಟ್ಟಿರುವುದರಿಂದ ಜನರಲ್ಲಿ ಮನೆ ಮಾಡಿದ್ದ ಖಷಿ ಅಥವಾ ಸಂತೋಷ ಮರೆಯಾದಂತಾಗಿದೆ.
   ಜಿಲ್ಲೆ ಹಸಿರು ವಲಯಕ್ಕೆ ಸೇರ್ಪಡೆಯಾಗಿದ್ದರಿಂದ ಲಾಕ್‍ಡೌನ್‍ನಲ್ಲಿ ಸಡಲಿಕೆಕೊಡಲಾಗಿತ್ತು.ಇದರಿಂದ ಬುಧವಾರ ಸ್ವಲ್ಪ ಮಟ್ಟಿಗೆ ಸಣ್ಣ ಅಂಗಡಿಗಳು ಸರ್ಕಾರ ನಿಗದಿ ಮಾಡಿದ್ದ ಅಂಗಡಿಗಳ ಬಾಗಿಲು ತೆರೆದಿತ್ತು.ವ್ಯಾಪಾರಸ್ಥರೂ ಸೇರಿದಂತೆ ಜನತೆಯಲ್ಲಿ ಹರ್ಷ ಕಂಡು ಬಂದಿತ್ತು.
     ಸತತ 37 ದಿನಗಳ ನಂತರ ಲಾಕ್‍ಡೌನ್ ಸಡಿಲಿಕೆಆಗಿದ್ದರಿಂದ ವ್ಯಾಪಾರ ವಹಿವಾಟಿಗೆ ಸ್ವಲ್ಪ ಅವಕಾಶ ನೀಡಲಾಗಿತ್ತು .ಇಂದಿನಿಂದ ಪ್ರಮುಖ ವ್ಯಾಪಾರಿ ಸ್ಥಳಗಳಾದ ಅಂಗಡಿ, ಮುಗ್ಗಟ್ಟುಗಳು ಕಾರ್ಯಾರಂಭಿಸಿದವು.ತಿಂಗಳಿಗೂ ಹೆಚ್ಚು ಕಾಲ ಬಂದ್‍ಆಗಿದ್ದ ವ್ಯಾಪಾರ ವಹಿವಾಟು ಪುನಾ ಚುರುಕುಗೊಳ್ಳಬಹುದೆಂಬ ನಿರೀಕ್ಷೆ ಕೆಲ ಗಂಟೆಗಳಲ್ಲಿಯೇ ಹುಸಿಯಾಯಿತು.
      ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ನಗರ, ಜಿಲ್ಲೆಯಲ್ಲಿ ಅನಗತ್ಯವಾಗಿ ರಸ್ತೆಗಳಲ್ಲಿ ಜನರು ಸಂಚರಿಸುತ್ತಿದ್ದುದು ಕಂಡು ಬಂದಿತು.ನಗರದ ಪ್ರಮುಖ ವೃತ್ತ, ರಸ್ತೆಗಳಿಗೆ ಹಾಕಿದ್ದ ಬ್ಯಾರಿಕೇಡ್‍ಗಳನ್ನು ಪೊಲೀಸರು ತೆರವು ಮಾಡಿದ್ದರು. ಬುಧವಾರ ಬೆಳಿಗ್ಗೆ ಹೊತ್ತಿಗೆ ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ಕೊರೋನಾ ಕೇಸ್ ವಿಚಾರ ಕಾಡ್ಗಿಚ್ಚಿನಂತೆ ಬಂದೆರಗಿತು.
     ಸಡಿಲಿಕೆ ಬಿಟ್ಟರೂ ಸಹ ಪೊಲೀಸರ ಪಟ್ಟು ಮಾತ್ರ ಸಡಿಲಗೊಂಡಿಲ್ಲ. ಲಾಕ್‍ಡೌನ್ ಸಡಿಲಿಕೆ ನೆಪದಿಂದ ರಸ್ತೆಗಿಳಿದ ಸುಮಾರು 29ಕ್ಕೂ ಹೆಚ್ಚು ಆಟೋ ರಿಕ್ಷಾಗಳನ್ನು ಪೊಲೀಸರು ವಶಕ್ಕೆ ಪಡೆದರು.ಬೈಕ್ ಸೇರಿದಂತೆ ದ್ವಿಚಕ್ರ ವಾಹನಗಳಲ್ಲಿ ಒಬ್ಬರಿಗೆ ಮಾತ್ರ ಅವಕಾಶವಿದ್ದು, ಕಾರು, ಇನ್ನೋವಾ ಸೇರಿದಂತೆಇತರೆ ವಾಹನಗಳಲ್ಲಿ ಚಾಲಕನ ಜೊತೆಗೆ ಮತ್ತೊಬ್ಬರಿಗೆ ಮಾತ್ರವೇ ಪ್ರಯಾಣಿಸಲು ಅವಕಾಶ ನೀಡಿದ್ದು, ಅದನ್ನು ಪಾಲಿಸುವಂತೆ ಪೊಲೀಸರು ಮನವಿ ಮಾಡುತ್ತಿದ್ದುದು ಸಾಮಾನ್ಯವಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap