ಹುಳಿಯಾರು:
ಹುಳಿಯಾರಿನ ಆಜಾದ್ ನಗರದ ಬಳಿ ಪುರಾತನ ಬಾವಿ ಕುಸಿಯುತ್ತಿದ್ದು ಪಪಂ ಅಧಿಕಾರಿಗಳು ತಕ್ಷಣ ದುರಸ್ಥಿ ಮಾಡಿಸುವಂತೆ ಸ್ಥಳೀಯರು ಒತ್ತಾಯಿಸಿದರೂ ಸಹ ಯಾರೊಬ್ಬರೂ ಸ್ಪಂಧಿಸದ ಪರಿಣಾಮ ಪ್ರಾಣಾಪಾಯದ ಭಯದಿಂದ ಸ್ಥಳೀಯರೇ ಬಾವಿ ಮುಚ್ಚಿಸಿ ನಿರಾಳರಾದರು.
ಹೌದು ಇಲ್ಲಿನ ಆಜಾದ್ ನಗರದ ನುರಾನಿ ಮಸೀದಿ ಹಿಂಭಾಗದಲ್ಲಿ ಪುರಾತನ ಕಲ್ಲು ಕಟ್ಟಡದ ಬಾವಿಯೊಂದಿತ್ತು. ಈ ಭಾವಿ ನೀರಿಲ್ಲದೆ ಸಾರ್ವಜನಿಕ ಬಳಕೆಯಿಂದ ದೂರಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಬಾವಿಯಲ್ಲಿ ಸಾಕಷ್ಟು ನೀರು ಬರಲಾರಂಭವಾಯಿತು.
ಬಹಳ ವರ್ಷ ಸರಿಯಾದ ನಿರ್ವಹಣೆ ಇಲ್ಲದೆ ಪಾಳು ಬಿದಿದ್ದ ಬಾವಿಗೆ ಏಕಾಏಕಿ ನೀರು ಬಂದು ಬಾವಿಯ ಅರ್ಧಬಾಗದಷ್ಟು ಕಲ್ಲುಗಳು ಕುಸಿದು ಬಾವಿಯೊಳಕ್ಕೆ ಬಿದ್ದಿತ್ತು. ಅಲ್ಲದೆ ಮತ್ತೂ ಕುಸಿಯುವ ಆತಂಕ ಸ್ಥಳೀಯರನ್ನು ಕಾಡುತ್ತಿತ್ತು.ಈ ಬಾವಿಯ ಸುತ್ತ ಅನೇಕ ವಾಸದ ಮನೆಗಳಿದ್ದು ಇಲ್ಲಿನ ಮಕ್ಕಳು ಬಾವಿಯ ಸಮೀಪದಲ್ಲಿ ಆಟವಾಡುತ್ತಾರೆ, ರಾತ್ರಿ ಸಂದರ್ಭದಲ್ಲಿ ಜನರು ಓಡಾಡುತ್ತಾರೆ.
ಹಾಗಾಗಿ ಕುಸಿಯುತ್ತಿರುವ ಬಾವಿಯಿಂದ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಗಳಿದ್ದು ಅಧಿಕಾರಿಗಳು ತಕ್ಷಣ ಕುಸಿಯುತ್ತಿರುವ ಬಾವಿಯನ್ನು ದುರಸ್ಥಿ ಮಾಡಿಸಿ ಎಂದು ಪತ್ರಿಕೆ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಸ್ಥಳೀಯರು ಮನವಿ ಮಾಡಿದರಾದರೂ ಯರೊಬ್ಬರೂ ಸ್ಪಂಧಿಸಲಿಲ್ಲ.ಪರಿಣಾಮ ಪ್ರಾಣಾಪಾಯದ ದೃಷ್ಠಿಯಿಂದ ಸ್ಥಳೀಯರೆ ಬಾವಿಯ ಕಂಟದಲ್ಲಿದ್ದ ಕಲ್ಲುಗಳನ್ನು ಕಿತ್ತು. ಬಾವಿಗೆ ಮಣ್ಣು ತುಂಬುವ ಮೂಲಕ ಪುರಾತನ ಬಾವಿಯನ್ನು ಮುಚ್ಚಿದರು. ಒಟ್ಟಾರೆ ಪಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪುರಾತನ ಬಾವಿ ನೋಡನೋಡುತ್ತಲೇ ಕಣ್ಮರೆಯಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ