ಬೆಂಗಳೂರು :
ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನೀಡಲಾಗುವ ರಾಷ್ಟ್ರಪತಿ ಪದಕ ಹಾಗೂ ಪೊಲೀಸ್ ಮೆಡಲ್ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಪಟ್ಟಿಯಲ್ಲಿ ಕರ್ನಾಟಕ ಸಿಐಡಿ ವಿಭಾಗದ ಎಎಸ್‌ಐ ಪ್ರಸನ್ನ ಕುಮಾರ್ ಲಕ್ಷ್ಮಿನರಸಿಂಹ ವೆಂಕಟೇಶಯ್ಯ ಅವರು ರಾಷ್ಟ್ರಪತಿ ಪದಕವನ್ನು ಪಡೆದಿದ್ದಾರೆ ಇನ್ನುಳಿದಂತೆ ಅತ್ಯುತ್ತಮ ಸೇವೆ ಸಲ್ಲಿಸಿದ ರಾಜ್ಯ 18 ಪೊಲೀಸ್ ಅಧಿಕಾರಿಗಳಿಗೆ ಪೊಲೀಸ್ ಮೆಡಲ್ ಗೌರವ ದಕ್ಕಿದೆ .
ಈ ಕುರಿತಂತೆ ಕೇಂದ್ರ ಗೃಹ ಸಚಿವಾಲಯ ರಾಷ್ಟ್ರಪತಿ ಪದಕ ಮತ್ತು ಪೊಲೀಸ್ ಮೆಡಲ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರಾಜ್ಯದ ಸಿಐಡಿಯ ಎಎಸ್‌ಐ ಪ್ರಸನ್ನ ಕುಮಾರ್ ಲಕ್ಷ್ಮಿನರಸಿಂಹ ವೆಂಕಟೇಶಯ್ಯ ಅವರು ರಾಷ್ಟ್ರಪತಿ ಪದಕವನ್ನು ಪಡೆದಿದ್ದಾರೆ. ಅಲ್ಲದೇ ಉತ್ತಮ ಸೇವೆ ಸಲ್ಲಿಸಿದಂತ 18 ಪೊಲೀಸ್ ಅಧಿಕಾರಿಗಳು ಈ ಬಾರಿ ಪೊಲೀಸ್ ಪದಕ ಪ್ರಶಸ್ತಿಯನ್ನು ಗಳಿಸಿದ್ದಾರೆ.
ರಾಷ್ಟ್ರಪತಿ ಪದಕ ವಿಜೇತ : ಎಎಸ್‌ಐ ಪ್ರಸನ್ನ ಕುಮಾರ್ ಲಕ್ಷ್ಮಿನರಸಿಂಹ ವೆಂಕಟೇಶಯ್ಯ, ರಾಜ್ಯದ ಸಿಐಡಿ, ಬೆಂಗಳೂರು
ಪೊಲೀಸ್ ಮೆಡಲ್ ವಿಜೇತರು:
- ಹೇಮಂತ್ ಕುಮಾರ್ ರಂಗಪ್ಪ – ಡಿ ಎಸ್ ಪಿ, ಸ್ಪೆಷಟಲ್ ಇನ್ವೆಸ್ಟಿಗೇಷನ್ ಟೀಂ, ಲೋಕಾಯುಕ್ತ, ಬೆಂಗಳೂರು
- ಪರಮೇಶ್ವರ್ ಹೆಗ್ಡೆ – ಡಿ ಎಸ್ ಪಿ, ಎಕಾನಾಮಿಕ್ ಆಫೀಸರ್ ಡಿವಿಸನ್, ಸಿಐಡಿ, ಬೆಂಗಳೂರು
- ಮಂಜುನಾಥ್ ರಾಜಣ್ಣ, ಡಿ ಎಸ್ ಪಿ, ಎಸಿಬಿ, ಮಂಡ್ಯ
- ಶೈಲೇಂದ್ರ ಮುತ್ತಣ್ಣ ಹರಗ, ಡಿ ಎಸ್ ಪಿ, ಸೋಮವಾರ ಪೇಟೆ ಸಬ್ ಡಿವಿಸನ್, ಸೋಮವಾರ ಪೇಟೆ, ಕೊಡಗು
- ಅರುಣ್ ನಾಗೇಗೌಡ, ಡಿ ಎಸ್ ಪಿ, ಶ್ರೀರಂಗ ಪಟ್ಟಣ, ಮಂಡ್ಯ
- ಸತೀಶ್ ಮಹಲಿಂಗಯ್ಯ ಹೊನ್ನೇನಹಳ್ಳಿ, ಎ ಎಸ್ ಪಿ, ಟ್ರಾಫಿಕ್ ನಾರ್ಥ್ ಈಸ್ಟ್ ಡಿವಿಸನ್, ಬೆಂಗಳೂರು
- ರಮೇಶ್ ಕುಮಾರ್ ಭೈರಪ್ಪ ಹಿರಿಯೂರು, ಡಿ ಎಸ್ ಪಿ, ರಾಜ್ಯ ಗುಪ್ತಚರ ದಳ, ತುಮಕೂರು
- ಉಮೇಶ್ ಪಣಿತಡ್ಕ, ಡಿ ಎಸ್ ಪಿ, ಟ್ರೈನಿಂಗ್ ಸ್ಕೂಲ್, ಮೈಸೂರು
- ದಿವಾಕರ ಚನ್ನಪಟ್ನ ನರಸಿಂಹ ಜೆಟ್ಟಪ್ಪ, ಪೊಲೀಸ್ ಇನ್ಸ್ ಪೆಕ್ಟರ್, ಮಡಿಕೇರಿ ಗ್ರಾಮಾಂತರ
- ಜಿ ರುದ್ರೇಶ್ ನಾಗರಾಜ್, ರಿಸರ್ವ್ ಪೊಲೀಸ್ ಇನ್ಸ್ ಪೆಕ್ಟರ್, ಕೆ ಎಸ್ ಆರ್ ಪಿ, ಬೆಂಗಳೂರು
- ಲಕ್ಷ್ಮಿ ನಾರಾಯಣ ಅನಂತರಾಮಯ್ಯ ಬೀಚನಹಳ್ಳಿ, ಪೊಲೀಸ್ ಸಬ್ ಇನ್ ಸ್ಪೆಕ್ಟರ್, ಸಿಟಿ ಸ್ಪೆಷಲ್ ಬ್ರಾಂಚ್, ಬೆಂಗಳೂರು
- ಮಹಬಲೇಶ್ವರ ಚಾಂದೇಕರ್ ಹೇಮ, ರಿಸರ್ವ್ ಸಬ್ ಇನ್ ಸ್ಪೆಕ್ಟರ್, ಕೆಎಸ್ ಆರ್ ಪಿ, ಬೆಂಗಳೂರು
- ಕೆ ಜಯಪ್ರಕಾಶ್, ಪೊಲೀಸ್ ಸಬ್ ಇನ್ ಸ್ಪೆಕ್ಟರ್, ಮಂಗಳೂರು ಸಿಟಿ ಕಂಟ್ರೋಲ್ ರೂಂ
- ಹನುಮಂತಪ್ಪ ನಂಜುಂಡಯ್ಯ, ಎ ಎಸ್ ಐ, ಚಿಕ್ಕಬಳ್ಳಾಪುರ
- ಕೆ ಅತಿಕ್ಯೂ ಯು ಆರ್ ರಹಮಾನ್, ಎ ಎಸ್ ಐ, ಫಿಂಗರ್ ಪ್ರಿಂಟ್ ವಿಭಾಗ, ಶಿವಮೊಗ್ಗ
- ರಾಮಾಂಜನಯ್ಯ, ಎ ಎಸ್ ಐ, ಕೆಬಿ ಕ್ರಾಸ್ ಪೊಲೀಸ್ ಠಾಣೆ, ತುಮಕೂರು
- ರುದ್ರಪ್ಪ ನಾಗಪ್ಪ ಬತಿಕೈ, ಎ ಎಸ್ ಐ, ಸಿಪಿಐ ಆಫೀಸ್, ರಾಣಿ ಬೆನ್ನೂರು ಗ್ರಾಮಾಂತರ ವಿಭಾಗ, ಹಾವೇರಿ
- ಹೊನ್ನಪ್ಪ ಕರಿಯಪ್ಪ, ಸಿವಿಲ್ ಹೆಡ್ ಕಾನ್ ಸ್ಟೇಬಲ್, ಎಸ್ ಪಿ ಆಫೀಸ್, ಬೆಂಗಳೂರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ