ಕೃಷಿ ಇಲಾಖೆ ವೈಫಲ್ಯ :ಸಹಾಯಕ ನಿರ್ದೇಶಕಿಗೆ ಸದಸ್ಯರ ತರಾಟೆ

ಕುಣಿಗಲ್ :

    ತಾಲೂಕಿನ ರೈತರು ರಸಗೊಬ್ಬರಕ್ಕಾಗಿ ಪರದಾಡುತ್ತಿದ್ದಾರೆ, ಆದರೆ ಖಾಸಗಿ ಅಂಗಡಿಯವರು ಒಂದಕ್ಕೆ ಎರಡು ಪಟ್ಟು ದರದಲ್ಲಿ ಕಾಳ ಸಂತೆಯಲ್ಲಿ ಮಾರಾಟ ಮಾಡಿ, ಹಣ ಮಾಡುವ ದಂದೆಯಲ್ಲಿ ತೋಡಗಿದ್ದಾರೆ, ಈ ಬಗ್ಗೆ ಏನು ಕ್ರಮಕೈಗೊಂಡಿದ್ದೀರ ಎಂದು ತಾ.ಪಂ ಸದಸ್ಯರು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿಯನ್ನು ತರಾಟೆ ತೆಗೆದುಕೊಂಡ ಪ್ರಸಂಗ ತಾ.ಪಂ ಸಾಮಾನ್ಯ ಸಭೆಯಲ್ಲಿ ಬುಧವಾರ ನಡೆಯಿತು.

    ತಾ.ಪಂ ಸಭಾಂಗಣದಲ್ಲಿ ಅಧ್ಯಕ್ಷೆ ನಾಗಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರಾದ ಹರೀಶ್‍ನಾಯ್ಕ್, ಐ.ಎ.ವಿಶ್ವನಾಥ್ ದಿನೇಶ್, ಗಂಗರಂಗಯ್ಯ, ಮಾತನಾಡಿ ಯೂರಿಯಾಕ್ಕಾಗಿ ರೈತರು ಖಾಸಗಿ ಅಂಗಡಿ ಮುಂದೆ ಸಾಲುಗಟ್ಟಿ ನಿಂತರು ಗೊಬ್ಬರ ಸಿಗುತಿಲ್ಲ, ಮಂಡ್ಯಕ್ಕೆ ಹೋಗಿ ಒಂದಕ್ಕೆ ಎರಡು ಪಟ್ಟು ಹಣ ನೀಡಿ ತರಬೇಕಾಗಿದೆ, ಇದಕ್ಕೆ ಕಾರಣವೇನು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸೌಮ್ಯ ಶ್ರೀ ಅವರನ್ನು ಪ್ರಶ್ನಿಸಿದರು, ತಾಲೂಕಿಗೆ 2700 ಮೆಟ್ರಿಕ್ ಟನ್ ಯೂರಿಯಾಗೆ ಬೇಡಿಕೆ ಸಲ್ಲಿಸಿದೆವು ಆದರೆ 2100 ಮೆಟ್ರಿಕ್ ಟನ್ ಮಾತ್ರ ಯೂರಿಯ ಬಂದಿದೆ, ಇನ್ನು 600 ಮೆಟ್ರಿಕ್ ಟನ್ ಬಂದಿಲ್ಲ ಹಾಗೂ ಕಳೆದ ಭಾರಿ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಬೆಳೆ ಇಟ್ಟಿದರು, ಈ ಭಾರಿ 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಬೆಳೆ ಇಟ್ಟಿದ್ದಾರೆ ಹಾಗಾಗಿ ಗೊಬ್ಬರದ ಸಮಸ್ಯೆ ಎದುರಾಗಿದೆ ಎಂದರು, ಇದರಿಂದ ಕೆಂಡಾಮಂಡಲರಾದ ಸದಸ್ಯರು ನಿಮ್ಮ ಇಲಾಖೆ ಇದೆಯೇ ಅಥವಾ ಸತ್ತು ಹೋಗಿದೆಯೇ ಎಂದು ನಿರ್ದೇಶಕಿಯನ್ನು ತರಾಟೆ ತೆಗೆದುಕೊಂಡರು ನಿಮ್ಮ ವೈಫಲ್ಯದಿಂದ್ದಾಗಿ ಈ ಸ್ಥಿತಿಗೆ ಕಾರಣವಾಗಿದೆ, ಹಣ ದಂದೆಯಲ್ಲಿ ತೋಡಗಿರುವ ಖಾಸಗಿ ಗೊಬ್ಬರದ ಅಂಗಡಿ ಅವರ ವಿರುದ್ದ ಕ್ರಮಕೈಗೊಳ್ಳುವಲ್ಲಿ ವಿಫಲಗೊಂಡಿದ್ದೀರ ಇದರಲ್ಲಿ ನಿಮ್ಮ ಪಾತ್ರವು ಇರುವುದರ ಬಗ್ಗೆ ಸಾರ್ವಜನಿಕರ ಸಂಶಯಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

ತನಿಖೆಗೆ ಒತ್ತಾಯ :

    ತಾಲೂಕಿನಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೊರೆಸಲಾಗಿರುವ ಕೊಳವೆ ಬಾವಿ ಹಾಗೂ ಟ್ಯಾಂಕರ್ ನೀರು ಸರಬರಾಜಿನಲ್ಲಿ ಸಾಕಷ್ಟ ಅವ್ಯವಹಾರ ನಡೆದಿದೆ, 300-400 ಅಡಿಯಷ್ಟು ಬೋರ್‍ವೆಲ್ ಕೊರೆಸಿ ಒಂದು ಸಾವಿರ ಅಡಿ ಕೊರೆಸಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಠಿಸಿ ಹಣ ಮಾಡುವ ದಂದೆಯಲ್ಲಿ ತೋಡಗಲಾಗಿದೆ, ಆದರೆ ಜನರಿಗೆ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲ ಎಂದು ಸದಸ್ಯರು ಎಇಇ ಶೈಲಜಾ ಅವರನ್ನು ತರಾಟೆ ತೆಗೆದುಕೊಂಡರು, ಈ ಅವ್ಯವಹಾರ ಸಂಬಂಧ ತನಿಖೆಗೆ ಸದಸ್ಯರು ಒತ್ತಾಯಿಸಿದರು,

ವಾಗ್ವಾದ :

    ತಾಲೂಕಿನ ಗುನ್ನಾಗರೆ ಗ್ರಾಮದ ಪಶು ಆಸ್ಪತ್ರೆ ಜಾಗದಲ್ಲಿ ವ್ಯಕ್ತಿಯೊಬ್ಬರು ಪೆಟ್ಟಿ ಅಂಗಡಿ ಇಟ್ಟುಕೊಂಡು ಮಾರಾಟ ಮಾಡುತ್ತಿರುವ ಮಧ್ಯದ ಅಂಗಡಿಯನ್ನು ತೆರವುಗೊಳಿಸುವಂತೆ ಸದಸ್ಯ ಹರೀಶ್‍ನಾಯ್ಕ್ ಆಗ್ರಪಡಿಸಿದರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಗಂಗರಂಗಯ್ಯ ಪಶು ಇಲಾಖೆ ಜಾಗದಲ್ಲಿ ಮಧ್ಯ ಮಾರಾಟ ಮಾಡುತ್ತಿಲ್ಲ, ಹರೀಶ್‍ನಾಯ್ಕ್ ಆರೋಪ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ತಿರುಗೇಟು ನೀಡಿದರು, ಈ ಮಧ್ಯೆ ಇಬ್ಬರು ಸದಸ್ಯ ನಡುವೆ ವಾಗ್ವಾದ ನಡೆದು ಸಭೆ ಗೊಂದಲದಲ್ಲಿ ಮುಳುಗಿತು.

ಒತ್ತಡ :

     600 ಕಿ.ಮೀ ದೂರದಿಂದ ಬಂದ ತಾಲೂಕಿನಲ್ಲಿ ಕೆಲಸ ಮಾಡುತ್ತಿದ್ದೇನೆ ಆದರೆ ಆರು ಕಿ.ಮೀ ದೂರದ ಪಶು ಆಸ್ಪತ್ರೆಗೆ ಅಧಿಕಾರಿಯೊಬ್ಬರನ್ನು ಡೆಪಟೇಷನ್ ಮೇಲೆ ಕಳಿಸಿದರೆ, ಡೆಪಟೇಷನ್ ವಜಾ ಮಾಡಿ ಎಂದು ಬಲಾಢ್ಯ ರಾಜಕಾರಣಿಗಳಿಂದ ಒತ್ತಡ ಹಾಕಿಸುತ್ತಿದ್ದಾರೆ, ಹೀಗಾದರೇ ಕೆಲಸ ಮಾಡಿಸುವುದ್ದಾದರು ಹೇಗೆ ಎಂದು ಪಶು ಇಲಾಖೆ ಸಹಾಯ ನಿರ್ದೇಶಕ ಡಾ.ಶಶಿಕಾಂತ್‍ಬೂದಾಳ್ ಸಭೆ ಮುಂದೆ ತಮ್ಮ ನೋವನ್ನ ಹೇಳಿಕೊಂಡರು.

ದುರುಪಯೋಗ :

    ಹೆಚ್‍ವಿಡಿಎಸ್ ಯೋಜನೆಯನ್ನು ಬೆಸ್ಕಾಂ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ದುರುಪಯೋಗ ಪಡಿಸಿಕೊಂಡಿದ್ದಾರೆ, ಸೀನಿಯಾರ್ಟಿ ಆದಾರದ ಮೇಲೆ ಟ್ರಾನ್ಸ್‍ಫರಂಗಳನ್ನು ನೀಡುತ್ತಿಲ್ಲ ಯಾರು ಹಣ ನೀಡುತ್ತಾರೋ ಅವರಿಗೆ ವಿದ್ಯುತ್ ಪರಿವರ್ತಕವನ್ನು ಅಳವಡಿಸುತ್ತಿದ್ದಾರೆ, ಇದರಿಂದ ಸಾಮಾನ್ಯ ರೈತರಿಗೆ ಅನ್ಯಾಯವಾಗುತ್ತಿದೆ ಇದನ್ನು ಸರಿಪಡಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಅಧ್ಯಕ್ಷರು ಸೂಚಿದರು,
ಸಭೆಯಲ್ಲಿ ತಾ.ಪಂ ಉಪಾಧ್ಯಕ್ಷೆ ಎನ್.ವರಲಕ್ಷ್ಮಿ, ಸದಸ್ಯರಾದ ತ್ರಿಪುರ ಸುಂದರಿ, ಕೆಂಪರಾಜು ಶ್ರೀ, ಅಲ್ಲಾಬಕಾಶ್, ಕುಮಾರ್, ಕೃಷ್ಣ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು,

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link