ಮರಡಿಗುಡ್ಡದ ತಪ್ಪಲಲ್ಲಿ ಸ್ಥಗಿತಗೊಂಡಿದ್ದ ವಿದ್ಯಾರ್ಥಿ ನಿಲಯದ ಕಾಮಗಾರಿ ಆರಂಭ

ಶಿರಾ:

       ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿಯ ಮರಡಿ ಗುಡ್ಡದ ತಪ್ಪಲಿನಲ್ಲಿನಲ್ಲಿ ನೂತನವಾಗಿ ಸರ್ಕಾರದಿಂದ ಮಂಜೂರಾದ ಡಾ.ಬಿ.ಆರ್.ಅಂಬೇಡ್ಕರ್ ಪ.ಪಂಗಡದ ಬಾಲಕಿಯರ ವಿದ್ಯಾರ್ಥಿ ನಿಲಯವನ್ನು ಸ್ಥಳಾಂತರಿಸಲು ಕಾಮಗಾರಿಯನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳ ಪಿತೂರಿಯಿಂದ ಸ್ಥಗಿತಗೊಳಿಸಲಾಗಿತ್ತು. ಸದರಿ ಕಾಮಗಾರಿಯು ಕೆಲ ಸಂಘಟನೆಗಳ ಪ್ರತಿಭಟನೆಯ ಫಲವಾಗಿ ವಸತಿ ನಿಲಯದ ಕಾಮಗಾರಿ ಪುನರಾರಂಭಗೊಂಡಿದೆ.

       ವಸತಿ ನಿಲಯವನ್ನು ಸ್ಥಳಾಂತರಿಸಲು ಕೆಲ ಪಟ್ಟಭದ್ರ ಹಿತಾಸಕ್ತಿಗಳು ವ್ಯಾಪಕ ಪಿತೂರಿ ನಡೆಸಿದ್ದರು. ಯಾವುದೇ ಕಾರಣಕ್ಕೂ ವಸತಿ ನಿಲಯವನ್ನು ಸ್ಥಳಾಂತರಿಸಕೂಡದು ಎಂದು ಒತ್ತಾಯಿಸಿ ಮಾನವ ಬಂಧುತ್ವ ವೇದಿಕೆ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಜಾಗೃತ ಸಮಿತಿಯ ವತಿಯಿಂದ ಕಳೆದ ಕೆಲ ದಿನಗಳ ಹಿಂದೆ ತಹಶೀಲ್ದಾರ್ ಕಛೇರಿಯ ಮುಂದೆ ಪ್ರತಿಭಟನೆ ನಡೆಸಲಾಯಿತು.

     ಇತ್ತೀಚೆಗಷ್ಟೆ ರಾಜ್ಯ ಸರ್ಕಾರವು ಬುಕ್ಕಾಪಟ್ಟಣ ಹೋಬಳಿಯ ರಂಗನಹಳ್ಳಿ ಸ.ನಂ.18ರಲ್ಲಿ 9.20 ಎಕರೆ ವಿಸ್ತೀರ್ಣದಲ್ಲಿ ಪ.ಪಂಗಡದ ಡಾ.ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಗಾಗಿ ಸಮಾಜ ಕಲ್ಯಾಣ ಇಲಾಖೆಗೆ ಮಂಜೂರಾಗಿರುವ ಸ್ಥಳದಲ್ಲಿ ಈಗಾಗಲೇ ಕಾಮಗಾರಿಯೂ ಆರಂಭಗೊಂಡಿತ್ತು. ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಈ ಶಾಲೆಯನ್ನು ಬೇರೆ ಕಡೆ ಸ್ಥಳಾಂತರಿಸಲು ಪಿತೂರಿ ನಡೆಸಿದ್ದನ್ನು ಹೋರಾಟ ಸಮಿತಿಯು ವ್ಯಾಪಕವಾಗಿ ಖಂಡಿಸಿತ್ತು.

     ಇದೇ ಮರಡಿಗುಡ್ಡದ ತಪ್ಪಲಿನಲ್ಲಿ ಕೆಲವು ಮಂದಿ ಸರ್ಕಾರಿ ಜಮೀನನ್ನು ಅತಿಕ್ರಮಿಸಿಕೊಂಡಿದ್ದು ಈ ಬಗ್ಗೆ ಚಕಾರವೆತ್ತದ ಪಟ್ಟಭದ್ರ ಹಿತಾಸಕ್ತಿಗಳು ಮಂಜೂರಾದ ವಸತಿ ನಿಲಯದ ಸ್ಥಳಾಂತರಕ್ಕೆ ಸಂಚು ನಡೆಸಿರುವುದು ಸರಿಯಲ್ಲ ಎಂದು ಆರೋಪಿಸಿ ಕೂಡಲೇ ಕಾಮಗಾರಿ ಆರಂಭಿಸುವಂತೆ ಸಂಘಟನೆಗಳು ಒತ್ತಾಯಿಸಿದ್ದವು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap